ಜಗತ್ತಿನ ಟಾಪ್ ಉದ್ಯಮಿಗಳಲ್ಲೊಬ್ಬ ಎಲಾನ್ ಮಸ್ಕ್. ಆತ ಏನು ಮಾಡಿದರೂ ಸುದ್ದಿಯಾಗುತ್ತದೆ. ಆತನ ಒಂದು ಟ್ವೀಟ್‍ಗೆ ಜಗತ್ತಿನ ಇಂಡಿಸ್ಟ್ರಿಗಳನ್ನು ಮೇಲೆತ್ತುವ ತಾಕತ್ತಿದೆ. ಪಾತಾಳಕ್ಕೆ ದೂಕುವ ಶಕ್ತಿಯೂ ಇದೆ. ಆ ಎರಡನ್ನೂ ಸ್ವತಃ ಮಸ್ಕ್ ಅನುಭವಿಸಿದ್ದಾನೆ. ಈಗಆತ ಟ್ವಿಟ್ಟರ್‍ನ ಬಾಸ್. ಟ್ವಿಟ್ಟರ್ ತನ್ನ ವಶವಾಗುತ್ತಿದ್ದಂತೆಯೇ ಮಸ್ಕ್ ಮಾಡಿದ ಕೆಲಸವೇನು ಗೊತ್ತೇ..ಟ್ಟಿಟ್ಟವರ್ ಸಿಇಒ ಪರಾಗ್ ಅಗರ್‍ವಾಲ್‍ರನ್ನು ಹುದ್ದೆಯಿಂದ ಕಿತ್ತು ಹಾಕಿದ್ದು. ಅವರಷ್ಟೇ ಅಲ್ಲ, ಕಾನೂನು ಸಲಹೆಗಾರ ವಿಜಯ ಗದ್ದೆ, ಫೈನಾನ್ಷಿಯಲ್ ಆಫೀಸರ್ ನೆಡ್ ಸೆಗಲ್, ಸೀನ್ ಎಜೆಟ್.. ಸೇರಿದಂತೆ ಕೆಲವು ಎಕ್ಸಿಕ್ಯುಟಿವ್ ಹುದ್ದೆಗಳಿದ್ದವರನ್ನೇ ಹೊರ ಹಾಕಿದ್ದಾನೆ. ಇದರ ನಡುವೆಯೂ ಸುದ್ದಿಯಲ್ಲಿರೋದು ಈ ಡಯಾಬಿಟೀಸ್ ಮಾತ್ರೆಯಿಂದ ಎಲಾನ್ ಮಸ್ಕ್ ತೂಕ ಕಳೆದುಕೊಂಡ ಎನ್ನುವ ಸುದ್ದಿ.
ಈ ಸುದ್ದಿಯನ್ನು ಹೊರ ಜಗತ್ತಿಗೆ ಹೇಳಿದ್ದು ಬೇರಾರೋ ಅಲ್ಲ, ಸ್ವತಃ ಎಲಾನ್ ಮಸ್ಕ್. ಇತ್ತೀಚೆಗೆ ಡುಮ್ಮನಾಗಿದ್ದ ಎಲಾನ್ ಮಸ್ಕ್ ಸ್ಲಿಮ್ಮಾಗಿರುವ ಫೋಟೋವೊಂದನ್ನು ಹಾಕಿ ಉಪವಾಸ ಹಾಗೂ ಡಯಾಬಿಟೀಸ್ ಔಷಧಿಯಿಂದ ಸ್ಲಿಮ್ ಆದೆ ಎಂದು ಬರೆದುಕೊಂಡಿದ್ದರು. ಆ ಮಾತ್ರೆಯ ಹೆಸರು ವೆಗೋವಿ. ಅರೆ.. ಡಯಾಬಿಟೀಸ್ ಮೆಡಿಸಿನ್‍ಗೂ ತೂಕ ಕಳೆದುಕೊಳ್ಳೋದಕ್ಕೂ ಎಲ್ಲಿಂದ ಸಂಬಂಧ ಎಂದು ವೈದ್ಯಲೋಕ ಬೆಚ್ಚಿಬಿದ್ದಿತ್ತು.
ವೆಗೋವಿ. ಇಂಜೆಕ್ಟ್ ಮಾಡಬಹುದಾದ ಔಷಧ. ಇದು ಮಾತ್ರೆಯ ರೂಪದಲ್ಲೂ ಲಭ್ಯವಿದೆ. ಡಯಾಬಿಟೀಸ್ ನಿಯಂತ್ರಣ ತಪ್ಪಿದಾಗ ಬಳುಸವ ಹೆಚ್ಚು ಡೋಸ್ ಇರುವ ಡ್ರಗ್. ಇದನ್ನು ತೂಕ ಇಳಿಸಿಕೊಳ್ಳುವ ಔಷಧಿಯಾಗಿ ಅಮೆರಿಕದ ಯುಎಸ್‍ಎಫ್‍ಡಿಎ, ಜೂನ್ 2021ರಲ್ಲಿ ಅಂಗೀಕರಿಸಿದೆ. ಅಮೆರಿಕ ಅನುಮತಿ ಕೊಟ್ಟಿದೆಯೇ ಹೊರತು ಭಾರತ ಅಲ್ಲ. ಭಾರತದಲ್ಲಿ ಈ ಡ್ರಗ್‍ನ್ನು ಮಾರುವಂತೆಯೂ ಇಲ್ಲ. ಅಮೆರಿಕದಲ್ಲಿ ತೂಕವಿರುವ ದೇಹ ಇದ್ದು ಡಯಾಬಿಟೀಸ್ ಇದ್ದರೆ ವೈದ್ಯರು ರೋಗಿಗೆ ಒಂದಿಷ್ಟು ಪರೀಕ್ಷೆ ಮಾಡುತ್ತಾರೆ. ತೂಕದ ದೇಹ ಮತ್ತು ಡಯಾಬಿಟೀಸ್ ಎರಡೂ ಇರುವ ವ್ಯಕ್ತಿಗೆ ಹೈ ಬ್ಲಡ್ ಪ್ರೆಷರ್ (ಹೈಬಿಪಿ) ಅಥವಾ ನಿದ್ರಾ ಹೀನತೆ.. ಮೊದಲಾದ ಲಕ್ಷಣಗಳಿದ್ದರೆ ವೈದ್ಯರೇ ಇಡೀ ದೇಹವನ್ನು ಚೆಕಪ್ ಮಾಡಿ ಇಂಜೆಕ್ಟ್ ಮಾಡುತ್ತಾರೆ.


ಭಾರತದಲ್ಲಿ ಯಾವುದೇ ಡಯಾಬಿಟಿಕ್ ಡ್ರಗ್‍ನ್ನು ತೂಕ ಇಳಿಸಿಕೊಳ್ಳೋಕೆ ಒಳ್ಳೆಯದು ಎಂದು ಅಂಗೀಕರಿಸಿಲ್ಲ. ಇತ್ತೀಚೆಗೆ ಡಯಾಬಿಟಿಸ್ ಇಲ್ಲದವರೂ ಕೂಡಾ ತೂಕ ಇಳಿಸಿಕೊಳ್ಳೋಕೆ ಈ ಡ್ರಗ್ ಹುಡುಕಾಟದಲ್ಲಿದ್ದಾರೆ. ಇದನ್ನು ಬಳಸಿದರೆ ವೇಗವಾಗಿ ವೇಯ್ಟ್ ಲಾಸ್ ಮಾಡಿಕೊಳ್ಳಬಹುದು ಎಂದು ನೋಡುತ್ತಿದ್ದಾರೆ. ಅಂತಹ ಸಾಹಸ ಮಾಡಬೇಡಿ. ಅಪಾಯವನ್ನು ಮೈಮೇಲೆ ತಂದುಕೊಳ್ಳಬೇಡಿ ಎಂದಿದ್ದಾರೆ. ಅದರಲ್ಲೂ ಡಯಾಬಿಟಿಸ್ ವೈದ್ಯರು ಮತ್ತು ಸಂಘಟನೆಗಳು ಎಚ್ಚರಿಕೆ ನೀಡಿವೆ. ಅದರಲ್ಲಿಯೂ ಇವುಗಳನ್ನು ಡಾಕ್ಟರ್ ಬರೆಯದ ಹೊರತು ಯಾರಿಗೂ ಮಾರುವಂತಿಲ್ಲ ಎಂದೂ ಕೂಡಾ ಹೇಳಿದ್ದಾರೆ.



