ಡಾ.ರಾಜ್ (Dr. Rajkumar) ನಡೆದ ಹಾದಿಯಲ್ಲಿಯೇ ಅವರ ಮಕ್ಕಳು ನಡೆಯುತ್ತಿದ್ದಾರೆ. ಶಿವಣ್ಣ (Dr. Shiva Rajkumar) ಮತ್ತು ಗೀತಾ (Geetha Shiva Rajkumar) ಶಕ್ತಿಧಾಮ ನಡೆಸುತ್ತಿದ್ದರೆ, ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಸಲಹುತ್ತಿದ್ದರೆ, ಅಶ್ವಿನಿಯವರದ್ದು ಬೇರೆಯದೇ ಹಾದಿ. ಡಾ.ರಾಜ್ ಕುಮಾರ್ (Dr. Rajkumar) ನೇತ್ರದಾನಕ್ಕೆ ರಾಯಭಾರಿಯಾಗಿದ್ದರು. ಅದನ್ನು ಪುನೀತ್ ರಾಜ್ ಕುಮಾರ್ (Dr.Puneeth Rajkumar) ಮುಂದುವರೆಸಿದರು. ಶಿವರಾಜ್ ಕುಮಾರ್ (Dr.Shiva Rajkumar) ಮತ್ತು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ನೇತ್ರದಾನ, ಅಂಗಾಂಗ ದಾನ ಹಾಗೂ ದೇಹದಾನಕ್ಕೆ ರಾಯಭಾರಿಯಾಗಿದ್ದಾರೆ. ಈಗ ಪುನೀತ್ ಅವರ ಪತ್ನಿ ಅಶ್ವಿನಿ, ರಾಜ್ಯ ಸರ್ಕಾರದ ಅಂಗಾಂಗ ದಾನಕ್ಕೆ (Organ donation) ರಾಯಭಾರಿಯಾಗಿದ್ದಾರೆ.
ಪುನೀತ್ ನಿಧನದ ನಂತರ ರಾಜ್ಯದಲ್ಲಿ ನೇತ್ರದಾನ (Eye donation) ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದ ಆರೋಗ್ಯ ಇಲಾಖೆ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Rajkumar) ಅವರನ್ನು ಅಂಗಾಂಗದಾನ (Organ donation) ಕ್ಯಾಂಪೇನ್ನ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ನಿರ್ಧರಿಸಿದೆ’ ಎಂದು ದಿನೇಶ್ ಗುಂಡೂರಾವ್ (Dinesh Gundurao) ಅವರು ತಿಳಿಸಿದ್ದಾರೆ. ಅಂಗಾಂಗದಾನಕ್ಕೆ ಸಹಕರಿಸಿದ 150 ಕುಟುಂಬಗಳನ್ನು ಆರೋಗ್ಯ ಇಲಾಖೆ ಸನ್ಮಾನಿಸಿದೆ.
ಆಗಸ್ಟ್ 3ನೇ ತಾರೀಕು ರಾಜ್ಯ ಸರ್ಕಾರ ಕಾರ್ಯಕ್ರಮ ಇಟ್ಟುಕೊಂಡಿದ್ದು, ಆ ದಿನದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾಗವಹಿಸಲಿದ್ದಾರೆ.
ಒಟ್ಟಿನಲ್ಲಿ ಅಣ್ಣಾವ್ರ ಮನೆಯವರು ಎಲ್ಲರೂ ಒಂದೊಂದು ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಇನ್ನ ತೆರೆಗೆ ಬರಬೇಕಿರುವ ಯುವ ರಾಜ್ ಕುಮಾರ್, ಈಗಾಗಲೇ ಡಾ.ರಾಜ್ ಅಕಾಡೆಮಿ (Dr.Raj academy) ನಡೆಸುತ್ತಿದ್ದಾರೆ. ಆ ಮೂಲಕ ಕನ್ನಡದ ಯುವ ಪ್ರತಿಭೆಗಳನ್ನು ಸ್ಪರ್ಧಾ ಜಗತ್ತಿಗೆ ಸಜ್ಜು ಮಾಡುತ್ತಿದ್ದಾರೆ. ಗೆಲುವನ್ನೂ ಕಾಣುತ್ತಿದ್ದಾರೆ. ಅವರ ಸೇವೆಯಲ್ಲಿ ಇವರು, ಇವರ ಸೇವೆಯಲ್ಲಿ ಅವರು ಕೈಜೋಡಿಸುತ್ತಾ ಒಂದಾಗಿ ಸಾಗುತ್ತಿದ್ದಾರೆ. ಇಷ್ಟು ದಿನ ತೆರೆಯ ಮರೆಯಲ್ಲಿಯೇ ಇರುತ್ತಿದ್ದ, ಇದ್ದ ಅಶ್ವಿನಿ ಪುನೀತ್ ರಾಜ್`ಕುಮಾರ್ (Ashwini Rajkumar) ಇನ್ನು ಮುಂದೆಯೂ ಹಾಗೆಯೇ ಇರುವುದಕ್ಕಾಗುವುದಿಲ್ಲ. ಹೊಣೆ, ಜವಾಬ್ದಾರಿಗಳಿಗೂ ಹೆಗಲಾಗಬೇಕು.



