ದೆಹಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅರೆಸ್ಟ್ ಆಗಿದ್ದಾರೆ. ದೆಹಲಿ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಿಸಿದಂತೆ 9 ಬಾರಿ ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ಸೆಡ್ಡು ಹೊಡೆದಿದ್ದ ಕೇಜ್ರಿವಾಲ್, ಅಂತಿಮ ಕ್ಷಣದಲ್ಲಿಯೂ ಸುಪ್ರೀಂಕೋರ್ಟ್ ಮೊರೆ ಹೋದರಾದರೂ.. ಜಯ ಸಿಕ್ಕಲಿಲ್ಲ. ಕೇಜ್ರಿವಾಲ್ ಹಾಗೂ ಕುಟುಂಬ ಸದಸ್ಯರ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿ, ಎರಡು ಗಂಟೆ ವಿಚಾರಣೆ ಮಾಡಿ ಆಮೇಲೆ ಅರೆಸ್ಟ್ ಮಾಡಿ ಜೈಲಿಗೆ ಕರೆದುಕೊಂಡು ಹೋದರು. ಸಿಎಂ ಆಗಿದ್ದಾಗಲೇ, ಸಿಎಂ ಹುದ್ದೆಯಲ್ಲಿದ್ದಾಗಲೇ ಅರೆಸ್ಟ್ ಆದ 2ನೇ ವ್ಯಕ್ತಿ ಅರವಿಂದ ಕೇಜ್ರಿವಾಲ್. ಮೊದಲಿಗೆ ಈ ದಾಖಲೆ ತಮಿಳುನಾಡಿನ ಜಯಲಲಲಿತಾ ಅವರ ಹೆಸರಿನಲ್ಲಿ ಮಾತ್ರ ಇತ್ತು.
ಅಂದಹಾಗೆ ಏನಿದು ಅಬಕಾರ ನೀತಿ ಹಗರಣ..? ಇದರಲ್ಲಿ ಕೇಜ್ರಿವಾಲ್ ಲಾಭ ಮಾಡಿದ್ದು ಹೇಗೆ? ಆರೋಪಗಳೇನು..?
ಕೇಜ್ರಿವಾಲ್ ಅಬಕಾರಿ ನೀತಿಯ ಪ್ರಕಾರ..
ಸರಳವಾಗಿ ಹೇಳೋದಾದರೆ.. ಮದ್ಯದ ಬೆಲೆ ಹೆಚ್ಚು ಮಾಡುತ್ತಾರೆ. ಆದರೆ.. ಲಾಭವನ್ನೇನೂ ಹೆಚ್ಚು ತೆಗೆದುಕೊಳ್ಳೋದಿಲ್ಲ. ಗ್ರಾಹಕರಿಗೆ ದುಬಾರಿಯಾದರೂ.. ಮಾಲೀಕರು ಹಾಗೂ ವಿತರಕರಿಗೆ ಲಾಭವಾಗುತ್ತೆ.
ಉದಾಹರಣೆಗೆ : 750 ಎಂಎಲ್ʻನ ಒಂದು ವಿಸ್ಕಿ ಬಾಟಲ್ ಬೆಲೆ ಹಳೆಯ ನೀತಿಯ ಪ್ರಕಾರ 530 ರೂ. ಇತ್ತು. ಹೊಸ ರೂಲ್ಸ್ ಪ್ರಕಾರ ಅಂದ್ರೆ ಕೇಜ್ರಿವಾಲ್ ರೂಲ್ಸ್ ಪ್ರಕಾರ 560 ರೂ. ಆಗುತ್ತೆ. ಬೆಲೆ ಏರಿಕೆ ಪ್ರಮಾಣ ಶೇ.5.7ರಷ್ಟು. ಆದರೆ.. ಲಾಭ ಅಥವಾ ಟ್ಯಾಕ್ಸ್ ಪಡೆಯುವುದರಲ್ಲಿ ಮೋಸವಾಗುತ್ತೆ.
ಹೇಗೆ ಅಂದ್ರೆ..
530 ರೂ. ಬೆಲೆಗೆ ಒಂದು ಬಾಟಲ್ ಮಾರಿದಾಗ ವಿತರಕರು 33 ರೂ. 35 ಪೈಸೆಯನ್ನು ಕಮಿಷನ್ ಪಡೆಯುತ್ತಿದ್ದರು. ಆದರೆ.. ಹೊಸ ಕೇಜ್ರಿವಾಲ್ ನೀತಿಯಲ್ಲಿ ವಿತರಕರು ಒಂದು ಬಾಟಲ್ ಮಾರಿದರೆ ಪಡೆಯುವ ಲಾಭದ ಪ್ರಮಾಣ 363 ರೂ 27 ಪೈಸೆ. ಇದು ಕೇವಲ ಒಂದು ಬಾಟಲ್ಲಿನ ಲೆಕ್ಕ.
ಇನ್ನು ಸರ್ಕಾರ ಪಡೆಯೋ ಟ್ಯಾಕ್ಸಿನ ವಿಷಯಕ್ಕೆ ಹಳೇ ಸ್ಕೀಮಿನಲ್ಲಿ ಒಂದು ಬಾಟಲ್ ವಿಸ್ಕಿಗೆ 233 ರೂಪಾಯ್ ಎಕ್ಸೈಸ್ ಡ್ಯೂಟಿ ತಗೊಳ್ತಾ ಇದ್ದ ಸರ್ಕಾರ, ಹೊಸ ಕೇಜ್ರಿಪಾಲಿಸಿಯಲ್ಲಿ ಪಡ್ಕೊಳ್ತಿರೋದು ಜಸ್ಟ್ 1 ರೂಪಾಯ್ 88 ಪೈಸೆ.
ಹಳೆ ಪಾಲಿಸಿಯಲ್ಲಿ ಸರ್ಕಾರಕ್ಕೆ 106 ರೂಪಾಯಿ ಬರ್ತಾ ಇದ್ದದ್ದು, ಕೇಜ್ರಿ ನೀತಿಯಲ್ಲಿ ಜಸ್ಟ್ 1 ರೂಪಾಯ್ 9 ಪೈಸೆಗೆ ಇಳೀತು.
ಇದರಲ್ಲಿ ಇನ್ನೂ ಒಂದು ಮ್ಯಾಜಿಕ್ ಇದೆ. ದೆಹಲಿಯಲ್ಲಿ ಮೊದಲು ದೆಹಲಿಯಲ್ಲಿ 864 ಲಿಕ್ಕರ್ ಶಾಪುಗಳಿದ್ದವು. ಅವುಗಳಲ್ಲಿ 475 ಸರ್ಕಾರಿ ಲಿಕ್ಕರ್ ಶಾಪುಗಳಿದ್ವು. ಹೊಸ ಪಾಲಿಸಿಯಲ್ಲಿ 859 ಪ್ರೈವೇಟ್ ಲಿಕ್ಕರು ಶಾಪುಗಳಿಗೆ ಅವಕಾಶ ಕೊಡಲಾಗಿದೆ. ಈ ಲೈಸೆನ್ಸುಗಳನ್ನ ಟೋಟಲ್ ಆಗಿ 32 ವಲಯಗಳಿಗೆ ಮಾರಾಟ ಮಾಡಲಾಗಿದೆ.
ಈ ಎಲ್ಲದರ ಲಾಭ ಆಗ್ತಾ ಇದ್ದದ್ದ ಡೀಲರುಗಳಿಗೆ ಮತ್ತು ಕಂಪೆನಿಗಳಿಗೆ. ಆ ಕಂಪೆನಿಗಳಿಗೆ ಭರ್ಜರಿ ಲಾಭ ಅಲ್ವಾ..? ಅವರು ಭರ್ಜರಿಯಾಗಿ ನಮ್ಮಲ್ಲಿ ವಿಸ್ಕಿ, ಬಿಯರು, ಬ್ರಾಂದಿ ಖರೀದಿ ಮಾಡಿದ್ರೆ.. 10%.. 20%.. ಡಿಸ್ಕೌಂಟ್ ಘೋಷಣೆ ಮಾಡ್ತಾ ಇದ್ವು. ಅಷ್ಟೆಲ್ಲ ಯಾಕೆ.. 1+1 ಆಫರ್ ಕೂಡಾ ಕೊಟ್ಟು ಬಿಸಿನೆಸ್ ಮಾಡ್ಕೊಂಡ್ವು.
ಲಿಕ್ಕರ್ ರೇಟಿನ ಬಿಸಿನೆಸ್ ಹ್ಯಾಗ್ ಇರ್ತಾ ಇತ್ತಂದರೆ.. ಬೆಂಗಳೂರಿನವರು ದೆಹಲಿಗೆ ಫ್ಲೈಟಲ್ಲಿ ಹೋಗಿ.. ಲಿಕ್ಕರ್ ತಗಂಡು.. ಫ್ಲೈಟಲ್ಲಿ ವಾಪಸ್ ಬಂದು ಮಾರಿದ್ರೂ.. ಲಾಭ ಮಾಡಿಕೊಳ್ಳೋವಷ್ಟರ ಮಟ್ಟಿಗೆ ರೇಟು ಕಡಿಮೆ ಇರ್ತಾ ಇತ್ತು.
ಇದೆಲ್ಲದರ ಹಿಂದೆ ಲಿಕ್ಕರ್ ಮಾಫಿಯಾ ಇದೆ ಅನ್ನೋದು ಇಡಿಯವರ ಆರೋಪ. ಇದರ ಕಿಕ್ ಬ್ಯಾಕ್ ನೇರವಾಗಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಸಂದಾಯವಾಗಿದೆ ಅನ್ನೋ ಕೇಸಿನಲ್ಲಿ ಒಂದಲ್ಲ.. ಎರಡಲ್ಲ. 9 ಸಾರಿ ನೋಟಿಸ್ ಕೊಟ್ರೂ.. ಕೇಜ್ರಿವಾಲ್ ವಿಚಾರಣೆಗೆ ಬರಲಿಲ್ಲ.
ಕೊನೆಗೆ ಇಡಿಯವರು ಅರೆಸ್ಟ್ ಮಾಡಿದ್ದಾಗಿದೆ. ಆದರೆ.. ಲಿಕ್ಕರ್ʻನಲ್ಲಿ ಹಿಂಗೂ ಬಿಸಿನೆಸ್ ಮಾಡ್ಬಹುದು ಅನ್ನೋದು ಗೊತ್ತಾಗಿ ಅಚ್ಚರಿ ಆಗ್ತಾ ಇದೆ. ಆರೋಪಗಳಲ್ಲಿ ಅರವಿಂದ ಕೇಜ್ರಿವಾಲ್ ಲಂಚ ಪಡೆದಿರೋದು ನಿಜಾನೋ.. ಸುಳ್ಳೋ.. ಡಿಸೈಡ್ ಮಾಡೋದು ಕೋರ್ಟು.
ಆದರೆ.. ಪಾರ್ಟಿ ಆಫ್ ಡಿಫರೆನ್ಸ್.. ಹೊಸತನದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡ್ಕೊಳ್ತಾನೇ ಅಧಿಕಾರಕ್ಕೇರಿದ ಪಕ್ಷ.. ಮತ್ತು ಆ ಪಕ್ಷದ ನಾಯಕರು ಒಬ್ಬರ ಹಿಂದೆ ಒಬ್ಬರಂತೆ ಜೈಲು ಸೇರ್ತಿರೋದು ಮಾತ್ರ.. ದುರಂತ.



