ಗೆಳೆಯನ ಸೋದರಿಯನ್ನು ಲವ್ ಮಾಡುವ ಸ್ಟೋರಿಗಳಿವೆ. ಅಣ್ಣಂದಿರ ಫ್ರೆಂಡ್ಸ್ನ್ನು ಲವ್ ಮಾಡಿದ ಹುಡುಗಿಯರಿದ್ದಾರೆ. ಗೆಳೆಯ ಅಥವಾ ಗೆಳತಿ ಪ್ರೀತಿಸಿದ ಹುಡುಗಿ ಅಥವಾ ಹುಡುಗಿಯನ್ನೂ ಪ್ರೀತಿಸಿದವರಿದ್ದಾರೆ. ಆದರೆ ಈ ಕಥೆ ಹಾಗಲ್ಲ. ಇಲ್ಲಿ ಒಬ್ಬ ಯುವಕ, ಯುವತಿಯನ್ನು ಪ್ರೀತಿಸಿದ್ದಾನೆ. ಅದೇ ಯುವತಿಯ ಮೇಲೆ ಆತನ ಗೆಳೆಯನ ಕಣ್ಣು ಬಿದ್ದಿದೆ. ನನಗೆ ನಿನ್ನ ಹುಡುಗಿ ಇಷ್ಟ ಆಗಿದ್ದಾಳೆ, ಮದುವೆ ಮಾಡಿಕೊಡು ಎಂದ ಆತನ ಮಾತಿಗೆ, ಇವನೂ ತಗೋ ನನ್ನ ಗೆಳತಿಯನ್ನ ಮದುವೆ ಮಾಡಿಕೊ ಎಂದು ಬಿಟ್ಟುಕೊಟ್ಟಿದ್ದಾನೆ. ಇಂತಹ ವಿಚಿತ್ರ ಲವ್ ದೋಖಾ ಸ್ಟೋರಿ ನಡೆದಿರುವುದು ರಾಮನಗರದಲ್ಲಿ. Obsence love story
21 ವರ್ಷದ ಮಂಜು ಬಿಕಾಂ ಓದುತ್ತಿದ್ದ ಯುವತಿಯ ಜೊತೆ ಪ್ರೀತಿಗೆ ಬಿದ್ದಿದ್ದ. ಅವನಿಗೆ 33 ವರ್ಷದ ರವಿ ಎಂಬುವನ ಜೊತೆ ಗೆಳತನವಿತ್ತು. ಮಂಜುಗೆ ತಾನೊಂದು ಹುಡುಗಿಯನ್ನು ಪಟಾಯಿಸಿದ್ದೇನೆ ಎಂದು ಹೇಳಿಕೊಳ್ಳೋ ಚಟವಿತ್ತು. ಅದನ್ನು ಅವನು ರವಿಗೂ ತಿಳಿಸಿದ್ದ. ಇತ್ತ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಜೊತೆ ಫೋಟೋ ತೆಗೆಸಿಕೊಂಡಿದ್ದ. ಮಂಜು ಹಾಗೂ ರವಿ ಇಬ್ಬರೂ ಒಂದೇ ಗ್ರಾಮದವರು. ಮಂಜು ತಾನು ಮಾಡುತ್ತಿದ್ದ ಎಲ್ಲಾ ವಿಚಾರಗಳನ್ನು ರವಿ ಬಳಿ ಹೇಳಿಕೊಳ್ಳುತ್ತಿದ್ದ. ಮಂಜು ಹಾಗೂ ಯುವತಿಯ ಓಡಾಟ ನೋಡಿದ ರವಿ ತನ್ನ ಸ್ನೇಹಿತ ಮಂಜು ಬಳಿ ಹೋಗಿ ಆತನ ಗರ್ಲ್ ಫ್ರಂಡ್ ತನಗೆ ಕೊಡುವಂತೆ ಕೇಳಿದ್ದು, ಮಂಜು ಓಕೆ ಎಂದುಬಿಟ್ಟಿದ್ದಾನೆ.
ನಿನ್ನ ಗರ್ಲ್ ಫ್ರೆಂಡ್ Gril friend ನನಗೆ ಕೊಡು.ಅವಳನ್ನು ನಾನು ಮದುವೆಯಾಗುತ್ತೇನೆ. ನಿಂಗೇನು ನೋಡೋಕೆ ಸಖತ್ತಾಗಿದ್ದೀಯ, ಹುಡುಗೀರನ್ನ ಪಟಾಯಿಸ್ಕೋಬಹುದು ಎಂದು ರವಿ, ಮಂಜುಗೆ ಹುರಿದುಂಬಿಸಿದ್ದಾನೆ. ರವಿ ಮಾತಿಗೆ ಮರಳಾದ ಮಂಜು ತಗೋ ಮದುವೆ ಮಾಡಿಕೋ ಎಂದು ಯುವತಿಯನ್ನು ರವಿಯ ಜೊತೆ ಕಳಿಸಲು ಪ್ಲ್ಯಾನ್ ಮಾಡಿದ್ದಾನೆ. ಯುವತಿಯನ್ನು ಆಟದ ಗೊಂಬೆಯಂತೆ ತನ್ನ ಕೈಯಿಂದ ತನ್ನ ಸ್ನೇಹಿತನ ಕೈಗೆ ರವಾನಿಸುವಷ್ಟು ಸುಲಭವಾಗಿ ಯುವತಿಯನ್ನು ರವಿಯ ಜೊತೆ ಕಳಿಸಿದ್ದಾನೆ.
ಹಾಗಂತ ರವಿ ಅವಿವಾಹಿತನೇನೂ ಅಲ್ಲ. ರವಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಅವನಿಗೆ ಗರ್ಲ್‌ಫ್ರೆಂಡ್ ದಾನ ಕೊಟ್ಟವನು ಮಂಜು. ಅದೂ ಯುವತಿಗೂ ತಿಳಿಸದೆ ಬ್ಲಾಕ್ ಮೇಲ್ ಮಾಡಿ ರವಿಯ ಜೊತೆ ಕಳಿಸಿಕೊಟ್ಟಿದ್ಧಾನೆ. ಸೆ.19ನೇ ತಾರೀಖಿನಂದು ಭೇಟಿಯಾಗಲು ಯುವತಿಗೆ ಕರೆ ಮಾಡಿ ಕರೆಸಿಕೊಂಡಿದ್ದ. ಬಿ.ಕಾಂ ಕೊನೆಯ ಎಕ್ಸಾಂ ಅರ್ಧಕ್ಕೆ ಬಿಟ್ಟು ಯುವತಿ ಮಂಜುಗಾಗಿ ಓಡೋಡಿ ಬಂದಿದ್ದಳು. ಈ ವೇಳೆ ವಿನಾಯಕ ನಗರದ ಆಂಜಿನೇಯ ದ್ವಾರದ ಬಳಿ ರವಿ ಕಾದು ನಿಂತಿದ್ದ. ಈ ವೇಳೆ ರವಿ ಜೊತೆ ತೆರಳಲು ಯುವತಿಗೆ ಮಂಜು ಕರೆ ಮಾಡಿ ತಿಳಿಸಿದ್ದಾನೆ. ಇದಕ್ಕೆ ಯುವತಿ ಒಪ್ಪಿಕೊಂಡಿಲ್ಲ. ಆಗಲ್ಲ ಎಂದಿದ್ದಾಳೆ. ಆಗ ಮಂಜು ತನ್ನ ಬಳಿ ಇರುವ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.
ಬ್ಲ್ಯಾಕ್ ಮೇಲ್ಗೆ ಹೆದರಿದ ಯುವತಿ ರವಿ ಜೊತೆ ತೆರಳಿದ್ದಾಳೆ. ಬಳಿಕ ರವಿ ನಿರ್ಜನ ಪ್ರದೇಶಕ್ಕೆ ಯುವತಿಯನ್ನು ಕರೆದುಕೊಂಡು ಹೋಗಿ ತಾಯತದ ದಾರ ಕಟ್ಟಿ ಅದೇ ತಾಳಿ ನಾನು ನಿನ್ನ ಜೊತೆ ಮದುವೆ ಆಗಿದ್ದೀನಿ. ನಾನೇ ನಿನ್ನ ಗಂಡ ಎಂದು ಹೇಳಿದ್ದಾನೆ. ತನ್ನ ಊರಲ್ಲಿ ಇದ್ದರೆ ಯುವತಿ ಮನೆಯವರು ಬಂದು ಹಲ್ಲೆ ಮಾಡುತ್ತಾರೆಂದು ಸಂಜೆ ವೇಳೆ ಚಾಮರಾಜನಗರ ನಗರಕ್ಕೆ ತೆರಳಿದ್ದಾರೆ. ತನ್ನ ಸಂಬಂಧಿಕ ಮನೆಗೆ ತೆರಳಿ ಉಳಿದುಕೊಳ್ಳಲು ಜಾಗ ಕೇಳಿದ್ದಾರೆ. ಯುವತಿ ಪರಿಸ್ಥಿತಿ ಕಂಡು ಸಂಬಂಧಿಕರು ಅವಕಾಶ ಮಾಡಿ ಕೊಟಿಲ್ಲ. ಇವತ್ತು ಬೇಡ, ಬೆಳಿಗ್ಗೆ ಬಾ ಎಂದು ಕಳಿಸಿದ್ದಾರೆ. ಮತ್ತೆ ರಾತ್ರಿ ಚಾಮರಾಜನಗರ ನಗರದಿಂದ ತುಮಕೂರಿಗೆ ತೆರಳಿದ್ದ ರವಿ, ಯುವತಿಯನ್ನು ಬಲವಂತವಾಗಿ ಕೂಡಿ ಹಾಕಿ, ಈ ಹಿಂದೆ ಕೆಲಸ ಮಾಡುತ್ತಿದ್ದ ಮಾಲೀಕನ ಬಳಿ ಹೋಗಿ ಬಹಳ ವರ್ಷದಿಂದ ಯುವತಿ ಲವ್ ಮಾಡುತ್ತಿದ್ದೆ, ಮದುವೆ ಆಗಿದ್ದೀನಿ ಎಂದು ಕಥೆ ಕಟ್ಟಿದ್ದಾನೆ. ಇದೇ ವೇಳೆ ವಿಷಯ ಗೊತ್ತಾಗಿ ರವಿ ಟ್ರ್ಯಾಕ್ ಮಾಡುತ್ತಿದ್ದ ಐಜೂರು ಪೊಲೀಸರು ಮಂಜುನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.
ಇದೀಗ ಇಬ್ಬರೂ ಅರೆಸ್ಟ್ ಆಗಿದ್ದು, ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಆದರೆ ಪ್ರಿಯತಮ ಕರೆದನೆಂದು ಎಕ್ಸಾಂ ಬಿಟ್ಟು ಓಡಿ ಬಂದ ಹುಡುಗಿ, ಗೆಳೆಯ ಕೇಳಿದನೆಂದು ಪ್ರಿಯತಮೆಯನ್ನೇ ಬ್ಲಾಕ್ ಮೇಲ್ ಮಾಡುವ ಹುಡುಗ,.. ಯುವಕ ಯುವತಿಯರಿಗೆ ಲೋಕಜ್ಞಾನವೂ ಇಲ್ಲ. ಸ್ವಂತ ಆಲೋಚನೆಯೂ ಇಲ್ಲ ಎನ್ನುವುದನ್ನು ಸಾಬೀತು ಮಾಡಿದೆ.



