ಸುಮ್ ಸುಮ್ನೆ ನಗ್ತಾಳೆ..
ಸಂಜೆ ಕೆಂಪಾದಾಗ.. ಸೂರ್ಯ ತಂಪಾದಾಗ..
ಇದು ಒನ್ ಡೇ ಮ್ಯಾಚು ಕಣೋ..
ಹೇಳ್ಕೊಳ್ಳಾಕ್ ಒಂದೂರು.. ತಲಿಮ್ಯಾಗೆ ಒಂದ್ ಸೂರು..
ಎ. ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ.
ಈ ಹಾಡುಗಳನ್ನು ಕೇಳದವರು.. ನೋಡದವರು.. ಮೆಚ್ಚದವರು.. ಎಲ್ಲಿದ್ದರು. 26 ವರ್ಷಗಳ ಹಿಂದೆ ಸೃಷ್ಟಿಯಾದ ಮ್ಯಾಜಿಕ್ ಇದು. ಈ ಮರು ಬಿಡುಗಡೆ ಆಗಿದೆ. ಎ ಸಿನಿಮಾವನ್ನು ಪ್ರೇಕ್ಷಕರು ಮತ್ತೊಮ್ಮೆ ಗೆಲ್ಲಿಸಿದ್ಧಾರೆ. ಉಪೇಂದ್ರ ಅವರು ಈ ಚಿತ್ರದಲ್ಲಿ ಹೀರೋ ಕಂ ಡೈರೆಕ್ಟರ್ ಆಗಿದ್ದರು. ಎಲ್ಲವನ್ನೂ ರಿಯಲ್ ಆಗಿಯೇ ಶೂಟ್ ಮಾಡಿ, ರಿಯಲ್ ಆಗಿಯೇ ತೋರಿಸ್ತೀನಿ ಎಂದು ಹೊರಡುವ ಉಪೇಂದ್ರ ಅವರಿಗೆ ಈ ಚಿತ್ರದ ಮೂಲಕವೇ ರಿಯಲ್ ಸ್ಟಾರ್ ಉಪೇಂದ್ರ ಅನ್ನೋ ಬಿರುದು ಸಿಕ್ಕಿದ್ದು. ಚಿತ್ರ ರಿ-ರಿಲೀಸ್ ಹಿಟ್ ಸಂಭ್ರಮದ ಕ್ಷಣದಲ್ಲಿ ಚಾಂದಿನಿ ಜೊತೆಯಾಗಿದ್ಧಾರೆ.
ಅಮೆರಿಕದಲ್ಲಿ ಪ್ರೊಫೆಸರ್ ಆಗಿರುವ ನಟಿ ಚಾಂದಿನಿ, ಬೆಂಗಳೂರಿಗೆ ಬಂದು ಎ ಚಿತ್ರದ ಸಂಭ್ರಮಕ್ಕೆ ಜೊತೆಯಾಗಿದ್ಧಾರೆ. ಎ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯ ಪಾತ್ರವನ್ನೂ ನಿರ್ವಹಿಸಿದ್ದ ಚಾಂದಿನಿ ಈಗ ಎ ಭಾಗ 2ಕ್ಕೆ ಕಥೆ ಸಿದ್ಧ ಮಾಡಿದ್ದಾರಂತೆ. ಆದರೆ.. ಚಾಂದಿನಿ ಇನ್ನೂ ಮದುವೆಯಾಗಿಲ್ಲ. ಎ ರಿಲೀಸ್ ಆಗಿಯೇ 26 ವರ್ಷವಾಯ್ತು. ಆದರೆ.. ಚಾಂದಿನಿ ಮದುವೆ ಆಗಿಲ್ಲ.
ಯಾಕೆ ಮೇಡಂ ಮದುವೆ ಆಗಿಲ್ಲ ಅಂದ್ರೆ..
‘ಎ’ ಸಿನಿಮಾ ನನ್ನ ತಲೆಯನ್ನು ಹಾಳು ಮಾಡಿಬಿಟ್ಟಿದೆ. ನನಗೆ ಮದುವೆಯೆಂದರೇ ಭಯವಾಗುತ್ತಿದೆ ಎಂದು ಜೋಕ್ ಮಾಡುವ ಚಾಂದಿನಿಗೆ, ಮದುವೆಯ ಕಮಿಟ್ʻಮೆಂಟ್‌ಗಳ ಬಗ್ಗೆ ಭಯವೂ ಇದೆ. ನ್ನ ಪ್ರಕಾರ ಮದುವೆ ಎಂದರೆ ಅದೊಂದು ಸ್ಯಾಕ್ರಿ ಫೈಸ್. ನಾವು ಮದುವೆಯಾದರೆ ಬಹಳಷ್ಟನ್ನು ತ್ಯಾಗ ಮಾಡಬೇಕಾಗುತ್ತದೆ. ಮತ್ತೊಬ್ಬರ ಜೊತೆ ದೇಹ ಮತ್ತು ಮನಸ್ಸು ಎರಡನ್ನೂ ಹಂಚಿಕೊಳ್ಳಬೇಕು. ಆಗ ಸಂಗಾತಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಹೀಗಾಗಿ ನಾನು ಮದುವೆ ಬಗ್ಗೆ ಬಹಳಷ್ಟನ್ನು ಯೋಚಿಸಿ ನಿರ್ಧಾರ ತಗೆದುಕೊಳ್ಳಬೇಕು ಎನ್ನುವ ಚಾಂದಿನಿ ಸಿಂಗಲ್ ಆಗಿರುವುದನ್ನು ನಾನು ಸದ್ಯ ಇಷ್ಟಪಡುತ್ತಿದ್ದೇನೆ, ಲೈಫ್ ಎಂಜಾಯ್ ಮಾಡುತ್ತಿದ್ದೇನೆ ಎನ್ನುತ್ತಾರೆ.
ಹಾಗಂತ ಮದುವೆ ಆಗದೆ ಸಿಂಗಲ್ ಆಗಿಯೇ ಇರುತ್ತೀರಾ ಎಂದರೆ.. ಕಮಿಟ್‌ಮೆಂಟ್‌ಗೆ ಯೋಗ್ಯ ವ್ಯಕ್ತಿ ಸಿಕ್ಕಾಗ ನಾನು ಖಂಡಿತ ಮದುವೆ ಆಗುತ್ತೇನೆ. ಸದ್ಯವೇ ಸಿಕ್ಕರೂ ಸಿಗಬಹುದು. ನಾನು ಇನ್ನೊಮ್ಮೆ ನಿಮ್ಮ ಮುಂದೆ ಬರುವ ವೇಳೆ ನನ್ನ ಕನಸಿನ ಹುಡುಗನನ್ನು ಜೊತೆಯಲ್ಲೇ ಕರೆದುಕೊಂಡು ಬಂದರೂ ಬರಬಹುದು ಎಂದಿದ್ಧಾರೆ.
ಈ ಮಧ್ಯೆ ಎ ಚಿತ್ರಕ್ಕೆ 26 ವರ್ಷದ ಬಳಿಕ ಸಿಕ್ಕ ರೆಸ್ಪಾನ್ಸ್ ನೋಡಿ ಖುಷಿಯಾಗಿದ್ಧಾರೆ. ಅದೇ ಖುಷಿಯಲ್ಲಿ 3 ಚಿತ್ರದ ಸೀಕ್ವೆಲ್ ಕೂಡಾ ರೆಡಿ ಮಾಡಿದ್ದಾರಂತೆ.
‘ಎ’ ಸಿನಿಮಾದ ಎರಡನೇ ಭಾಗ ರೆಡಿಯಾಗುತ್ತಿದೆ. ನಮ್ಮೊಟ್ಟಿಗೆ ಬರಹಗಾರರ ತಂಡವೇ ಇದೆ. ಈಗಾಗಲೇ ನಾವು ಕತೆ, ಚಿತ್ರಕತೆಯನ್ನು ರೆಡಿ ಮಾಡಿಕೊಂಡಿದ್ದೇವೆ. ಸಂಭಾಷಣೆ ಬರೆಯಬೇಕಿದೆ. ನಾವೆಲ್ಲ ಕೂತು ಸಂಭಾಷಣೆ, ಪೋಸ್ಟ್ ಪ್ರೊಡಕ್ಷನ್ ಅಂತಿಮಗೊಳಿಸಿಕೊಳ್ಳುತ್ತೇವೆ ಆ ನಂತರ ಉಪೇಂದ್ರ ಅವರ ಬಳಿ ಹೋಗಿ ನಾವು ಅವರನ್ನು ಮನವಿ ಮಾಡುತ್ತೇವೆ, ಈ ಸಿನಿಮಾವನ್ನು ನೀವೇ ನಿರ್ದೇಶಿಸಿ ಅಂತ. ಅವರು ಒಪ್ಪುತ್ತಾರೆಂಬ ನಂಬಿಕೆ ಇದೆ. ನಿರ್ದೇಶನ ಮಾಡುವುದು ಮಾತ್ರವೇ ಅಲ್ಲ, ಅವರು ಈ ಸಿನಿಮಾದಲ್ಲಿ ನಟನೆ ಸಹ ಮಾಡಬೇಕು ಎಂದು ನಾವು ಕೇಳಲಿದ್ದೇವೆ. ಒಟ್ಟಾರೆ ನಾವು ಈ ಸಿನಿಮಾ ಮಾಡಲಿದ್ದೇವೆ’ ಎಂದಿದ್ದಾರೆ ಚಾಂದಿನಿ.
ಹೊಸ ಸಿನಿಮಾಗಳು ಇಲ್ಲದ ಈ ಸಮಯದಲ್ಲಿ ಎ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ಧಾರೆ. ಒಟ್ಟಿನಲ್ಲಿ ಎ ಸೆನ್ಸೇಷನ್ ಮತ್ತೆ ಜೋರಾಗಿಯೇ ಇದೆ.



