ಬಹುತೇಕ ಸಿನಿಮಾಗಳಲ್ಲಿ ಆರಂಭದಲ್ಲಿ ಒಂದು ಸೂಚನೆ ಬರುತ್ತದೆ. ಈ ಚಿತ್ರದಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು, ಕಥೆ ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಗೆ ಸಂಬಂಧಪಟ್ಟಿದ್ದಲ್ಲ ಎಂದು ಹಾಕುತ್ತಾರೆ. ಗೊತ್ತಿದೆ ತಾನೇ.. ಎಲ್ಲೋ.. ಅಲ್ಲೊಬ್ಬ ಉಪೇಂದ್ರರಂತ ತಿಕ್ಕಲು ನಿರ್ದೇಶಕರು ಈ ಚಿತ್ರದಲ್ಲಿ ಬರುವ ಕಥೆ, ಪಾತ್ರ, ಸನ್ನಿವೇಶ ಯಾರಾದರೂ ಒಬ್ಬರಿಗೆ ಕನೆಕ್ಟ್ ಆಗುತ್ತದೆ. ಹಾಗೇನಾದರೂ ಕನೆಕ್ಟ್ ಆದರೆ ನಾವು ಜವಾಬ್ದಾರರಲ್ಲ ಎಂದು ಹಾಕುತ್ತಾರೆ. ಆದರೆ.. ಕಥೆ ಕಾಲ್ಪನಿಕವಾಗಿಯೇ ಇರುತ್ತದೆ. ಆದರೆ.. ಇಲ್ಲಿ ದೂತ ವಿಡಿಯೋದಲ್ಲಿ ಸಮೀರ ಹೇಳಿರೋ ಕಥೆ ಇದ್ಯಲ್ಲ.. ಅದು ಸತ್ಯದ ತಲೆ ಮೇಲೆ ಹೊಡೆದಂತೆ ಇದೆ. ಆದರೆ.. ಬಹುತೇಕರು ಆ ವಿಡಿಯೋ ಶುರುವಾಗುವ ಹೊತ್ತಿನಲ್ಲಿ ಹಾಕಿರುವ disclaimer ನೋಡಿದ್ದರೋ.. ಇಲ್ಲವೋ.. ಗೊತ್ತಿಲ್ಲ. ಆದರೆ.. ಸದ್ಯಕ್ಕೆ ಸಮೀರನನ್ನು ರಕ್ಷಿಸುತ್ತಿರುವುದೇ ಆ disclaimer.
ಎಂಡಿ ಸಮೀರನನ್ನು ರಕ್ಷಿಸ್ತಿರೋದೇ ದೂತ ಡಿಸ್ಕ್ಲೇಮರ್. ಎಸ್ಐಟಿ ಎದುರು ಎರಡು ದಿನ ವಿಚಾರಣೆಗೆ ಹಾಜರಾಗಿರುವ ಸಮೀರ್ ಎಂಡಿ, ನೂರಾರು ಪ್ರಶ್ನೆಗಳಿಗೆ ಉತ್ತರಿಸಿದ್ಧಾನೆ. ಸಾವಿರಾರು ಪುಟಗಳ ದಾಖಲೆ ಮುಂದಿಟ್ಟಿದ್ದಾನೆ. ಅರೆಸ್ಟ್ ಆಗಬಹುದು ಎನ್ನುವ ಭಯದಲ್ಲಿ ನಿರೀಕ್ಷಣಾ ಜಾಮೀನು ಕೂಡಾ ಪಡೆದುಕೊಂಡಿದ್ದಾನೆ. ಆದರೆ, ಆತನ ಅತಿ ದೊಡ್ಡ ರಕ್ಷಾಕವಚವಾಗಿರುವುದು ಏನು ಗೊತ್ತೇ..? Disclaimer..!̤ ನೀವು ಈಗಲೂ ಕೂಡಾ ದೂತ ಯೂಟ್ಯೂಬ್ ಚಾನೆಲ್‌ಗೆ ಹೋಗಿ ನೋಡಿದರೆ. ಒಂದು Disclaimer ಕಾಣಿಸುತ್ತದೆ. ಪ್ರಕರಣದ ಕೇಂದ್ರ ಬಿಂದು, ಕೆಲವೇ ದಿನಗಳಲ್ಲಿ ಕೋಟ್ಯಂತರ ಜನ ವೀಕ್ಷಣೆ ಮಾಡಿದರು ಎಂದು ನಂಬಿಸಲಾದ Who are serial killrs of ಧರ್ಮಸ್ಥಳ ಎಂಬ ವಿಡಿಯೋದಲ್ಲಿಯೂ ಈ Disclaimer ಇದೆ. ಅಷ್ಟೇ ಅಲ್ಲ, Who are serial killrs of ಧರ್ಮಸ್ಥಳ ಎಂಬ head lineನಲ್ಲಿ killrs ಎಂಬ ಪದದಲ್ಲಿ e ಅಕ್ಷರ ಇಲ್ಲ. ಹಾಗಾಗಿ ಅದು killrs ಉಚ್ಚಾರಣೆ ಸರಿಯಾಗುತ್ತದೆಯೇ ಹೊರತು.. killers ಆಗುವುದಿಲ್ಲ.
Disclaimer ಪ್ರಕಾರ, ಸಮೀರ್ ಯಾವುದೇ ತನಿಖೆ ಮಾಡಿಲ್ಲ. ಸಂತ್ರಸ್ತರನ್ನೂ ಮಾತನಾಡಿಸಿಲ್ಲ. ಪ್ರತ್ಯಕ್ಷದರ್ಶಿಗಳನ್ನು ಸಂಪರ್ಕಿಸಿಲ್ಲ. ಪೊಲೀಸ್, ಲಾಯರ್ ಸೇರಿದಂತೆ ಯಾವುದೇ ವೃತ್ತಿಪರರ ಜೊತೆ ಮಾತನಾಡಿಲ್ಲ. ಕೇಸಿಗೆ ಸಂಬಂಧಪಟ್ಟ ಅಧಿಕಾರಿಗಳು, ಸಾಕ್ಷಿಗಳು, ವಿಚಾರಣೆ ಎದುರಿಸಿದವರನ್ನೂ ಮಾತನಾಡಿಸಿಲ್ಲ. ಕೇವಲ ಸ್ಥಳೀಯ ವ್ಯಕ್ತಿಗಳಿಂದ ಕೇಳಿದ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನಷ್ಟೇ ಇಟ್ಟುಕೊಂಡು ಡಾಕ್ಯುಮೆಂಟರಿ ಮಾಡಿದ್ದಾನೆ.
ವಿಚಾರಣೆಗೆ ಕರೆದಾಗ ಪೊಲೀಸರ ಎದುರು ಹೇಳಿರುವುದು ಇದೇ ಮಾತು. ನಾನೆಲ್ಲಿ ತನಿಖೆ ಮಾಡಿ ವರದಿ ಮಾಡಿದ್ದೇನೆ ಎಂದು ಹೇಳಿದ್ದೆ. ಮೊದಲೇ ಡಿಸ್‌ಕ್ಲೇಮರ್ ಹಾಕಿದ್ದೆನಲ್ಲ ಎಂದು ಹೇಳಿದ್ದಾನೆ. ಸಮೀರ ಠಾಣೆಗೆ ತಂದಿರುವ ಸಾವಿರಾರು ಪುಟಗಳ ದಾಖಲೆಯಲ್ಲಿ ಎಲ್ಲೆಲ್ಲಿಂದ ಯಾವ್ಯಾವ ವಿಡಿಯೋ ತೆಗೆದುಕೊಂಡಿದ್ದೇನೆ ಎಂಬ ಲಿಂಕುಗಳಷ್ಟೇ ಇವೆ. ದೂತ ಯೂಟ್ಯೂಬ್ ಎಂಡಿ ಸಮೀರ್ ಆರಂಭದಲ್ಲೇ ಈ ಡಿಸ್ಕ್ಲೇಮರ್ ತೋರಿಸಿ ಬಚಾವ್ ಆಗಬಹುದು ಎಂದುಕೊಂಡಿದ್ಧಾನೆ. ಹಾಗೆಯೇ ಪೊಲೀಸರ ಎದುರು ಉತ್ತರವನ್ನೂ ಕೊಟ್ಟಿದ್ಧಾನೆ. ಈ ರೀತಿ Disclaimer ತೋರಿಸಿ, ಆರೋಪಗಳಿಂದ ಬಚಾವ್ ಆಗುವುದಕ್ಕೆ ಸಾಧ್ಯ ಇದೆಯೇ.. ಕಾನೂನು ತಜ್ಞರು ಈ ಬಗ್ಗೆ ಮಾಹಿತಿ ನೀಡಬೇಕಿದೆ. ಆದರೆ, ಸದ್ಯಕ್ಕೆ ಎಂಡಿ ಸಮೀರ್‌ನನ್ನು ರಕ್ಷಿಸುತ್ತಿರುವುದು Disclaimer ಎಂಬುದಂತೂ ನಿಜ.
PLAN A, PLAN B, PLAN C : ಇನ್ನು ಪ್ರಕರಣದಲ್ಲಿ ತಿಮರೋಡಿ ಗ್ಯಾಂಗ್ ಮೂರು ಮಾದರಿ ಪ್ಲಾನ್ ರೆಡಿಮಾಡಿಕೊಂಡಿತ್ತು. ಎಸ್‌ಐಟಿ ತನಿಖೆಯ ಮೂಲಗಳ ಪ್ರಕಾರ PLAN A ಎಂದರೆ.. ಚಿನ್ನಯ್ಯ ತೋರಿಸಿದ್ದ ಕಡೆ ಎಲ್ಲ ಗುಂಡಿ ತೋಡಿಸಿ ಹೆಣಗಳನ್ನು ಹುಡುಕಿಸುವುದು. ಗುಂಡಿಗಳನ್ನು ಅಗೆಯುವುದು. ಅಷ್ಟೇ.
PLAN B ಪ್ರಕಾರ, ಚಿನ್ನಯ್ಯ ಅರೆಸ್ಟ್ ಆದರೆ, ಮಾಸ್ಕ್ ತೆಗಿಸಿ ಸಂದರ್ಶನ ಮಾಡಿಸುವುದು. ಈಗಾಗಲೇ ಹಲವು ಯೂಟ್ಯೂಬ್ ಚಾನೆಲ್ಲುಗಳಲ್ಲಿ ಚಿನ್ನಯ್ಯನ ಮಾಸ್ಕ್ಕ ತೆಗೆದು ಇಂಟರ್‌ವ್ಯೂ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಬಾರದು.
ಇನ್ನು PLAN C. ಅಕಸ್ಮಾತ್ ಚಿನ್ನಯ್ಯ ತಪ್ಪಿಸಿಕೊಂಡು ಪರಾರಿಯಾದರೆ, ಎಸ್ಕೇಪ್ ಆದರೆ, ಓಡಿ ಹೋದರೆ ಆಗ ಬೆದರಿಕೆ ಆರೋಪದ ವಿಡಿಯೋ ಬಿಡುವುದು. ಅಂದರೆ ಈಗಾಗಲೇ ಹೇಗಿದ್ದರೂ ಹೆಗ್ಗಡೆ, ಧರ್ಮಸ್ಥಳದ ಕೆಲವು ಕುಟುಂಬಗಳು, ಪೊಲೀಸ್ ಅಧಿಕಾರಿಗಳು ಹಾಗೂ ಧರ್ಮಸ್ಥಳದ ಪರ ನಿಂತಿರುವ ಹೋರಾಟಗಾರರ ಹೆಸರು ಹೇಳಿಸಿ ವಿಡಿಯೋ ಮಾಡುವುದು. ಚಿನ್ನಯ್ಯ ಪರಾರಿಯಾದರೆ ಮಾತ್ರ ಆ ವಿಡಿಯೋ ರಿಲೀಸ್ ಮಾಡಿಸುವುದು. ಒಟ್ಟಿನಲ್ಲಿ ಹೋರಾಟ ಮುಗಿಯುವಂತಿಲ್ಲ ಎನ್ನುವುದು ಪ್ಲಾನ್.



