ಪ್ರಧಾನಿ ನರೇಂದ್ರ ಮೋದಿ PM Narendra modi ಅವರ ಪರವಾಗಿ ಅಹಿಂಸಾ ಚೇತನ್ Ahimsa Chethan ಮಾತನಾಡಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ರಾಜ್ಯ ಸಚಿವ ಸಂತೋಷ್ ಲಾಡ್ Santhosh lad ಅವರಿಗೆ ತಿರುಗೇಟು ಕೊಟ್ಟಿದ್ಧಾರೆ. ಮೋದಿಯವರನ್ನು ಟೀಕೆ ಮಾಡುವುದಕ್ಕೆ ಪದೇ ಪದೇ ಸುಳ್ಳು ಹೇಳಬೇಡಿ ಎಂದಿದ್ದಾರೆ ಅಹಿಂಸಾ ಚೇತನ್. ಚೇತನ್ ಅವರು ಇಷ್ಟೂ ಹೇಳಿಕೆ ಕೊಟ್ಟಿರುವುದು ಗೋಮಾಂಸ ರಫ್ತು ವಿಚಾರವಾಗಿ ಎನ್ನುವುದು ವಿಶೇಷ.
ಸಚಿವ ಸಂತೋಷ್ ಲಾಡ್ ಹೇಳಿದ್ದಾದರೂ ಏನು?
ಭಾರತ ದೇಶ ಗೋಮಾಂಸವನ್ನು ರಫ್ತು ಮಾಡುವುದರಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರ ಹಾಗೂ ಕರ್ನಾಟಕ ಗೋಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿವೆ. ಇದರ ಶ್ರೇಯಸ್ಸು/ ಕ್ರೆಡಿಟ್ ‘ಮೋದಿ ಅವರಿಗೆ ಸಲ್ಲಬೇಕು ಎಂದಿದ್ದರು.
ಅಹಿಂಸಾ ಚೇತನ್ ಹೇಳಿದ್ದೇನು?
ಗೋಮಾಂಸ ರಫ್ತಿನಲ್ಲಿ Beef export ಭಾರತವು ವಿಶ್ವದ 2 ನೇ ಅತಿದೊಡ್ಡ ಸ್ಥಾನ ಪಡೆದಿದೆ ಇದರ ಶ್ರೇಯಸ್ಸು/ ಕ್ರೆಡಿಟ್ ‘ಮೋದಿ ಅವರಿಗೆ ಸಲ್ಲಬೇಕು’ ಎಂದು ಕಾಂಗ್ರೆಸ್‌ನ ಸಂತೋಷ್ ಲಾಡ್ ಹೇಳಿದ್ದಾರೆ. ಇದೊಂದು ಸುಳ್ಳು ಆರೋಪ. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಗ್ರಾಫ್ ಯುಪಿಎ 2ನೇ ಅವಧಿಯ ಆಡಳಿತದಲ್ಲಿ 2009 ರಿಂದ 2014 ರ ವರೆಗೆ ವಾರ್ಷಿಕವಾಗಿ ಶೇ.30ರಷ್ಟು ಗೋಮಾಂಸದ ರಫ್ತು ಹೇಗೆ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ.
ಇನ್ನು 2014 ರಿಂದ 2019 ರವರೆಗೆ ಬಿಜೆಪಿ ಆಡಳಿತದ ಮೊದಲ 5 ವರ್ಷಗಳಲ್ಲಿ, ಗೋಮಾಂಸ ರಫ್ತು ಸ್ಥಿರವಾಗಿದೆ ಮತ್ತು ಕಡಿಮೆಯಾಗಿದೆ. ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ 2ನೇ ಸ್ಥಾನ ಪಡೆದಿರುವುದು ಇದರ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು ಹೊರತು ನರೇಂದ್ರ ಮೋದಿಯವರಿಗೆ ಅಲ್ಲ. ಸಂತೋಷ್ ಲಾಡ್ ಅವರಂತಹ ಕಾಂಗ್ರೆಸ್ ನಾಯಕರು ಅಜ್ಞಾನಿಗಳಾಗಿದ್ದು, ಮೋದಿಯವರ ತಪ್ಪು ಹುಡುಕಲು ಅವರುಗಳು ಹೆಚ್ಚಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ದಾಖಲೆಯನ್ನೂ ಲಗತ್ತಿಸಿದ್ದಾರೆ.
INC’s Santosh Lad says ‘Modi deserves credit’ fr India being world’s 2nd biggest beef exporter
False
APEDA graph shows beef exports upped 30% yearly frm 09-14 (UPA II) & have stabilisd/reduced since (BJP)
MMS — not Modi — deserves credit for India’s beef standing
INC netas like Lad r ignorant & liars
ಗೋಮಾಂಸ ರಫ್ತು ರಿಯಾಲಿಟಿ ಏನು?
ಭಾರತ ಬೀಫ್ ಎಕ್ಸ್ʻಪೋರ್ಟ್‌ನಲ್ಲಿ ನಂ.1 ಎನ್ನುವ ಅಂಕಿ ಅಂಶಗಳೇ ಎಲ್ಲೆಲ್ಲೂ ರಾರಾಜಿಸುತ್ತಿವೆ. ಆದರೆ ವಾಸ್ತವ ಏನೆಂದರೆ ಭಾರತ ಹೆಚ್ಚು ರಫ್ತು ಮಾಡುತ್ತಿರುವುದು ಎಮ್ಮೆ/ಕೋಣದ ಮಾಂಸವನ್ನು buffellow meat. ಎಮ್ಮೆ ಕೋಣದ ಮಾಂಸಕ್ಕೂ ಬೀಫ್ ಎಂದೇ ಬಳಸುವುದರಿಂದ ಈ ಅವಾಂತರ ಸೃಷ್ಟಿಯಾಗಿದೆ ಎನ್ನುವುದು ಹಲವು ಫ್ಯಾಕ್ಟ್ ಚೆಕ್ಕರ್ಸ್ ವಾದ. ಭಾರತ ಗೋಮಾಂಸ ರಫ್ತು ಮಾಡುತ್ತಿಲ್ಲ. ಬದಲಿಗೆ ಎಮ್ಮೆ/ಕೋಣದ ಮಾಂಸ ರಫ್ತು ಮಾಡುತ್ತಿದೆ. ಈ ವರ್ಷವೂ ಕೂಡಾ ಸುಮಾರು 20 ಲಕ್ಷ ಟನ್ ಎಮ್ಮೆ ಮಾಂಸ ರಪ್ತು ಮಾಡಲಾಗಿದ್ದು, ಹೆಚ್ಚೂ ಕಡಿಮೆ 26 ಸಾವಿರ ಕೋಟಿ ಬ್ಯುಸಿನೆಸ್ ಆಗಿದೆ. ಭಾರತದಲ್ಲಿ ದೊರೆಯುವ ಎಮ್ಮೆ/ಕೋಣದ ಮಾಂಸ ಬೇರೆ ದೇಶಗಳ ಮಾಂಸಗಳಿಗೆ ಹೋಲಿಸಿದರೆ ಮೃದುವಾಗಿರುತ್ತದೆ ಎಂಬ ಕಾರಣಕ್ಕೆ ಭಾರತದ ಬೀಫ್ (ಗೋವಿನ ಮಾಂಸ ಅಲ್ಲ, ಎಮ್ಮೆ/ದನದ ಮಾಂಸ)ಗೆ ತುಂಬಾ ಬೇಡಿಕೆ ಇದೆ. ಅದೂ ಕೂಡಾ ಸೌದಿ, ಮದ್ಯಪ್ರಾಚ್ಯ ದೇಶಗಳಲ್ಲಿ.



