ಕರ್ನಾಟಕ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಣಿಕ ನುಡಿಗಳಿವೆ (karanika nudi) ವಿಶೇಷ ಮಹತ್ವ ಇದೆ. ಅದರಲ್ಲೂ ಕುರುಬ ಸಮುದಾಯಗಳಲ್ಲಿ. ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಣಿಕ ನುಡಿಗಳನ್ನ ದೈವವಾಣಿಯೇಂದೇ ಪರಿಗಣಿಸುತ್ತಾರೆ. ಅಂತಹ ಎರಡು ಕಾರ್ಣಿಕ ನುಡಿಗಳು ಭಾರೀ ಮಹತ್ವ ಪಡೆದುಕೊಂಡಿವೆ.
ದೇವರಗುಡ್ಡದ ಕಾರ್ಣಿಕೋತ್ಸವ : ದೇವರಗುಡ್ಡದಲ್ಲಿ (Devaragudda) ಕಾರ್ಣಿಕೋತ್ಸವದಲ್ಲಿ ಗೊರವಪ್ಪ (goravappa) “ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ (haveri district ranebennuru talluque devraragudda) ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವ ನುಡಿಯನ್ನು ಮಳೆ, ಬೆಳೆ ಮತ್ತು ರಾಜಕೀಯಕ್ಕೆ ಸಂಯೋಜಿಸಿ ನೋಡಲಾಗುತ್ತಿದೆ. ಐತಿಹಾಸಿಕ ಸುಕ್ಷೇತ್ರ ದೇವರಗುಡ್ಡದಲ್ಲಿ ದೇವರಗುಡ್ಡದಲ್ಲಿ ಬಿಲ್ಲನ್ನೇರಿ ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್” ಎಂದು ಗೊರವಪ್ಪನವರು ಕಾರ್ಣೀಕ ನುಡಿದಿದ್ದಾರೆ.
ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್ ದೈವನುಡಿಯಯ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಅವರು ವಿಶ್ಲೇಷಣೆ ಮಾಡಿದ್ದಾರೆ. ಈ ಬಾರಿ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಬರಗಾಲ ಎದುರಾಗಿರುವುದರಿಂದ ರೈತರಿಗೆ ಭಾರೀ ನಷ್ಟವಾಗುವ ಸಂಭವ ಇದೆ. ರೈತರು ಭೂಮಿಗೆ ಸುರಿದ ಬಂಡವಾಳ ಕೈಗೆ ವಾಪಸ್ ಬರುವುದು ಕಷ್ಟ ಎಂದು ಈ ಕಾರ್ಣಿಕದ ನುಡಿಯನ್ನು ವಿಶ್ಲೇಷಿಸಲಾಗಿದೆ. ಅಲ್ಲದೆ ರಾಜಕೀಯವಾಗಿ ಕಲ್ಯಾಣಿ ಎಂದರೆ ಹೆಣ್ಣು. ಹೀಗಾಗಿ ಹೆಣ್ಣೊಬ್ಬಳು ರಾಜ್ಯ ರಾಜಕೀಯಕ್ಕೆ ಸಂಕಷ್ಟ ತರಲಿದ್ಧಾಳೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. According to Karanika A woman creates in politics.
ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ : ಇಟ್ಟ ರಾಮನ ಬಾಣ ಹುಸಿಯಿಲ್ಲ.ಸುರರು ಅಸೂರರು ಕಾದಾಡಿದರು. ಭಕ್ತ ಕೋಟಿಗೆ ಮಂಗಳವಾಯಿತು. ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದ ಇರಬೇಕು ಪರಾಕ್’ ಇದು ಚಿಕ್ಕಮಗಳೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ (Mylaralingeswara swami) ಕಾರ್ಣಿಕದ ನುಡಿಮುತ್ತು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ (Chikkamagaluru district kaduru talluk Beeruru mahalingeshwara swami) ಮಹಾನವಮಿ ಬಯಲಿನಲ್ಲಿ ದಶರಥ ಪೂಜಾರ್ ಅವ್ರಿಂದ ಮುಂಜಾನೆ 4.42ಕ್ಕೆ ಹೊರ ಬಿದ್ದ ಕಾರ್ಣಿಕದ ನುಡಿ. ಕಾರ್ಣಿಕ ನುಡಿದಿರುವ ಭವಷ್ಯವಾಣಿ, ಎಚ್ಚರಿಕೆ ಯಾವುದಕ್ಕೆ ಸಂಬಂಧಿಸಿದ್ದು ಎಂದು ಭಕ್ತರು ತಲೆಕೆಡಿಸಿಕೊಂಡಿದ್ದಾರೆ. ಇತ್ತೀಚೆಗೆ ದೇಶಾದ್ಯಂತ ಗಲಭೆಗಳಾಗುತ್ತಿರುವುದರ ಹಿನ್ನೆಲೆ ಸೂಚನೆಯೇ? ಇಸ್ರೇಲ್ ಪ್ಯಾಲೆಸ್ತೀನ್ ನಡುವಿನ ಯುದ್ಧದಲ್ಲಿ ಭಾರತಕ್ಕೆ ಅಪಾಯದ ಎದುರಿಸುವುದರ ಸೂಚನೆಯೇ ಎಂಬ ಬಗ್ಗೆ ಭಕ್ತರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.



