ಇಡೀ ರಾಜ್ಯದಲ್ಲಿ ಎಲ್ಲೆಲ್ಲೂ ಪ್ರಜ್ವಲ್ ರೇವಣ್ಣ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆ. ಪ್ರಜ್ವಲ್ ಪರ ಒಬ್ಬನೇ ಒಬ್ಬ ಶಾಸಕ, ನಾಯಕ, ಅವರದ್ದೇ ಪಕ್ಷದ ಕಾರ್ಯಕರ್ತ ನಿಲ್ಲುತ್ತಿಲ್ಲ. ಚಿಕ್ಕಪ್ಪನೂ ದೂರ ದೂರ. ಅವರ ಫ್ಯಾಮಿಲಿಯೇ ಬೇರೆ.. ನಮ್ ಫ್ಯಾಮಿಲಿಯೇ ಬೇರೆ ಅಂತಿರೋವಾಗ.. ಪ್ರಜ್ವಲ್ ರೇವಣ್ಣ ಪರ ಸಂತ್ರಸ್ತೆಯ ಕುಟುಂಬದವರು ದನಿ ಎತ್ತಿರುವುದು ವಿಶೇಷ.
ದೂರುದಾರ ಮಹಿಳೆಯ ಅತ್ತೆ ಗೌರಮ್ಮ ಹಾಗೂ ದೂರುದಾರ ಮಹಿಳೆಗೆ ಪರಿತರಿರುವ ಶಿಲ್ಪ, ವೇದ, ಜ್ಯೋತಿ ಹಾಸನದಲ್ಲಿ ಸುದ್ದಿಗೋಷ್ಠಿ ಮಾಡಿ ಭವಾನಿ ಅಮ್ಮ, ರೇವಣ್ಣ ಸಾಹೇಬ್ರು ದೇವ್ರು. ಸೊಸೆನೇ ಸರಿ ಇಲ್ಲ ಎಂದಿದ್ದಾರೆ.
ಅವರ ಮಾತುಗಳನ್ನು ನೋಡಿದರೆ.. ಸಂತ್ರಸ್ತೆಯೇ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸುವುದಕ್ಕೆ ಅವರ ಹೆಸರಿಗೆ ಕಳಂಕ ತರುವುದಕ್ಕೆ ಯತ್ನಿಸಿದ್ದಳೇನೋ ಎಂಬಂತಿದೆ. ಗೌಡರ ಮನೆಯಲ್ಲಿ ಕಷ್ಟವೆಂದು ಹೋದವರಿಗೆ ಸಹಾಯ ಮಾಡಿದ್ದಾರೆ. ಗೌಡರ ಮನೆಯವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದಿರುವ ಗೌರಮ್ಮ, ರೇವಣ್ಣ ಸಾಹೇಬರ ಮೇಲೆ ದೂರು ನೀಡಿದ ಮಹಿಳೆ ಕಳೆದ 5 ವರ್ಷದ ಹಿಂದೆಯೇ ಅವರ ಮನೆಯನ್ನು ಬಿಟ್ಟು ಹೋಗಿದ್ದಾಳೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ಆಗಿದ್ದರೆ ಕಳೆದ 5 ವರ್ಷಗಳ ಹಿಂದೆಯೇ ದೂರು ನೀಡಬೇಕಿತ್ತು. ಅದನ್ನು ಬಿಟ್ಟು ಈಗ ದೂರು ಕೊಟ್ಟಿರುವುದರ ಹಿಂದಿನ ಉದ್ದೇಶ ಬೇರೆಯೇ ಇದೆ ಎಂದು ದೂರುದಾರ ಮಹಿಳೆ ವಿರುದ್ಧ ಆರೋಪ ಮಾಡಿದ್ದಾರೆ.
ನಮ್ಮ ಸಾಹೇಬರ ಮನೆಯಲ್ಲಿ ದೌರ್ಜನ್ಯ ನಡೆದಿದೆ ಎಂದಾರೆ ಕಳೆದ 5 ವರ್ಷದಿಂದ ಮಹಿಳೆ ಏಕೆ ದೂರು ನೀಡಿಲ್ಲ. ಈಗ ಏಕೆ ಬಂದಿದ್ದಾರೆ. ಇಲ್ಲಿ ದೂರು ನೀಡಿರುವವಳದ್ದೇ ತಪ್ಪು ನಡೆದಿದೆ. ಗೌಡರ ಮನೆಗೆ ಕಪ್ಪು ಚುಕ್ಕಿ ತರಬೇಕು ಅಂತ ಈ ರೀತಿ ಮಾಡಿದ್ದಾಳೆ. ಇಷ್ಟು ವರ್ಷ ಯಾವುದೇ ಕಪ್ಪು ಚುಕ್ಕಿ ಇಲ್ಲದೇ ರಾಜಕೀಯ ಮಾಡಿದ್ದಾರೆ ಎಂದಿರುವ ಸಂತ್ರಸ್ತೆಯ ಕುಟುಂಬಸ್ಥರಿಗೆ ಭವಾನಿ ಅಮ್ಮ, ರೇವಣ್ಣ ಸಾಹೇಬ್ರೆ ದೇವರು.
ನಾವು ಶ್ರೀರಾಮಪುರದಲ್ಲಿ ಜೊತೆ ಒಟ್ಟಿಗೆ ಇದ್ವಿ. ಚುನಾವಣೆ ಸಮಯದಲ್ಲಿ ಗೌಡರ ಮನೆಗೆ ಕಪ್ಪು ಚುಕ್ಕೆ ತರಲು ಈ ಕೆಲಸ ಮಾಡಿದ್ದಾರೆ. ಹೆದರಿಸಿ ಇವರನ್ನ ಕಳೆದುಕೊಂಡು ಹೋಗಿ ದೂರು ಕೊಡಿಸಿದ್ದಾರೆ. ಅಶ್ಲೀಲ ವಿಡಿಯೋ ಸಂಬಂಧ ದೂರು ನೀಡಿರುವ ಮಹಿಳೆ ಸರಿಯಿಲ್ಲ. ತುಂಬಾ ಸಾಲ ಮಾಡಿಕೊಂಡಿದ್ದರು, ಜಮೀನು ಸಹ ಮಾರಾಟ ಮಾಡಿದ್ದರು ಎಂದಿರುವ ಗೌರಮ್ಮ ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡುತ್ತೇವೆ ಗೌಡರ ಕುಟುಂಬ ತಪ್ಪು ಮಾಡಿಲ್ಲ. ನಮ್ಮ ಕಷ್ಟ-ಸುಖವನ್ನ ಭವಾನಿ ಅಮ್ಮಾ ನೋಡಿದ್ದಾರೆ. ದೂರುದಾರರ ನಡೆತೆ ಕೂಡ ಸರಿ ಇರಲಿಲ್ಲ. ಅವರಿಗೆ ಯಾವ ದೌರ್ಜನ್ಯ ಆಗಿಲ್ಲ ಎಂದು ಹೇಳಿದ್ಧಾರೆ.
ಮೇಡಂ, ಸಾಹೇಬ್ರು ನಮಗೆ ದೇವರಿದ್ದಂತೆ. ವಿಡಿಯೋ ಸತ್ಯದ ಬಗ್ಗೆ ಪ್ರಶ್ನಿಸಿದ ದೂರುದಾರರ ವಿರುದ್ಧದವರು ಟೆಕ್ನಾಲಜಿ ಬಳಸಿ ಏನು ಬೇಕಾದ್ರು ಮಾಡಿರಬಹುದು ಎಂದಿದ್ದರೆ.. ಅತ್ತ ರೇವಣ್ಣ ಇದೆಲ್ಲ ನಾಲ್ಕೈದು ವರ್ಷದ ಹಿಂದಿನ ಪ್ರಕರಣ ಎಂದಿದ್ದಾರೆ. ಅಂದರೆ.. ನಾಲ್ಕೈದು ವರ್ಷದ ಹಿಂದೆ.. ಅಂದರೆ.. ಸಂಸದರಾಗುವುದಕ್ಕಿಂತ ಮೊದಲು ಕೂಡಾ ಹೀಗೆಯೇ ಇತ್ತಾ ಎನ್ನುವುದು ರೇವಣ್ಣನವರಿಗೆ ಜನ ಕೇಳುತ್ತಿರುವ ಪ್ರಶ್ನೆ.



