ಚುನಾವಣೆ 4ನೇ ಹಂತ ನಡೆಯುತ್ತಿರುವಾಗ ಸಮೀಕ್ಷೆಗಳನ್ನು ಮಾಡುವಂತಿಲ್ಲ. ಆದರೆ.. ಭವಿಷ್ಯ ಹೇಳುವುದಕ್ಕೇನು ಸಮಸ್ಯೆ. ಏಕೆಂದರೆ.. ಭವಿಷ್ಯವನ್ನು ನಂಬುವವರ ಸಂಖ್ಯೆ ಹೆಚ್ಚಿದ್ದರೂ.. ಅದೊಂದು ಬೊಗಳೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಹೀಗಿರುವಾಗ.. ಕೆ.ಎಂ. ಸಿನ್ಹಾ ಎಂಬ ಖ್ಯಾತ ಜ್ಯೋತಿಷಿ ಪಕ್ಕಾ ಭವಿಷ್ಯದ ಲೆಕ್ಕ ಹೇಳಿದ್ಧಾರೆ.
ಈ ಹಿಂದೆಯೂ ಬಹುತೇಕ ಕರಾರುವಕ್ಕಾಗಿ ಭವಿಷ್ಯ ನುಡಿದಿರುವ ಕೆ.ಎಂ.ಸಿನ್ಹಾ, ಮೂರನೇ ಹಂತದ ಮತದಾನ ಮುಗಿದ ನಂತರ, ರಾಶಿಫಲಗಳ ಲೆಕ್ಕಹಾಕಿ, ಜ್ಯೋತಿಷ್ಯ ಭವಿಷ್ಯವನ್ನು ನುಡಿದಿದ್ದಾರೆ. 2019ರಲ್ಲಿ ಇದೇ ಕೆ.ಎಂ. ಸಿನ್ಹಾ ಕರಾರುವಾಕ್ ನಂಬರ್ ಕೊಟ್ಟಿದ್ದರು. ಬಿಜೆಪಿ ನೇತೃತ್ವದ ಎನ್ʻಡಿಎ 330ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲಲಿದೆ. ಬಿಜೆಪಿ ಏಕಾಂಗಿಯಾಗಿ 300ಕ್ಕಿಂತ ಹೆಚ್ಚು ಸೀಟು ಗೆಲ್ಲಲಿದೆ. ಅದಕ್ಕಿಂತ ಕಡಿಮೆಯಾಗುವುದು ಸಾಧ್ಯವೇ ಇಲ್ಲ ಎಂದಿದ್ದರು.
ಅದೇ ಕೆ.ಎಂ. ಸಿನ್ಹಾ ಈ ಬಾರಿ ಬಿಜೆಪಿ ನೇತೃತ್ವದ ಎನ್ʻಡಿಎ 400 ಸೀಟು ಗೆಲ್ಲಲು ಅಸಾಧ್ಯ ಎಂದಿದ್ದಾರೆ. ಆದರೆ ಸ್ಪಷ್ಟ ಬಹುಮತಕ್ಕೆ ತೊಂದರೆ ಇಲ್ಲ. ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆ ಎದುರಿಸಬೇಕಾಗುತ್ತದೆ. ಕರ್ನಾಟಕ, ಬಿಹಾರ, ಮಹಾರಾಷ್ಟ್ರ ಮತ್ತು ಪಂಜಾಬ್ ನಲ್ಲಿ ಬಿಜೆಪಿಗೆ ಹೊಡೆತ ಬೀಳಲಿದೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟ 18 – 20 ಸ್ಥಾನವನ್ನು ಮಾತ್ರ ಗೆಲ್ಲುವ ಸಾಧ್ಯತೆಯಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಒಂದೊಂದು ಸ್ಥಾನ ಗೆಲ್ಲಬಹುದಷ್ಟೇ. ಹೆಚ್ಚಿನ ಲಾಭ ಇಲ್ಲ. ಉತ್ತರ ಪ್ರದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ.
ಕೆ.ಎಂ. ಸಿನ್ಹಾ ಇಷ್ಟಕ್ಕೇ ಸುಮ್ಮನಾಗಿಲ್ಲ. ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಎಷ್ಟು ಸ್ಥಾನದಲ್ಲಿ ಗೆಲ್ಲಲಿದೆ ಎನ್ನುವುದನ್ನೂ ಹೇಳಿದ್ಧಾರೆ.
• ಆಂಧ್ರ ಪ್ರದೇಶ : 25ರಲ್ಲಿ 3 ರಿಂದ 5
• ಅಸ್ಸಾಂ : 14 ಸ್ಥಾನಗಳಲ್ಲಿ 12
• ಬಿಹಾರ : 40 ಕ್ಷೇತ್ರಗಳಲ್ಲಿ 28 ರಿಂದ 31
• ಛತ್ತೀಸಗಢ : 11ರಲ್ಲಿ 10
• ದೆಹಲಿ : 7ಕ್ಕೆ 7
• ಗುಜರಾತ್ : 26ಕ್ಕೆ 26
• ಹರಿಯಾಣ : 10ರಲ್ಲಿ 6 ರಿಂದ 7
• ಹಿಮಾಚಲ ಪ್ರದೇಶ : 4ಕ್ಕೆ ಎಲ್ಲ 4
• ಕರ್ನಾಟಕ : 28ರಲ್ಲಿ 18 ರಿಂದ 20
• ಕೇರಳ: 20 ಸ್ಥಾನಗಳಲ್ಲಿ ಕೇವಲ 1
• ಮಧ್ಯ ಪ್ರದೇಶ: 29ಕ್ಕೆ 28
• ಮಹಾರಾಷ್ಟ್ರ : 48ರಲ್ಲಿ 28 – 31
• ಒಡಿಶಾ : 21ರಲ್ಲಿ 10
• ಪಂಜಾಬ್ : 13ರಲ್ಲಿ ಕೇವಲ 2 ರಿಂದ 3
• ರಾಜಸ್ಥಾನ : 25ರಲ್ಲಿ 23 ರಿಂದ 25
• ತಮಿಳುನಾಡು: 38ರಲ್ಲಿ ಕೇವಲ 1 ಅಥವಾ 2
• ತಲಂಗಾಣ : 17ಕ್ಕೆ 6
• ಉತ್ತರ ಪ್ರದೇಶ : 80ಕ್ಕೆ 70
• ಉತ್ತರಾಖಂಡ : 5ಕ್ಕೆ ಎಲ್ಲ 5
• ಪಶ್ಚಿಮ ಬಂಗಾಳ : 42ರಲ್ಲಿ 25 ರಿಂದ 27
• ಜಮ್ಮು ಕಾಶ್ಮೀರ : 6ರ ಪೈಕಿ 4
• ಜಾರ್ಖಂಡ್ : 14 ಸ್ಥಾನಗಳ ಪೈಕಿ 12
ಇದು ಲೆಕ್ಕ. ಲೆಕ್ಕ ಬರೆದಿಟ್ಟುಕೊಳ್ಳಿ. ಜೂನ್ 4ರ ನಂತರ ತಾಳೆ ಹಾಕಿ ನೋಡಿ.



