ಇನ್ನೊಂದೇ ಒಂದು ದಿನ. ನಾಳೆ ಅಂದರೆ ಜೂನ್ 4ರ ಮಧ್ಯಾಹ್ನದ ಹೊತ್ತಿಗೆ ಒಂದು ಕಂಪ್ಲೀಟ್ ಪಿಕ್ಚರ್ ಸಿಕ್ಕಿರುತ್ತದೆ. ದೇಶದ ಯಾವ ಸಮೀಕ್ಷೆಗಳಲ್ಲೂ ಎನ್ʻಡಿಎ ಸೋಲಲಿದೆ ಎಂದಾಗಲೀ, ಬಹುಮತಕ್ಕೆ ಕೊರತೆ ಬೀಳಲಿದೆ ಎಂದಾಗಲೀ ಎಕ್ಸಿಟ್ ಪೋಲ್ ಕೊಟ್ಟಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ನೀಡಿದ್ದ ಸಂಸ್ಥೆಗಳ ಸಮೀಕ್ಷೆಗಳಲ್ಲೂ ಎನ್ʻಡಿಎ ಅಧಿಕಾರಕ್ಕೇರುವುದು ನಿಶ್ಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್ಸಿನವರು ಒಪ್ಪುತ್ತಿಲ್ಲ. ಆ ಮಾತು ಬೇರೆ.
ಇದೇ ವೇಳೆ ನಾಡಿನ ಖ್ಯಾತ ಜ್ಯೋತಿಷಿಯೊಬ್ಬರು ಎನ್‌ಡಿಎ 400 ಗಡಿ ದಾಟಲಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಬಿಜೆಪಿ 315 ಸ್ಥಾನ ಗೆಲ್ಲಲಿದೆ ಎಂದಿದ್ದಾರೆ. ಹೀಗೆ ಭವಿಷ್ಯ ನುಡಿದಿರುವ ಜ್ಯೋತಿಷಿಯ ಹೆಸರು ಕೆಎಂ ಸಿನ್ಹ. ಕೆಎಂ ಸಿನ್ಹಾ ಅವರ ಪೂರ್ತಿ ಹೆಸರು ಕೃಷ್ಣ ಮುರಾರಿ ಸಿನ್ಹಾ. ಖ್ಯಾತ ಕುಂಡಲಿ ಜ್ಯೋತಿಷಿ, ಅಷ್ಟೇ ಅಲ್ಲ, ಈ ಹಿಂದೆ ಹಲವು ಭವಿಷ್ಯಗಳನ್ನು ಕರಾರುವಾಕ್ ಆಗಿ ನುಡಿದಿದ್ದವರು. ಕರ್ನಾಟಕದಲ್ಲಿ ಬಿಜೆಪಿ ಸೋಲಲಿದೆ ಎಂದು ಕೂಡಾ ಭವಿಷ್ಯ ಹೇಳಿದ್ದವರು.
ಕೇಜ್ರಿವಾಲ್ ಅರೆಸ್ಟ್, ಚಿನ್ನ ಮತ್ತು ಬೆಳ್ಳಿಯ ಬೆಲೆ 80 ಸಾವಿರ ಗಡಿ ದಾಟುವ ಬಗ್ಗೆ, ಷೇರು ಪೇಟೆ 75 ಸಾವಿರ ದಾಟುವ ಬಗ್ಗೆ ಸೇರಿದಂತೆ ಹಲವು ಭವಿಷ್ಯಗಳು ನಿಜವಾಗಿವೆ. ಇಂತಹ ಕೆಎಂ ಸಿನ್ಹಾ, ಬಿಜೆಪಿ, ಎನ್‌ಡಿಎ, ಕಾಂಗ್ರೆಸ್, ಇಂಡಿಯಾ ಒಕ್ಕೂಟ, ಚುನಾವಣೆ ದಿನಾಂಕ, ಫಲಿತಾಂಶ ಹಾಗೂ ರಾಹು ಕೇತುಗಳ ಲೆಕ್ಕಾಚಾರ ಆಧರಿಸಿ ಲೆಕ್ಕ ಹಾಕಿ ನಂಬರ್ ಹೇಳಿದ್ದಾರೆ.
5ನೇ ಮನೆಯಲ್ಲಿ ರಾಹು ಹಾಗೂ 7ನೇ ಮನೆಯಲ್ಲಿ ಸೂರ್ಯ ಇದ್ದಾಗ ಡೈರೆಕ್ಷನ್ ಸ್ಪಷ್ಟ ಎಂದಿರುವ ಸಿನ್ಹಾ, ಕುಂಡಲಿಗಳು ಬಿಜೆಪಿ ಹಾಗೂ ಎನ್‌ಡಿಎ ಪರವಾಗಿ ಗೋಚರಿಸುತ್ತಿದೆ. ನನ್ನ ಭವಿಷ್ಯ ಸುಳ್ಳಾಗುವುದಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಭವಿಷ್ಯದಲ್ಲಿ ಹೇಳಿದ ಸಂಖ್ಯೆಗಳನ್ನು ಪರಿಶೀಲಿಸಿ ಎಂದು ಸವಾಲ್ ಕೂಡಾ ಹಾಕಿದ್ಧಾರೆ.
ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ 25 ರಿಂದ 28 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದಿದ್ದಾರೆ. ಇದೇ ವೇಳೆ ಹಿಮಾಚಲದ 4 ಸ್ಥಾನ ಹಾಗೂ ಉತ್ತರಖಂಡದ 5 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ ಎಂದಿರುವ ಸಿನ್ಹಾ, ಬಿಜೆಪಿ ಸರ್ಕಾರ ಮಾಡಿದ ಪ್ರಮುಖ 2 ತಪ್ಪು ಎಂದರೆ ಒಂದು ಮಹಾರಾಷ್ಟ್ರ, ಮತ್ತೊಂದು ಬಿಹಾರ ಎಂದು ಅಭಿಪ್ರಾಯಪಟ್ಟಿದ್ಧಾರೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಪಕ್ಷಕ್ಕೆ ಸೇರಿಸಿಕೊಂಡು ಅಧಿಕಾರ ನೀಡಿರುವುದು ತಪ್ಪಾಗಿದೆ. ಇದೇ ರೀತಿ ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತೆ ಎನ್‌ಡಿಎ ಒಕ್ಕೂಟಕ್ಕೆ ವಾಪಸ್ ಆಗಿರುವುದು ಬಿಜೆಪಿ ಹೊಡೆತ ನೀಡಿದೆ ಎನ್ನುವುದು ಸಿನ್ಹಾ ಅವರ ಲೆಕ್ಕಾಚಾರ.
ಇದೇ ವೇಳೆ ಮಾಧವಿ ಲತಾ ಗೆಲುವು ಕಾಣಬೇಕು ಅನ್ನೋದು ನನ್ನ ಹಂಬಲ, ಆದರೆ ಕುಂಡಲಿಯಲ್ಲಿ ಮಾಧವಿ ಲತಾ ಸೋಲು ತೋರಿಸುತ್ತಿದೆ ಎಂದಿದ್ದಾರೆ ಸಿನ್ಹಾ. ಸಿನ್ಹಾ ಅವರ ಪ್ರಕಾರ ಎನ್‌ಡಿಎ 400 ಗಡಿ ದಾಟಲಿದೆ ಹಾಗೂ ಬಿಜೆಪಿ 315 ಸ್ಥಾನ ಗೆಲ್ಲಲಿದೆ.
ಮೇದಿನಿ ಜ್ಯೋತಿಷ್ಯದ ಆಧಾರದ ಮೇಲೆ, ಜೂನ್ 4ರ ನಂತರದ ಐದು ವರ್ಷಗಳ ಅವಧಿಯಲ್ಲಿ ಫಲಿತಾಂಶದ ದಿನ ಮಂಗಳವಾರ, ಮೋದಿಯವರ ಲಗ್ನ ವೃಶ್ಚಿಕ, ಅದು ಮಂಗಳ ರಾಶಿಯ ಅಧಿಪತಿ. ಹೀಗಾಗಿ ಬಿಜೆಪಿಗೆ ಹ್ಯಾಟ್ರಿಕ್ ನಿಶ್ಚಿತ ಎಂದೂ ಹೇಳಿರುವ ಸಿನ್ಹಾ 2024 – 2029ರ ಅವಧಿಯಲ್ಲಿ ಮಧ್ಯಮ ವರ್ಗದವರಿಗಾಗಿ ಬಿಜೆಪಿ ಸರ್ಕಾರ ಕೆಲಸ ಮಾಡಲಿದೆ. 11 ಸೆಪ್ಟಂಬರ್ 2025ಕ್ಕೆ ಚಂದ್ರದೆಶೆ ಮುಗಿದು ಮಂಗಳ ದೆಶೆ ಆರಂಭವಾಗಲಿದೆ. ಇದಾದ ನಂತರ, ಪ್ರಧಾನಮಂತ್ರಿ ಸ್ಥಾನದಿಂದ ನರೇಂದ್ರ ಮೋದಿಯವರು ಕೆಳಗೆ ಇಳಿಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಅವಧಿಯಲ್ಲಿ ಯೋಗಿ ಆದಿತ್ಯನಾಥ್ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.



