ರೀಸೆಂಟಾಗಿ ಮದುವೆ ಆಗಿರೋ ಅಭಿಷೇಕ್ ಅಂಬರೀಷ್ ಅವರು ಮತ್ತೊಮ್ಮೆ ಲವ್ವಲ್ಲಿ ಬಿದ್ರು ಅಂತಾ ಗೊಂದಲ ಆಗೋದೇನೂ ಬೇಡ. ರಚಿತಾ ರಾಮ್ ಇನ್ನೂ ಸಿಂಗಲ್ಲೇ. ಇವರಿಬ್ಬರನ್ನೂ ಪ್ರೀತಿಸುವಂತೆ ಮಾಡಿರೋದು ಮಾತ್ರ ಬ್ಯಾಡ್ ಮ್ಯಾನರ್ಸ್ ಸೂರಿ ಅಲಿಯಾಸ್ ಸುಕ್ಕಾ ಸೂರಿ ಅಲಿಯಾಸ್ ದುನಿಯಾ ಸೂರಿ.
ಅಭಿಷೇಕ್ ಅಂಬರೀಷ್ ರಚಿತಾ ರಾಮ್ ಇಬ್ಬರದ್ದೂ ಒಂದೇ ದಿನ ಹುಟ್ಟುಹಬ್ಬ. ಇಬ್ಬರೂ ಬ್ಯಾಡ್ ಮ್ಯಾನರ್ಸ್ ಚಿತ್ರದ ನಾಯಕ ನಾಯಕಿ. ಹೀಗಾಗಿಯೇ ಬ್ಯಾಡ್ ಮ್ಯಾನರ್ಸ್ ಟೀಂ, ಹುಟ್ಟುಹಬ್ಬವನ್ನು ಸ್ಪೆಷಲ್ಲಾಗಿಯೇ ಸೆಲಬ್ರೇಟ್ ಮಾಡಿದೆ. ಹುಟ್ಟುಹಬ್ಬಕ್ಕಾಗಿಯೇ ಐ ಆಮ್ ಇನ್ ಲವ್ ಅನ್ನೋ ಹಾಡನ್ನು ರಿಲೀಸ್ ಮಾಡಿ ಇಬ್ಬರಿಗೂ ಶುಭ ಕೋರಿದೆ.
ಜೀವದ ಜೀವ ನೀ.. ಎಂದು ಶುರುವಾಗುವ ಹಾಡಿನಲ್ಲಿ ಅಭಿ ಮತ್ತು ರಚಿತಾ ಇಬ್ಬರ ಪ್ರೀತಿ ಪ್ರೇಮದ ದೃಶ್ಯಗಳನ್ನೇ ತೋರಿಸಿದ್ಧಾರೆ ದುನಿಯಾ ಸೂರಿ. ಸುಧೀರ್ ಕೆಎಂ ನಿರ್ಮಾಣದ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ. ಈಗಾಗಲೇ ಚಿತ್ರದ ರುದ್ರಾಭಿಷೇಕ, ಓಗ ಓಗ ಹಾಡುಗಳು ಹಿಟ್ ಆಗಿವೆ. ಒಂದು ಆರ್ಭಟಿಸಿದ್ದರೆ, ಮತ್ತೊಂದು ಮಾರ್ದನಿಸಿದೆ.
ಈಗ ಐ ಅಮ್ ಇನ್ ಲವ್ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದರೆ, ಚರಣ್ ರಾಜ್ ಮ್ಯೂಸಿಕ್ ಇದೆ. ಹಾಡಿರುವುದೂ ಕೂಡಾ ಅವರೇ. ಬ್ಯಾಡ್ ಮ್ಯಾನರ್ಸ್ ಅಕ್ಟೋಬರ್ ೨೭ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ.
ಅಂದಹಾಗೆ ಹಾಡು ನೋಡುತ್ತಿದ್ದರೆ ಸೂರಿಯವರಿಗೆ ಟಗರು ಚಿತ್ರದ ಮ್ಯಾಜಿಕ್ ರಿಪೀಟ್ ಆಗುವ ಸಾಧ್ಯತೆಗಳಿವೆ. ಇನ್ನು ಅಭಿಷೇಕ್ ಅವರಿಗೆ ಮೊದಲ ಚಿತ್ರ ಅಮರ್ ಅಷ್ಟೇನೂ ಖುಷಿ ಕೊಡಲಿಲ್ಲ. ದೊಡ್ಡ ಮಟ್ಟದ ಹಿಟ್ ಆಗಲಿಲ್ಲ. ದಿಗ್ಗಜ ನಟನೊಬ್ಬನ ಮಗನ ಎಂಟ್ರಿ ಸಿನಿಮಾವೊಂದು ಹೀಗೆ ಬಂದು ಹಾಗೆ ಹೋಯಿತು. ಅದೆಲ್ಲ ಲೆಕ್ಕವನ್ನೂ ಒಂದೇ ಸಾರಿಗೆ ಚುಪ್ತಾ ಮಾಡುವಂತಿದೆ ಬ್ಯಾಡ್ ಮ್ಯಾನರ್ಸ್ ಚಿತ್ರದ ಹಾಡುಗಳು..ದೃಶ್ಯಗಳು..ಇತ್ಯಾದಿ..ಇತ್ಯಾದಿ..



