ರಾಜ್ಯದಲ್ಲಿ ಸಂಥಿಂಗ್ ಸೆನ್ಸೇಷನ್ ಎಂಬಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಮೂರು ಫೋಟೋಗಳು ಸೃಷ್ಟಿಸಿರುವ ಸಂಚಲನ ಕಡಿಮೆಯದ್ದಲ್ಲ. ಆ ಫೋಟೋಗಳ ಹಿಂದೆ ನೂರಾರು ಕಥೆಗಳು, ನಿರೀಕ್ಷೆಗಳು ಹುಟ್ಟಿಕೊಂಡಿವೆ.
ಮೊದಲನೆಯ ಫೋಟೋ ಲೆಕ್ಕ ಹೇಳಬೇಕೆಂದರೆ, ಯಡಿಯೂರಪ್ಪ (BS yaddyurappa) ಅವರ ಮನೆಗೆ ಭೇಟಿ ನೀಡಿದ್ದ ಯಡಿಯೂರಪ್ಪ (CT Ravi) ಸಿಟಿ ರವಿ, ಯಡಿಯೂರಪ್ಪ ಕಾಲಿಗೆ ನಮಸ್ಕಾರ ಮಾಡಿದ್ದು. ಚುನಾವಣೆ ಸಂದರ್ಭದಲ್ಲಿ ಸಿಟಿ ರವಿ(CT Ravi), ವಿಜಯೇಂದ್ರ ಅವರ ಬಗ್ಗೆ ಮಾತನಾಡುತ್ತಾ ನಮ್ಮ ಪಕ್ಷದಲ್ಲಿ ಟಿಕೆಟ್, ಕಿಚನ್`ನಲ್ಲಿ ಫೈನಲ್ ಆಗಲ್ಲ ಎಂದಿದ್ದರು. ಪರೋಕ್ಷವಾಗಿ ಯಡಿಯೂರಪ್ಪ ಯಡಿಯೂರಪ್ಪ (BS yaddyurappa) ಅವರಿಗೆ ಟಾಂಗ್ ಕೊಟ್ಟಿದ್ದರು. ಅಷ್ಟೇ ಅಲ್ಲ, ಯಡಿಯೂರಪ್ಪ ಯಡಿಯೂರಪ್ಪ (BS yaddyurappa) ಸರ್ಕಾರದಲ್ಲಿ ಮಂತ್ರಿಗಿರಿ ಪಡೆದಾಗ ಸಿಟಿ ರವಿ ಸೃಷ್ಟಿಸಿದ್ದ ಗಲಾಟೆಯೂ ಸುದ್ದಿಯಾಗಿತ್ತು. ಅದಾದ ಮೇಲೆ ಪಕ್ಷದ ರಾಷ್ಟ್ರೀಯ ಹುದ್ದೆಗೆ ಹೋದ ಸಿಟಿ ರವಿ, ಯಡಿಯೂರಪ್ಪ ಅವರ ಜೊತೆ ಅಂತರ ಕಾಯ್ದುಕೊಂಡೇ ಇದ್ದರು. ಈ ಬಾರಿ ಸೋತರು. ಯಡಿಯೂರಪ್ಪ ಸಿಟಿ ರವಿ (CT Ravi) ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲಿಲ್ಲ. ಕೊನೆಗೆ ಯಡಿಯೂರಪ್ಪ ಅವರ ಫೋನ್ ಹೇಳಿಕೆಯನ್ನೇ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಯಿತು. ಈಗ ಇದ್ದಕ್ಕಿದ್ದಂತೆ ಯಡಿಯೂರಪ್ಪ ಮನೆಗೆ ಹೋದ ಸಿಟಿ ರವಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಕಥೆ ಏನೆಂದರೆ, ಸಿಟಿ ರವಿ (CT Ravi) ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಶಾಸಕರಲ್ಲದೇ ಇರುವುದರಿಂದ ಶಾಸಕಾಂಗ ಪಕ್ಷದ ನಾಯಕರಂತೂ ಆಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಬಹುದು ಎಂಬ ನಿರೀಕ್ಷೆ ಇದೆ.
ಇನ್ನು ವಿಜಯೇಂದ್ರ ಯಡಿಯೂರಪ್ಪ (Vijayendra Yedyurappa) ಅವರು ಅಮಿತ್ ಶಾ (Amith Shah) ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಬಗ್ಗೆಯೂ ಕಥೆಗಳಿವೆ. ಆದರೆ ವಿಜಯೇಂದ್ರ (Vijayendra Yedyurappa) ಅವರೇ ಹೇಳಿಕೊಂಡಂತೆ ಅವರು ಮೊದಲ ಬಾರಿಗೆ ಶಾಸಕರು. ಶಾಸಕರಾಗಿ ಆಯ್ಕೆಯಾದ ನಂತರ ಭೇಟಿ ಮಾಡಿರಲಿಲ್ಲ. ಹೀಗಾಗಿ ನಾನೇ ಸಮಯ ಕೇಳಿದ್ದೆ. ದೆಹಲಿಯಲ್ಲಿ ಹೋಗಿ ಭೇಟಿ ಮಾಡಿದೆ ಎಂದಿದ್ದಾರೆ ವಿಜಯೇಂದ್ರ.
ಕಥೆ ಏನೆಂದರೆ, ವಿಜಯೇಂದ್ರ (Vijayendra Yedyurappa) ಅವರ ಹೆಸರು ಪಕ್ಷದ ನಾಯಕತ್ವಕ್ಕೆ ಕೇಳಿ ಬರುತ್ತಿರುವುದೇ ಆಗಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ತರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆ ಮೂಲಕ ಯಡಿಯೂರಪ್ಪ ಜೊತೆಗೆ ಹೋಗಿದ್ದ ಮತಗಳೂ ವಾಪಸ್ ಬರುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನುವ ಲೆಕ್ಕಾಚಾರಗಳೂ ಇವೆ. ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಕೊಡುವ ಚಿಂತನೆಯೂ ಇದೆ. ಆದರೆ ಫಸ್ಟ್ ಟೈಂ ಎಂಎಲ್`ಎ ಎಂಬುದೇ ಅಡ್ಡಿಯಾಗಿದೆ ಎಂಬುದು ಒಂದು ಕಥೆ. ಆದರೆ, ಹೊಸತನದ ಹಠಕ್ಕೆ ಬಿದ್ದರೆ ವಿಜಯೇಂದ್ರ (Vijayendra Yedyurappa) ಶಾಸಕಾಂಗ ಪಕ್ಷದ ನಾಯಕರಾದರೂ ಅಚ್ಚರಿ ಇಲ್ಲ ಎನ್ನುತ್ತಿವೆ ಮೂಲಗಳು.
ಮೂರನೇ ಫೋಟೋ ನರೇಂದ್ರ ಮೋದಿ (PM Narendra Modi) ಮತ್ತು ತೇಜಸ್ವಿನಿ ಅನಂತಕುಮಾರ್ (Tejaswini AnanthKumar) ಅವರದ್ದು. ಅನಂತ್ ಕುಮಾರ್ ನಿಧನದ ನಂತರ ತೇಜಸ್ವಿನಿ (Tejaswini AnanthKumar) ಅವರನ್ನು ಬಿಜೆಪಿ ವರಿಷ್ಠರು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಮಾತು ವಿರೋಧ ಪಕ್ಷದಲ್ಲಿ ಜೋರಾಗಿದೆ. ಇತ್ತೀಚೆಗೆ ತೇಜಸ್ವಿನಿ ಅನಂತ್ ಕುಮಾರ್ (Tejaswini AnanthKumar) ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ದಟ್ಟವಾಗಿತ್ತು. ಆದರೆ ಅದಕ್ಕೆಲ್ಲ ತೇಜಸ್ವಿನಿ ಅನಂತ್ ಕುಮಾರ್ ನಾನು ಬಿಜೆಪಿ ಪಕ್ಷ ಮತ್ತು ಪಕ್ಷದ ಸಿದ್ಧಾಂತಗಳ ಜೊತೆ ದೃಢವಾಗಿ ನಿಂತಿದ್ದೇನೆ (ಇಂಗ್ಲಿಷಿನಲ್ಲಿ ಮದುವೆ ಮಾಡಿಕೊಂಡಿದ್ದೇನೆ ಎಂಬರ್ಥದಲ್ಲಿ) ಎಂದು ಟ್ವೀಟ್ ಮಾಡಿದ್ದರು. ಅದಾದ ನಂತರ ಮೋದಿ (PM Narendra Modi) ಮತ್ತು ತೇಜಸ್ವಿನಿಯವರ ಭೇಟಿಯ ಫೋಟೋ ಬಂದಿದ್ದು. ತೇಜಸ್ವಿನಿ ಅವರ ಚಿಕ್ಕ ಮಗಳ ಕೆನ್ನೆ ಚಿವುಟಿ ಮಾತನಾಡಿಸಿದ್ರಂತೆ ಮೋದಿ.
ಕಥೆ ಏನೆಂದರೆ, ತೇಜಸ್ವಿನಿಯವರಿಗೆ ಈ ಬಾರಿ ಟಿಕೆಟ್ ಸಿಗಬಹುದು ಎನ್ನಲಾಗಿದೆ. ಆದರೆ ಕ್ಷೇತ್ರ ಬದಲಾಬಹುದು ಎಂಬುದು ಒಂದು ಕಥೆ.



