ರಾಜ್ಯಾದ್ಯಂತ ಈಗ ಬಿಪಿಎಲ್ ಕಾರ್ಡ್ ರದ್ದಾಗುತ್ತಿರುವುದೇ ಸುದ್ದಿ. 10 ಲಕ್ಷ ಕಾರ್ಡ್ ಕ್ಯಾನ್ಸಲ್ ಅಂತೆ, ಇಲ್ಲ ಇಲ್ಲ.. 14 ಲಕ್ಷ ಕಾರ್ಡ್ ಕ್ಯಾನ್ಸಲ್ ಮಾಡ್ತಿದ್ದಾರಂತೆ. ಇಲ್ಲ ಕಣ್ರಿ.. ೨೨ ಲಕ್ಷ ರೇಷನ್ ಕಾರ್ಡುಗಳನ್ನ ಡಿಲೀಟ್ ಮಾಡಿದ್ದಾರಂತೆ.. ಹೀಗೆ ಸುದ್ದಿಗಳು ಹರಿದಾಡುತ್ತಿವೆ. ನಂಬರ್ ಪಕ್ಕಾ ಅಲ್ಲವಾದರೂ, ರೇಷನ್ ಕಾರ್ಡ್ ರದ್ದಾಗುತ್ತಿರುವುದು ಸುಳ್ಳಲ್ಲ. ಈಗ ಅದೇ ಟೆನ್ಷನ್ ಗೃಹಲಕ್ಷ್ಮಿಗೂ ಬಂದಿದೆ.
ಬಿಪಿಎಲ್ ರೇಷನ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಯೋಜನೆ ಹಣವು ಬಂದ್ ಆಗುತ್ತಾ ಎಂಬ ಆತಂಕದಲ್ಲಿರುವ ಮಹಿಳೆಯರಿಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ” ಗೃಹಲಕ್ಷ್ಮಿ ವಿಚಾರವಾಗಿ ನಾನು ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿದವರ ಪೈಕಿ ಯಾರು ತೆರಿಗೆ ಕಟ್ಟುವುದಿಲ್ಲವೋ ಅಂತವರಿಗೆ ಗೃಹಲಕ್ಷ್ಮಿ ಹಣ ಬರುತ್ತೆ. 80 ಸಾವಿರ ಬಿಪಿಎಲ್ ಕಾರ್ಡ್ ಗಳನ್ನ ರದ್ದತಿ ಮಾಡೋ ಬದಲು ಎಪಿಎಲ್‌ಗೆ ವರ್ಗವಾಣೆ ಮಾಡಿದ್ದಾರೆ. ವರ್ಗವಣೆ ಮಾಡಿರೋದರಿಂದ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ.
ಅಲ್ಲಿಗೆ ಬಿಪಿಎಲ್ ಕಾರ್ಡ್ ರದ್ದಾದರೂ, ಎಲ್ಲರಿಗೂ ಗೃಹ ಲಕ್ಷ್ಮಿ ರದ್ದಾಗುವುದಿಲ್ಲ. ಕೇವಲ ಟ್ಯಾಕ್ಸ್ ಕಟ್ಟುತ್ತಿರುವವರನ್ನು ಗೃಹ ಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗುತ್ತದೆ.
ಆದರೆ ಟ್ಯಾಕ್ಸ್ ಕಟ್ಟದ ಸರ್ಕಾರಿ ನೌಕರರೂ ಇದ್ದಾರೆ. ಎಪಿಎಲ್ ಕಾರ್ಡ್ ಹೊಂದಿರುವವರೂ ಇದ್ದಾರೆ. ಅವರಿಗೆಲ್ಲ ಗೃಹಲಕ್ಷ್ಮಿ ಬಂದೇ ಬರುತ್ತದೆ ಎಂದು ನಂಬಬಹುದಾಗಿದೆ.ರಾಜ್ಯದಲ್ಲಿ ಸದ್ಯಕ್ಕೆ 1 ಕೋಟಿ 28ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಾಯಿಸಿದ್ದಾರೆ. ಅವರಲ್ಲಿ 82 ಸಾವಿರ ಮಂದಿಗೆ ಮಾತ್ರ ಗೃಹಲಕ್ಷ್ಮಿ ಸ್ಕೀಮ್ ರೀಚ್ ಆಗುವುದಕ್ಕೆ ಆಗಿಲ್ಲ ಎಂದು ಹೇಳಿದ್ದಾರೆ.
ಆದರೆ ಪದೇ ಪದೇ ಗೃಹಲಕ್ಷ್ಮಿ ಹಣ ವಿಳಂಬವಾಗುತ್ತಿರುವುದು ಯಾಕೆ ಎಂಬ ಪ್ರಶ್ನೆಗೂ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರಿಸಿದ್ದು ಕೆಲವು ದಾಖಲೆಗಳನ್ನು ಸಾಫ್ಟ್‌ವೇರ್ ತೆಗೊಳದೇ ಇರೋದೆ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಅಂತವರಿಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇವೆ, ಇದು ಆಗೋದಿಲ್ಲ ಅಂತಾನೂ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಇತ್ತ ರಾಜ್ಯ ಸರ್ಕಾರ ಬಿಪಿಎಲ್‌ಗೆ ಅರ್ಹರಲ್ಲದ ಕಾರ್ಡ್‌ಗಳು ಬದಲಾವಣೆ ಆಗುತ್ತೆ. ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ, ಅವರನ್ನು ಎಪಿಎಲ್ ಕಾರ್ಡ್‌ಗೆ ಬದಲಾವಣೆ ಮಾಡ್ತೇವೆ ಎಂದು ಹೇಳಿದೆ. ಆಹಾರ ಖಾತೆ ಸಚಿವ ಮುನಿಯಪ್ಪ ಅವರೇ ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇಕಡಾ 50 ಗೂ ಹೆಚ್ಚು ಬಿಪಿಎಲ್ ಕಾರ್ಡ್ ಇಲ್ಲ. ಕರ್ನಾಟಕ ಆರ್ಥಿಕವಾಗಿ ಸುಭದ್ರವಿರುವ ರಾಜ್ಯ, ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. 10 ವರ್ಷಗಳಿಂದ ಎಲ್ಲಾ ಸರ್ಕಾರಗಳಲ್ಲಿ ಕಾರ್ಡ್ ನೀಡಲಾಗಿದೆ. ಐಟಿ ಪಾವತಿದಾರರು, ಸರ್ಕಾರಿ ಕೆಲಸದವರು, 1 ಲಕ್ಷ 20 ಸಾವಿರ ಆದಾಯ ಮೀರಿದವರನ್ನು ಎಪಿಎಲ್ ಕಾರ್ಡ್ ಗೆ ಬದಲಾವಣೆ ಮಾಡಲಾಗಿದೆ. ಅಂಕಿ ಅಂಶಗಳ ಜೊತೆ ನಾಳೆ ಸುದ್ದಿಗೋಷ್ಠಿ ಮಾಡ್ತೇನೆ. ಅಕಸ್ಮಾತ್ ಬಡವರ ಕಾರ್ಡ್ ರದ್ದಾಗಿದ್ರೆ ತಹಸೀಲ್ದಾರ್‌ಗೆ ಅರ್ಜಿ ಹಾಕಲಿ, ಕಾರ್ಡ್ ಸಿಗುತ್ತೆ. ಅರ್ಹರಿಗೆ ಬಿಪಿಎಲ್ ಕಾರ್ಡ್ ಗಳು ತಪ್ಪೋದಿಲ್ಲ ಎಂದು ಹೇಳಿದ್ದಾರೆ.



