ಹಳೆ ಮೈಸೂರ ಭಾಗದಲ್ಲಿ ಒಕ್ಕಲಿಗರೇ ಪ್ರಾಬಲ್ಯ ಇರುವ ಕ್ಷೇತ್ರಗಳ ಸಂಖ್ಯೆ ಸುಮಾರು 60. ಬಿಜೆಪಿಯ ಸಂಪೂರ್ಣ ಬಹುಮತಕ್ಕೆ ಅಡ್ಡಿಯಾಗಿರುವುದು ಇವೇ 60 ಕ್ಷೇತ್ರಗಳು. ಕಾಂಗ್ರೆಸ್ಸಿಗೂ ಅಷ್ಟೆ. ಒಕ್ಕಲಿಗರ ಭದ್ರಕೋಟೆಯೇ ಅಡ್ಡಿ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅತ್ಯಂತ ಪ್ರಬಲವಾಗಿದೆ. ಲಿಂಗಾಯತರೇ ನಿರ್ಣಾಯಕವಾಗಿರುವ ಅಲ್ಲಿ ಕಾಂಗ್ರೆಸ್ ಸಖತ್ ಫೈಟ್ ಕೊಡುತ್ತದೆ ಎನ್ನವುದೂ ನಿಜ. ಅಂದಹಾಗೆ ಲಿಂಗಾಯತರು ಪ್ರಬಲವಾಗಿರುವ, ನಿರ್ಣಾಯಕವಾಗಿರುವ ಕ್ಷೇತ್ರಗಳ ಸಂಖ್ಯೆ ಸರಿಸುಮಾರು 100. ಇತ್ತ ಹಳೆ ಮೈಸೂರು ಭಾಗದಲ್ಲಿ ಕೂಡಾ ಜೆಡಿಎಸ್ ಬಿಟ್ಟ ವೋಟುಗನ್ನೇ ಕಾಂಗ್ರೆಸ್ ಪಡೆಯಬೇಕು. ಹೀಗೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಹಾಗೂ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ವೋಟು ಗಿಟ್ಟಿಸಲು ಕಾಂಗ್ರೆಸ್ ಹೋರಾಡುತ್ತಿದ್ದರೆ, ಅಮಿತ್ ಶಾ ಕೊಟ್ಟಿರುವ ಟಾಸ್ಕ್ ಕುತೂಹಲಕಾರಿ.
ಯಾರೇನೇ ಹೇಳಿದರೂ ಒಕ್ಕಲಿಗರಿಗೆ ಈಗಲೂ ದೇವೇಗೌಡರೇ ಅಚ್ಚುಮೆಚ್ಚಿನ ನಾಯಕ. ಕುಮಾರಸ್ವಾಮಿ ಬಗ್ಗೆ ಪ್ರೀತಿ ತುಸು ಅತ್ತಇತ್ತ ಜಗ್ಗುತ್ತಿದ್ದರೂ ಕಾಂಗ್ರೆಸ್ ಒಕ್ಕಲಿಗ ಲೀಡರ್ಸ್, ಜೆಡಿಎಸ್ ಮತಬುಟ್ಟಿಗೆ ಸಂಪೂರ್ಣ ಕೈ ಹಾಕೋಕೆ ಯಶಸ್ವಿಯಾಗಿಲ್ಲ. ಹೀಗಾಗಿಯೇ ಅಮಿತ್ ಶಾ ಕೊಟ್ಟಿರುವ ಟಾಸ್ಕ್ ಇಂಟ್ರೆಸ್ಟಿಂಗ್ ಅನ್ನಿಸಿದೆ.
ವರ್ಷದ ಕೊನೆಗೆ ಕರ್ನಾಟಕಕ್ಕೆ ಬಂದು ಹೋದ ಅಮಿತ್ ಶಾ, ದೇವೇಗೌಡರು, ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದ ಶ್ರೀಗಳ ಜೊತೆ ವೇದಿಕೆ ಹಂಚಿಕೊಂಡು ಒಂದು ಸಂದೇಶ ಕೊಟ್ಟಿದ್ದಾರೆ. ಇತ್ತೀಚೆಗೆ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದ ಶ್ರೀಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯವರೂ ವೇದಿಕೆ ಹಂಚಿಕೊಂಡಿದ್ದರು. ಈ ಮೂಲಕ ನೇರವಾಗಿ ನಾವೂ ಒಕ್ಕಲಿಗರ ಪರವಾಗಿದ್ದೇವೆ ಎಂಬ ಸಂದೇಶ ನೀಡುವ ಪ್ರಯತ್ನವನ್ನಂತೂ ಮೋದಿ-ಶಾ ಮಾಡುತ್ತಿದ್ದಾರೆ. ಬೆಂಗಳೂರಿಗೆ ಬರುವ ಮುನ್ನ ಸ್ಥಳೀಯ ಬಿಜೆಪಿಯವರ ಒಂದು ರಿಪೋರ್ಟ್ ತರಿಸಿಕೊಂಡಿದ್ದ ಅಮಿತ್ ಶಾ, ಇಲ್ಲಿನ ಲೋಕಲ್ ಲೀಡರ್ಸ್ ಭ್ರಮೆಯಲ್ಲಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ. ಸ್ಥಳೀಯ ನಾಯಕರ ರಿಪೋರ್ಟುಗಳು ಹಾಗೂ ಕೆಲವು ಸಂಘ ಪರಿವಾರದವರ ರಿಪೋರ್ಟುಗಳು ಬಿಜೆಪಿ ಸಮಸ್ಯೆಯೇ ಇಲ್ಲದೆ ಬಹುಮತ ಗಳಿಸುತ್ತದೆ ಎಂದು ಕೊಟ್ಟಿರುವ ರಿಪೋರ್ಟ್ ನೋಡಿ, ನಿಜಕ್ಕೂ ಕಂಗಾಲಾಗಿದ್ದಾರಂತೆ. ಏಕೆಂದರೆ ಶಾ ಅವರ ಒಂದು ದೊಡ್ಡ ತಂಡ ಈಗಾಗಲೇ ರಾಜ್ಯದಲಿದ್ದು ಕೊಟ್ಟಿರುವ ಸಮೀಕ್ಷೆಗೂ, ಈ ನಾಯಕರ ಸರ್ವೇಗೂ ತಾಳಮೇಳವೇ ಇಲ್ಲ. ಹೀಗಾಗಿಯೇ ಎಚ್ಚರಿಕೆ ಕೊಟ್ಟಿರುವ ಅಮಿತ್ ಶಾ ಹಳೆ ಮೈಸೂರು ಭಾಗದಲ್ಲಿ ಕನಿಷ್ಠ 35 ಸೀಟು ಗೆದ್ದರೆ ಅನುಕೂಲ ಎಂದು ಹೇಳಿದ್ದಾರಂತೆ. ಹಳೆ ಮೈಸೂರು ಭಾಗದಲ್ಲಿ 35 ಸೀಟು ಗೆದ್ದರೆ ಉತ್ತರ ಕರ್ನಾಟಕದಲ್ಲಿ 70ರಿಂದ 80 ಸೀಟು ಗೆಲ್ಲಬಹುದು ಎಂಬುದು ಶಾ ಲೆಕ್ಕ. ಆದರೆ ಉತ್ತರ ಕರ್ನಾಟಕದ ಟಾಸ್ಕ್‍ನ್ನು ಕಷ್ಟ ಪಟ್ಟರೆ ಮುಟ್ಟಬಹುದು, ಆದರೆ ಹಳೆ ಮೈಸೂರು ಭಾಗದಲ್ಲಿ ಅದು ಕಷ್ಟ. ಏಕೆಂದರೆ ಇಲ್ಲಿ ಸ್ಥಳೀಯ ಮಟ್ಟದ ನಾಯಕರೇ ಇಲ್ಲ ಎಂಬ ವರದಿ ಅಮಿತ್ ಶಾರಿಗೆ ತಲೆನೋವು ತಂದಿಟ್ಟಿದೆ. ಆದರೆ ಶಾ ಸಲೀಸಾಗಿ ಸೋಲೊಪ್ಪಿಕೊಳ್ಳುವವರಲ್ಲ. ಬೇರೆಯದೇ ಒಂದು ತಂತ್ರವನ್ನಂತೂ ಹೆಣೆಯುತ್ತಾರೆ.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್‍ಗೆ ಈಗಾಗಲೇ ಗೆಲುವು ಮೊದಲಿನಷ್ಟು ಸಲೀಸಲ್ಲ. ನಾವೂ ಇದ್ದೇವೆ ಎಂಬ ಸಂದೇಶವನ್ನಂತೂ ಕೊಟ್ಟಿದ್ದಾಗಿದೆ. ಆದರೆ 35 ತುಸು ಜಾಸ್ತಿ ಆಯಿತೇನೋ ಎಂದು ಅನಿಸೋದು ಸಹಜ. ಆದರೆ ಗುರಿ ನೀಡೋದಕ್ಕೇನೂ..
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes.The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.