ರಿಹಬ್ ಇಂಡಿಯಾ ಫೌಂಡೇಶನ್ (ಆರ್ ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ)
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ)
ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್ ಸಿಎಚ್ ಆರ್ ಒ)
ನ್ಯಾಷನಲ್ ವುಮೆನ್ಸ್ ಫ್ರಂಟ್
ಜೂನಿಯರ್ ಫ್ರಂಟ್
ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು
ರಿಹ್ಯಾಬ್ ಫೌಂಡೇಶನ್ ಕೇರಳವನ್ನು ನಿಷೇಧಿಸಲಾಗಿದೆ.
ಈ ಸಂಘಟನೆ ನಿಷೇಧಿತ ಸಂಘಟನೆಗಳಾದ ಸಿಮಿ (ಸ್ಟೂಡೆಂಟ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ), ಬಾಂಗ್ಲಾದೇಶದ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾ (ಜೆಎಮ್‍ಬಿ) ಹಾಗೂ ಐಸಿಸ್ ಜೊತೆ ಸಂಪರ್ಕ ಹೊಂದಿದ್ದವು ಎಂಬ ಆಧಾರದ ಮೇಲೆ ಈ ನಿಷೇಧ ಹೇರಲಾಗಿದೆ. ಈ ನಿಷೇಧ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.

ಇತ್ತೀಚೆಗೆ ಎರಡು ಬಾರಿ ದೇಶಾದ್ಯಂತ ಪಿಎಫ್‍ಐ ಸಂಘಟನೆ ಕಚೇರಿ, ಸದಸ್ಯರು, ಮುಖಂಡರ ಮೇಲೆ ದಾಳಿ ನಡೆದಿತ್ತು. ಸುಮಾರು 6 ತಿಂಗಳು ಎಲ್ಲವನ್ನೂ ಫಾಲೋ ಮಾಡಿಯೇ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿಯೇ ಈ ದಾಳಿ ನಡೆಸಲಾಗಿತ್ತು.
ಸಿಎಎ-ಎನ್‍ಆರ್‍ಸಿ ವಿರೋಧಿ ಹೋರಾಟದಲ್ಲಿ ಪಿಎಫ್‍ಐ ಪ್ರಮುಖ ಪಾತ್ರ ವಹಿಸಿತ್ತು. ಇತ್ತೀಚೆಗೆ ಪಾಟ್ನಾ ಕೋರ್ಟ್ ರಿಮಾಂಡ್‍ಗೆ ಸಲ್ಲಿಸಲಾದ ದಾಖಲೆಯಲ್ಲಿ ಪಿಎಫ್‍ಐಗೆ 120.5 ಕೋಟಿ ಹಣ ಸಂದಾಯವಾಗಿದ್ದು, ಎಲ್ಲವೂ ಅನುಮಾನಾಸ್ಪದ ಮೂಲಗಳಿಂದ ಎಂಬ ಉಲ್ಲೇಖ ಹೊರಬಂದಿತ್ತು.
ಇಡಿಯವರು ಸಲ್ಲಿಸಿದ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ನಮೂದು ತಪ್ಪಿಸಲು 50 ಸಾವಿರಕ್ಕಿಂತ ಕಡಿಮೆ ಹಣವನ್ನು ಪ್ರತ್ಯೇಕವಾಗಿ ಅಕೌಂಟಿಗೆ ಹಾಕಲಾಗಿತ್ತು. ಆ ಹಣ ಸಂದಾಯವಾಗಿದ್ದು ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ. ಆ ಹಣ ಡ್ರಾ ಆಗಿದ್ದೂ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ. ಆ ಹಣ ಡ್ರಾ ಆದ ಬೆನ್ನಲ್ಲೇ ಆ ಪ್ರದೇಶದಲ್ಲಿ ಸಿಎಎ-ಎನ್‍ಆರ್‍ಸಿ ವಿರೋಧ ಹೋರಾಟಗಳು ಭುಗಿಲೆದ್ದಿದ್ದವು ಎಂದು ವರದಿಯಲ್ಲಿ ಹೇಳಲಾಗಿತ್ತು.
ಇನ್ನು ಹಿಜಾಬ್ ಕುರಿತಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ತಾನು ವಿವಾದದ ಹಿಂದಿಲ್ಲ. ಮುಂದೆಯೇ ಇದ್ದೇವೆ ಎಂದು ಬಹಿರಂಗವಾಗಿ ಹೇಳಿಕೊಂಡಿತ್ತು. ಹಿಜಾಬ್ ವಿವಾದ ಮತ್ತು ತದನಂತರ ಅದಕ್ಕೆ ಕೊಂಡಿಯಾಗಿ ನಡೆದ ಬೆಳವಣಿಗೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರ ತಂದಿದ್ದವು.
ಇತ್ತೀಚೆಗೆ ದಾಳಿಗೆ ಮುನ್ನ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರರಿದ್ದರು. ಆಗ ಕೇಳಲಾಗಿದ್ದ ಪ್ರಶ್ನೆ ಪಿಎಫ್‍ಐನ್ನು ನಿಷೇಧಿಸಬೇಕಾ? ಎನ್ನುವುದು. ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿಷೇಧಿಸುವುದು ಬೇಡ ಎಂಬ ರೀತಿಯಲ್ಲಿ ಅಲ್ಲ. ಬದಲಿಗೆ ಪಿಎಫ್‍ಐನ್ನು ನಿಷಿಧಿಸುವುದಕ್ಕಿಂತ ಆ ಸಂಘಟನೆಯನ್ನು ಹಾಗೆಯೇ ನಡೆಯಲು ಬಿಟ್ಟರೆ ನೆಟ್‍ವರ್ಕ್ ಟ್ರ್ಯಾಕ್ ಮಾಡಲು ಸುಲಭ ಎಂಬ ವಾದವು ಕೇಳಿ ಬಂದಿತ್ತು ಎಂಬ ವಾದವೂ ಇದೆ. ಆದರೆ ನಿಷೇಧ ಮಾಡುವುದರಿಂದ ಬಹುಸಂಖ್ಯಾತರಲ್ಲಿ ಭದ್ರತೆಯ ಭಾವನೆ ಮೂಡಿಸುವುದು ಸಾಧ್ಯವಿದೆ. ಇಲ್ಲದೇ ಹೋದರೆ ಆತಂಕಗೊಳ್ಳುವ ಸಾಧ್ಯತೆ ಹೆಚ್ಚು ಎಂಬ ಮತಕ್ಕೇ ಹೆಚ್ಚು ವೋಟುಗಳು ಬಿದ್ದ ಹಿನ್ನೆಲೆಯಲ್ಲಿ ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎನ್ನಲಾಗಿದೆ.
ನಿಷೇಧ ಮಾಡುವುದಕ್ಕೆ ಮೊದಲು ಸಂಶಯಾಸ್ಪದ ಇರುವವರನ್ನು ಬಂಧಿಸಿ ಎಚ್ಚರಿಕೆ ಕೊಟ್ಟು ಮುಚ್ಚಳಿಕೆ ಬರೆಸಿಕೊಂಡು ನಿಷೇಧ ಹೇರಲಾಗಿದೆ. ನಿನ್ನೆ ಅರೆಸ್ಟ್ ಆದವರು ಹಾಗೂ ವಶಕ್ಕೆ ತೆಗೆದುಕೊಂಡವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ ಅವರು ಹಾಗೂ ಅವರ ಕುಟುಂಬಸ್ಥರು ಮತ್ತೆ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಜಾಮೀನು ನೀಡಬೇಕು ಹಾಗೂ ಒಬ್ಬ ಸರ್ಕಾರಿ ಅಧಿಕಾರಿಯ ಶ್ಯೂರಿಟಿ ಕೂಡಾ ಇರಬೇಕು ಎಂಬ ನಿಯಮ ರೂಪಿಸಲಾಗಿದೆ.


