ಪಾರ್ವತಮ್ಮ ರಾಜ್`ಕುಮಾರ್ (Parvathamamma Rajkumar) ಕನ್ನಡ ಚಿತ್ರರಂಗದ ಹೆಮ್ಮೆ. ರಾಜ್`ಕುಮಾರ್ (Dr.Rajkumar) ಅವರ ಬಹುದೊಡ್ಡ ಕುಟುಂಬವನ್ನು ಒಂದು ನೆಲೆಗೆ ತಂದ ಪಾರ್ವತಮ್ಮ, ಆ ಹಾದಿಯಲ್ಲಿ ಕನ್ನಡ ಚಿತ್ರರಂಗಕ್ಕೂ ಮಾರ್ಗದರ್ಶಕರಾದರು. ಪಾರ್ವತಮ್ಮ (Parvathamamma Rajkumar) ಅಂತಹವರಿದ್ದ ಕಾರಣಕ್ಕೇ, ಡಾ.ರಾಜ್ (Dr.Rajkumar) ಎಂಬ ಕಲಾವಿದ, ಹಣಕಾಸಿನ ವ್ಯವಹಾರದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಬರಲಿಲ್ಲ. ಕುಟುಂಬದವರ ಬಗ್ಗೆಯೂ ಪ್ಲಾನ್ ಮಾಡುವ ಕಷ್ಟಕ್ಕೆ ಬೀಳಲಿಲ್ಲ. ಅದೆಲ್ಲಕ್ಕೂ ಹೆಚ್ಚಾಗಿ ಡಾ.ರಾಜ್ ಅವರಿಗೆ ಒಳ್ಳೆಯ ಕಥೆಗಳನ್ನು ಗುರುತಿಸುವ ಕೆಲಸವನ್ನೂ ಪಾರ್ವತಮ್ಮ ಮಾಡಿದರು.
ಬಿಡುವಾದಾಗಲೆಲ್ಲ ಕಾದಂಬರಿಗಳನ್ನು ಓದುತ್ತಿದ್ದ ಅವರಿಗೆ ಇದು ಒಳ್ಳೆಯ ಸಿನಿಮಾ ಆಗುತ್ತದೆ ಎಂಬುದು ಅದು ಹೇಗೋ ಗೊತ್ತಾಗುತ್ತಿತ್ತು. ಕಥೆಯನ್ನು ಜಡ್ಜ್ ಮಾಡುವುದರಲ್ಲಿ ಪಾರ್ವತಮ್ಮನವರನ್ನು ಮೀರಿಸುವ ಇನ್ನೊಬ್ಬ ವ್ಯಕ್ತಿ ಬರಲಿಲ್ಲ ಎಂದರೂ ಅತಿಶಯೋಕ್ತಿಯಲ್ಲ. ಪಾರ್ವತಮ್ಮ ಹಾಗಿದ್ದ ಕಾರಣಕ್ಕೇ ಎಲ್ಲೋ ಬೀದಿಯಲ್ಲಿ ಹಳೆ ಪೇಪರ್`ನವನಿಂದ ಸಿಕ್ಕ ಮಯೂರ ಎಂಬ ಕೃತಿ, ಕನ್ನಡದ ಹೆಮ್ಮೆಯ ಸಿನಿಮಾ ಆಯಿತು. ಈಗ ಅಶ್ವಿನಿ ಪುನೀತ್ ರಾಜ್`ಕುಮಾರ್ ಕೂಡಾ ಅದೇ ಹಾದಿಯಲ್ಲಿದ್ದಾರೆ.
ಪಾರ್ವತಮ್ಮ ಅವರು ವಜ್ರೇಶ್ವರಿ, ಪೂರ್ಣಿಮಾ ಮೂಲಕ ಮಾಡುತ್ತಿದ್ದ ಸಾಹಸವನ್ನೇ ಅವರ ಸೊಸೆ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar), ಪಿಆರ್ಕೆ ಪ್ರೊಡಕ್ಷನ್ಸ್ (PRK Productions) ಮೂಲಕ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸದ್ಯ ಈ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ‘ಆಚಾರ್ & ಕೋ’ (Achar & Co) ಸಿನಿಮಾವು ಉತ್ತಮ ಪ್ರದರ್ಶನ ಕಾಣುತ್ತಿದೆ. ಆ ಹಿನ್ನೆಲೆಯಲ್ಲಿ ಮಾತನಾಡಿರುವ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ‘ಆಚಾರ್ & ಕೋ ಸಿನಿಮಾದ ಕಥೆ ಕೇಳಿದಾಗ ನಮಗೆ ತುಂಬ ಇಷ್ಟವಾಗಿತ್ತು. ವಜ್ರೇಶ್ವರಿ ಬ್ಯಾನರ್ನಲ್ಲಿ ಅಮ್ಮ (ಪಾರ್ವತಮ್ಮ ರಾಜ್ಕುಮಾರ್) ಇಂತಹ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು. ಎಲ್ಲ ಕಡೆ ಹೌಸ್ಫುಲ್ ನಮ್ಮ ಸಿನಿಮಾ ಪ್ರದರ್ಶನ ಕಾಣುತ್ತಿದೆ ಜೊತೆಗೆ ಫ್ಯಾಮಿಲಿ ಆಡಿಯೆನ್ಸ್ ಕೂಡ ಬರ್ತಿದ್ದಾರೆ. ಇವತ್ತು ನಮಗೆ ತುಂಬ ಸಂತೋಷವಾಗುತ್ತಿದೆ’ ಎಂದು ಹೇಳಿದ್ದಾರೆ.
ಅಮ್ಮನ ಶಿಸ್ತೂ ಇರುತ್ತೆ.. ಅಪ್ಪು ಮಾದರಿ ಸ್ವಾತಂತ್ರ್ಯೂ ಇರುತ್ತೆ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್`ಕುಮಾರ್. ಅಮ್ಮ (ಪಾರ್ವತಮ್ಮ ರಾಜ್ಕುಮಾರ್), ಕಾದಂಬರಿ ಓದಬೇಕು, ಸ್ಫೂರ್ತಿ ಸಿಗತ್ತೆ ಅಂತ ಆಗಾಗ ಹೇಳುತ್ತಿದ್ದರು. ಅಪ್ಪಾಜಿ ಅವರ ಅನೇಕ ಸಿನಿಮಾಗಳನ್ನು ಅವರು ಹಾಗೇ ನಿರ್ಮಿಸಿದ್ದರು. ನಾನು ಕೂಡ ಕಥೆಗಳನ್ನು ಓದ್ತಿನಿ. ಅಮ್ಮ ಯಾವಾಗಲೂ ಪ್ರೊಡಕ್ಷನ್ ಬಜೆಟ್ ಹಿಡಿತದಲ್ಲಿ ಇಡಬೇಕು ಎಂದು ಹೇಳುತ್ತಿದ್ದರು. ಆದರೆ ಅಪ್ಪು (Dr.Puneeth Rajkumar) ಆ ರೀತಿ ಇರಲಿಲ್ಲ. ಫ್ರೀ ಬಿಡಬೇಕು, ಡೈರೆಕ್ಟರ್ಗೆ ಫ್ರೀಡಂ ಕೊಡಬೇಕು ಎನ್ನುತ್ತಿದ್ದರು. ಅವರಿಬ್ಬರ ಮಾತುಗಳನ್ನು ಸ್ಫೂರ್ತಿ ತೆಗೆದುಕೊಂಡು, ನಾನು ಈಗ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನನ್ನೊಂದಿಗೆ ಉತ್ತಮ ತಂಡ ಇದೆ’ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ (Dr. Puneeth Rajkumar) ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಕಾದಂಬರಿ ಆಧಾರಿತ ಸಿನಿಮಾ ಮಾಡಬೇಕು ಅಂತ ಆಸೆ ಇದೆ. ನನಗೆ ಎಲ್ಲ ಥರದ ಜಾನರ್ ಸಿನಿಮಾ ಮಾಡಬೇಕು ಎಂಬ ಪ್ಲ್ಯಾನ್ ಇದೆ ಎಂದಿರುವ ಅಶ್ವಿನಿ ಪುನೀತ್ ರಾಜ್`ಕುಮಾರ್ ಯುವ ರಾಜ್`ಕುಮಾರ್ (Yuva Rajkumar) ಸಿನಿಮಾ ಮಾಡುವ ಬಗ್ಗೆಯೂ ಪ್ರಶ್ನೆ ಎದುರಾಗಿದೆ.
ಮಗ ಯುವ (Yuva Rajkumar) ಡೇಟ್ಸ್ ಕೊಟ್ಟರೆ ಸಿನಿಮಾ ಮಾಡುವುದಕ್ಕೆ ನಾನು ರೆಡಿ. ಕಥೆಯೂ ಸಿಗಬೇಕು ಅಷ್ಟೆ ಎಂದಿದ್ದಾರೆ ಅಶ್ವಿನಿ.



