ಗಂಡ ಹೆಂಡತಿ ಮದುವೆಯಾಗಿದ್ಧಾರೆ. ಅವರು ಅವರದ್ದೇ ಹೆಂಡತಿ ಮತ್ತು ಮಗನ ಜೊತೆ ವೆಡ್ಡಿಂಗ್ ಆನಿವರ್ಸರಿ ಸೆಲಬ್ರೇಟ್ ಮಾಡ್ಕೊಂಡಿದ್ಧಾರೆ. ಆದರೆ.. ಅವರ ಈ ಸಂಭ್ರಮ ಇನ್ಯಾರೋ ನಟಿಯ ಕಣ್ಣು ಕೆಂಪಗಾಗಿಸಿದೆ. ಕರ್ಮ.. ಕರ್ಮ.. ಪತ್ನಿ ವಿಜಯಲಕ್ಷ್ಮಿ, ಮಗನ ಜೊತೆ ದರ್ಶನ್ ವೆಡ್ಡಿಂಗ್ ಆನಿವರ್ಸರಿ ಮಾಡಿಕೊಂಡಿದ್ದರೆ, ಇತ್ತ ನಟಿ ಪವಿತ್ರ ಗೌಡ ಕರ್ಮ ಸ್ಟೇಟ್ʻಮೆಂಟ್ ಹಾಕಿದ್ಧಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆ ದುಬೈನಲ್ಲಿ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ದರ್ಶನ್ ತಮ್ಮ ಪತ್ನಿ ಹಾಗೂ ಮಗನ ಜೊತೆಯಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ಧಾರೆ. ದುಬೈನಲ್ಲಿ ಪತ್ನಿ ಹಾಗೂ ಮಗನ ಜೊತೆ ಫುಲ್ ಸಂಭ್ರಮದಲ್ಲಿದ್ಧಾರೆ.
ದರ್ಶನ್ ಅವರು ವಿಜಯಲಕ್ಷ್ಮಿಗೆ ಹೂಗುಚ್ಛ ಕೊಡುತ್ತಿರುವ ಫೋಟೋನ ವಿಜಯಲಕ್ಷ್ಮಿ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡುತ್ತಿದ್ದಂತೆಯೇ ಸೆಲೆಬ್ರಿಟಿಗಳು ಅರ್ಥಾತ್ ದರ್ಶನ್ ಅಭಿಮಾನಿಗಳು, ಹಾಗೂ ಆಪ್ತರು ವೆಡ್ಡಿಂಗ್ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಆ್ಯನಿವರ್ಸರಿಯ ಶುಭಾಶಯ ಕೋರಿದ್ದಾರೆ.
ಈ ನಡುವೆ ಪವಿತ್ರಾ ಗೌಡ ಹಾಕಿರುವ ಪೋಸ್ಟ್ ಒಂದು ಗಮನ ಸೆಳೆಯುತ್ತಿದೆ. ಅವರು ಹಾಕಿರುವುದು ದರ್ಶನ್ ಅವರೇ ಹೇಳಿದ್ದ ಒಂದು ಡೈಲಾಗ್. ಕರ್ಮ ಅನ್ನೋದು ಹೊರೆ ಇದ್ದಂತೆ. ಸಣ್ಣವರಿದ್ದಾಗ ಹಿರಿಯರು ಹೇಳ್ತಿದ್ರು, ಹೀಗೆಲ್ಲ ಮಾಡ್ತಿದ್ದೀಯಾ ಅದು ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತದೆ ಎನ್ನುತ್ತಿದ್ದರು. ಈಗ ಹಾಗಿಲ್ಲ, ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಂದು ದರ್ಶನ್ ಹೇಳಿದ್ದ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ಧಾರೆ ಪವಿತ್ರಾ ಗೌಡ.
ಪವಿತ್ರಾ ಗೌಡ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರ ನಡುವಿನ ಸೋಷಿಯಲ್ ಮೀಡಿಯಾ ಜಗಳ ಹೊಸದಲ್ಲ. ಬಹುಶಃ ಕೊನೆಯದ್ದೂ ಅಲ್ಲ. ಹಲವು ವರ್ಷಗಳಿಂದ ಈ ರೀತಿಯ ಜಗಳ ನಡೆಯುತ್ತಲೇ ಇದೆ.
ಕೆಲವು ತಿಂಗಳ ಹಿಂದೆ ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ಸೋಷಿಯಲ್ ಮೀಡಿಯಾ ವಾರ್ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ದರ್ಶನ್ ಅಭಿಮಾನಿಗಳು ಮಾತ್ರ ನಾವು ಅತ್ತಿಗೆಗೆ ಸಪೋರ್ಟ್ ಮಾಡುವುದು ಎಂದು ಬಿಟ್ಟರು. ಈ ವಿಚಾರವಾಗಿ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಇವಳಿರ್ತಾಳೆ ನಾಳೆ ಅವಳಿರ್ತಾಳೆ ಎನ್ನುವ ಹೇಳಿಕೆ ಕೊಟ್ಟು ಸುಮ್ಮನಾಗಿಬಿಟ್ಟರು. ವಿಚಾರ ಅಲ್ಲಿಗೆ ನಿಂತಿತ್ತು ಕೂಡ ಆದರೆ ಈಗ ಇವರಿಬ್ಬರ ಅನಿವರ್ಸರಿ ದಿನ ಪೋಸ್ಟ್ ಮಾಡಿದ್ದು ತಪ್ಪು ಎಂದು ಪವಿತ್ರಾ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. ಇತ್ತೀಚೆಗೆ ಏನೇ ಕಾರ್ಯಕ್ರಮ ಇರಲಿ, ಆಚರಣೆ ಇರಲಿ ಅಥವಾ ಸುಮ್ಮನೆ ಪ್ರಯಾಣ ಮಾಡಿದರೂ ದರ್ಶನ್ ಮತ್ತು ವಿಜಯಲಕ್ಷ್ಮಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಪವಿತ್ರಾ ಗೌಡ ಅವರ ಮಗಳ ಜೊತೆ ಬರ್ತ್ ಡೇ ಸೆಲಬ್ರೇಟ್ ಮಾಡಿಕೊಂಡಿದ್ದೇ ಕೊನೆ.. ನಟ ದರ್ಶನ್ ಅವರು ಪವಿತ್ರಾ ಅವರಿಂದ ಅಂತರ ಕಾಯ್ದುಕೊಂಡಿದ್ಧಾರೆ.



