ಈಗ ಬಿಡುವಿದ್ದರೆ ಸಾಕು, ಎಲ್ಲರೂ ಮೊಬೈಲಿನಲ್ಲಿ ಚಿತ್ರ ವಿಚಿತ್ರ ವಿಡಿಯೋ ನೋಡುವವರೇ. ಅಂತಹ ವಿಡಿಯೋ ನೋಡೋವ್ರಲ್ಲಿ ಕೆಲವರಿಗೆ ಪೋರ್ನ್ ನೋಡುವುದರಿಂದ ರಿಲ್ಯಾಕ್ಸ್ ಪಡೆಯುವವರ ಸಂಖ್ಯೆ ಹೆಚ್ಚೇ ಇದೆ. ಇದನ್ನು ಕೆಲವು ನೈತಿಕತೆ, ಇಮೇಜ್ ದೃಷ್ಟಿಯಿಂದ ಮುಚ್ಚಿಡ್ತಾರೆ. ಕೆಲವರಿಗೆ ಅದು ಟೆನ್ಷನ್ ರಿಲೀಫ್ ಮಾಡೊ ಮಾರ್ಗ. ಆನಂದಕ್ಕಾಗಿ ಅಶ್ಲೀಲತೆ ನೋಡುವುದೂ ಕೂಡಾ ಒಂದು ಚಟವೇ. ಒಂದು ಹಂತದವರೆಗೆ ಇದೆಲ್ಲ ಓಕೆ. ಆದರೆ ಮಿತಿ ಮೀರಿದರೆ ಅದೇ ದೊಡ್ಡ ಸಮಸ್ಯೆ. ಆಗ ಅದು ವ್ಯಸನವಾಗಿ, ರೋಗವಾಗಿ ಕಾಡುತ್ತೆ. ಅದು ಎಷ್ಟರಮಟ್ಟಿಗೆ ಅಂದ್ರೆ ಅಂತಹವರು ತಮ್ಮ ದೈನಂದಿನ ವೃತ್ತಿ ಮೇಲಿನ ಆಸಕ್ತಿಯನ್ನೂ ಕಳೆದುಕೊಳ್ತಾರೆ. ಅಷ್ಟೇ ಅಲ್ಲ, ಅದು ಹೆಚ್ಚಾದರೆ ನಿಜವಾದ ಆಟವೇ ಅವರಿಗೆ ಬೋರ್ ಬಂದು ಬಿಡಬಹದು.
ಒಬ್ಬ ವ್ಯಕ್ತಿಯು ಅಶ್ಲೀಲ ವಿಡಿಯೋಗಳಿಗೆ ಅಡಿಕ್ಟ್ ಆದರೆ ನೈಜ ಸುಖಕ್ಕಿಂತ ನೋಡುವುದರಲ್ಲೇ ಹೆಚ್ಚು ಸುಖ ಕಾಣೋಕೆ ಶುರು ಮಾಡ್ತಾನೆ. ಅದು ವೃತ್ತಿಯ ಕಥೆ ಬಿಟ್ಹಾಕಿ, ದಾಂಪತ್ಯ ಜೀವನಕ್ಕೇ ಕುತ್ತು ತಂದರೂ ಅಚ್ಚರಿ ಪಡಬೇಡಿ. ಏಕೆಂದರೆ ರಿಯಲ್ ಲೈಫಿನಲ್ಲಿ ಆ ವಿಡಿಯೋಗಳಲ್ಲಿರುವಂತೆ ಮಾಡೋಕೆ ಆಗಲ್ಲ. ಅದು ವಾಸ್ತವಿಕತೆಗೆ ದೂರವಿರುತ್ತೆ. ಅದನ್ನೇ ಸತ್ಯ ಎಂದು ನಂಬಿಕೊಂಡವರಿಗೆ ನಿಜವಾದ ಲೈಫಿನ ಸುಖ ಏನೇನೂ ಅಲ್ಲ ಅನ್ನಿಸೋಕೆ ಶುರುವಾಗುತ್ತೆ.
ಅಶ್ಲೀಲತೆಯನ್ನು ಅತಿಯಾಗಿ ನೋಡುವುದರಿಂದ ಮೊದಲು ಕೈ ಕೊಡೋದು ಏಕಾಗ್ರತೆ. ಮೊದಲೆಲ್ಲ ಹಿಡಿದ ಕೆಲಸವನ್ನು ಬಿಡದೆ ಮಾಡುತ್ತಿದ್ದವರಿಗೆ ಈ ಚಟ ಹತ್ತಿದರೆ ಮಾಡುವ ಕೆಲಸದ ಮೇಲೇ ಆಸಕ್ತಿ ಇರಲ್ಲ. ಏಕಾಗ್ರತೆಗೆ ಧಕ್ಕೆಯಾಗುತ್ತಿದೆ ಅನ್ನೋದು ಸ್ವತಃ ಅನುಭವಕ್ಕೆ ಬರುವುದಕ್ಕೆ ಶುರುವಾಗುತ್ತೆ. ಎಷ್ಟರಮಟ್ಟಿಗೆ ಎಂದರೆ ಸಂಗಾತಿಯೊಂದಿಗೆ ಇದ್ದಾಗ ಕೂಡಾ ಉದ್ರೇಕವಾಗೋದು ಕಡಿಮೆಯಾಗುತ್ತೆ.
ವಿಡಿಯೋದಲ್ಲಿರೋದೆಲ್ಲ ಸತ್ಯವಲ್ಲ. ನಾವು ಅಶ್ಲೀಲ ಅಥವಾ ಪೋರ್ನ್ ವಿಡಿಯೋದಲ್ಲಿ ನೋಡುವುದು ಅಸಲಿಯಂತೂ ಖಂಡಿತಾ ಅಲ್ಲ. ಸತ್ಯಕ್ಕೆ ದೂರವಾದ ನಕಲಿ ಎಂದು ಅರ್ಥ ಮಾಡಿಕೊಳ್ಳಬೇಕು. ವಿಕೃತವು ವಿಕೃತವೇ ಹೊರತು ಶೃಂಗಾರವಲ್ಲ. ಹಾಗಾಗಿ ಅದನ್ನು ಬದಿಗಿಟ್ಟು ಕಾಲ್ಪನಿಕ ಶೃಂಗಾರಕ್ಕೆ ತೊಡಗಿದರೆ ಅದು ವಿಡಿಯೋ ಅಡಿಕ್ಷನ್ಗಿಂತ ಉತ್ತಮವಾಗಿಯೇ ಇರುತ್ತದೆ. ಇಲ್ಲದೇ ಹೋದರೆ ಕಾಲ್ಪನಿಕ ಜಗತ್ತಿನಲ್ಲೇ ಮುಳುಗಿದರೆ ನಿಜವಾದ ಜಗತ್ತು ಹಚಾ ಎಂದು ಬಿಡುತ್ತದೆ.
ಅದನ್ನು ತಪ್ಪಿಸಿಕೊಳ್ಳೋಕೆ ನಾವು ಮಾಡಬೇಕಾದ ಮೊದಲ ಕೆಲಸ ಮೊಬೈಲ್ ಮತ್ತು ಕಂಪ್ಯೂಟರ್ನಿಂದ ದೂರವಿರೋದು. ಅದನ್ನೆಲ್ಲ ಬಿಟ್ಟು ಏಕ್ ದಂ ಧಾರ್ಮಿಕ ಕ್ರಿಯೆಗೆಲ್ಲ ಬರೋಕೆ ಆಗಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಹಂತ ಹಂತವಾಗಿ ನಮ್ಮ ದೈನಂದಿನ ದಿನಚರಿ ಬದಲಿಸಿಕೊಳ್ಳಲೇಬೇಕು.


ಧ್ಯಾನ ಆರಂಭಿಸಿದಾಗ ಮೊದಲೇ ಠುಸ್ ಆಗಿರುವ ಏಕಾಗ್ರತೆ ಬೇಗನೇ ಸಿದ್ಧಿಸುವುದಿಲ್ಲ. ನಿರಂತರವಾಗಿ ಧ್ಯಾನ ಮಾಡುತ್ತಾ ಹೋದರೆ ಬಲವಂತವಾಗಿ ವಿಡಿಯೋಗಳಿಂದ ದೂರವಾಗುತ್ತಾ ಹೋದರೆ ಕ್ರಮೇಣ ಹಿಡಿತ ಸಾಧಿಸಬಹುದು.



