Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Health

ಮೂಗಿನ ಮೂಲಕ ಬೂಸ್ಟರ್ ಡೋಸ್ : ಎಷ್ಟು ಸಲ ಹಾಕಿಸಬೇಕು? ಏನು ಲಾಭ?

SpeciallU by SpeciallU
December 24, 2022
in Health
Reading Time: 1 min read
0 0
0
ಮೂಗಿನ ಮೂಲಕ ಬೂಸ್ಟರ್ ಡೋಸ್ : ಎಷ್ಟು ಸಲ ಹಾಕಿಸಬೇಕು? ಏನು ಲಾಭ?

ಕೊರೊನಾ ಮತ್ತೆ ಬಂದಿದೆ. ಹೆಚ್ಚೂ ಕಡಿಮೆ ಎರಡು ವರ್ಷ ನರಕ ದರ್ಶನ ಮಾಡಿದ್ದ ಜನ ಈಗಷ್ಟೇ ಉಸಿರಾಡುತ್ತಿದ್ದಾರೆ. ಅತ್ತ ಚೀನಾದಲ್ಲೀಗ ದಿನಕ್ಕೆ 3.7 ಕೋಟಿ ರೋಗಿಗಳು ಹೊಸದಾಗಿ ಪತ್ತೆಯಾಗಿದ್ದಾರೆ. ಒಟ್ಟಾರೆ ಕಳೆದ 20 ದಿನಗಳಲ್ಲಿ 25 ಕೋಟಿ ಜನರಿಗೆ ಸೋಂಕು ತಗುಲಿದೆ. ಚೀನಾಕ್ಕೆ ಹೋಲಿಸಿದರೆ ಭಾರತಕ್ಕೆ ಆತಂಕವಿಲ್ಲ. ಏಕೆಂದರೆ ಚೀನಾ ತನ್ನ ದೇಶದ ಜನರಿಗೆ ಕೊಟ್ಟ ಕಳಪೆ ವ್ಯಾಕ್ಸಿನ್‍ನ್ನೇನೂ ಭಾರತ ಕೊಟ್ಟಿಲ್ಲ. ಭಾರತದ ವ್ಯಾಕ್ಸಿನ್ ಪರಿಣಾಮ ಶೇ.85ರಷ್ಟಿದೆ. ಚೀನಾದ ವ್ಯಾಕ್ಸಿನ್ ಎಫೆಕ್ಟ್ ಶೇ.40ರಷ್ಟು ಮಾತ್ರ. ಜೊತೆಗೆ ಚೀನಾದಂತೆ ಝೀರೋ ಕೋವಿಡ್ ಎಂಬ ಹುಚ್ಚಾಟ ಮಾಡದೆ ಭಾರತ, ಜನರ ಮಧ್ಯೆ ನ್ಯಾಚುರಲ್ ಇಮ್ಯುನಿಟಿ ಬೆಳೆಯಲು ಅವಕಾಶ ನೀಡಿದೆ.
ಈಗ ಪತ್ತೆಯಾಗಿರುವುದು ಚೀನಾದಲ್ಲಿ ಆರ್ಭಟಿಸುತ್ತಿರುವ ಬಿಎಫ್.7 ತಳಿಯ ಕೋವಿಡ್ ವೈರಸ್. ಇದು ಹೊಸ ವೈರಸ್ ಅಲ್ಲ. ಸುಮಾರು 2 ವರ್ಷಗಳಿಂದ ಇದೇ ಮಾದರಿಯ ವೈರಸ್ 90ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ಇದು ವೇಗವಾಗಿ ಹರಡುತ್ತದೆಯಷ್ಟೇ ಮಾರಣಾಂತಿಕವಲ್ಲ. ಇದು ಸದ್ಯಕ್ಕಿರೋ ವರದಿ. ಆದರೆ ಹಾಗಂತ ಸುಮ್ಮನಿರೋಕೆ ಸಾಧ್ಯವಿಲ್ಲ. ಮೊದಲೇ ದಿನಕ್ಕೊಂದು ರೂಪ ವೇಷ ಬದಲಿಸುತ್ತಿರೋ ರೋಗ. ಹೀಗಾಗಿಯೇ ಎಚ್ಚರಿಕೆಯಿಂದಿರುವುದು ಉತ್ತಮ.
ಈ ಹಾದಿಯಲ್ಲಿ ಭಾರತಕ್ಕೆ ಶಕ್ತಿ ನೀಡಿವುದು ನಮ್ಮದೇ ಪ್ರಬಲ ವ್ಯಾಕ್ಸಿನ್ಸ್. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡೂ ಪ್ರಬಲವಾಗಿದ್ದು, ಸೈಡ್ ಎಫೆಕ್ಟ್ ಇಲ್ಲ. ಆರಂಭದಲ್ಲಿ ಭಾರತೀಯ ಔಷಧಿಗಳನ್ನು ಅನುಮಾನದ ಕಣ್ಣಿಂದ ನೋಡಿದ್ದ ಜಗತ್ತು ಈಗ ಭಾರತವೇ ಬೆಸ್ಟ್ ಎನ್ನುವ ತೀರ್ಮಾನಕ್ಕೆ ಬಂದಿವೆ. ಇದರ ಜೊತತೆಗೆ ಜನರಲ್ಲಿ ನೈಸರ್ಗಿಕವಾಗಿ, ಪ್ರಕೃತಿದತ್ತ ರೋಗ ನಿರೋಧಕ ಶಕ್ತಿಯೂ ಬೆಳೆದಿದೆ. ಇದೆಲ್ಲದರ ಮಧ್ಯೆಯೇ ಬೂಸ್ಟರ್ ಡೋಸ್ ಅದನ್ನೂ ಮೂಗಿನ ಮೂಲಕ ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ. ಇನ್‍ಕೋವ್ಯಾಕ್ ಇಂಟ್ರಾನಾಸಲ್. ಇದನ್ನು ಅಭಿವೃದ್ಧಿ ಪಡಿಸಿರುವುದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್.

ಯಾರು ಪಡೆಯಬಹುದು?
ಈಗಾಗಲೇ ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಪಡೆದವರು ಬೂಸ್ಟರ್ ಡೋಸ್ ಪಡೆಯಬಹುದು. 18 ವರ್ಷ ಮೇಲ್ಪಟ್ಟಿರಬೇಕು.

Related posts

ಐಸಿಯುನಲ್ಲಿ ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ

ಮಕ್ಕಳಿಗೆ ಕಾಫ್‌ ಸಿರಪ್‌ ಬೇಡ : ಸಾವಿನ ಸರಣಿ ಬೆನ್ನಲ್ಲೇ ಸರ್ಕಾರ ಎಚ್ಚರಿಕೆ..!

ಎಲ್ಲಿ ಸಿಗುತ್ತೆ?
ಸದ್ಯಕ್ಕೆ ಇದು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯವಿದೆ. ಶೀಘ್ರದಲ್ಲೇ ಇನ್‍ಕೋವ್ಯಾಕ್ ಇಂಟ್ರಾನಾಸಲ್‍ನ್ನು ಕೋವಿಡ್ ಲಸಿಕಾ ವಿಭಾಗಕ್ಕೆ ಸೇರಿಸಲಾಗುವುದು. ಕೆಲವೇ ದಿನಗಳಲ್ಲಿ ಇದು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿಯೂ ಲಭ್ಯವಾಗಲಿದೆ.

ದುಡ್ಡು ಕೊಡಬೇಕಾ?
ಸದ್ಯಕ್ಕೆ ಸಿಗುತ್ತಿರುವುದು ಖಾಸಗಿ ಆಸ್ಪತ್ರೆಗಳಲ್ಲಾದ ಕಾರಣ ದುಡ್ಡು ಕೊಟ್ಟೇ ಲಸಿಕೆ ಪಡೆಯಬೇಕು. ಆಪ್‍ನಲ್ಲಿ ಎಲ್ಲ ಮಾಹಿತಿಯೂ ಇದ್ದು, ಬೇಕಾದವರು ಲಸಿಕೆ ಬುಕ್ ಮಾಡಿಕೊಳ್ಳಬಹುದು. ಸದ್ಯಕ್ಕೆ ವ್ಯಾಕ್ಸಿನ್ ಬಿಲ್ ಆಯಾ ಆಸ್ಪತ್ರೆಗಳು ವಿಧಿಸಿದ ದರದಲ್ಲೇ ಇರುತ್ತವೆ.

ಹೇಗೆ ನೀಡುತ್ತಾರೆ?
ಮೂಗು ಸೋರುತ್ತಿದ್ದಾಗ.. ಉಸಿರಾಟಕ್ಕೆ ತೊಂದರೆಯಾದಾಗ ಡ್ರಾಪ್ ಹಾಕಿಕೊಳ್ತೇವಲ್ಲ.. ಹಾಗೆಯೇ.. ನೇರವಾಗಿ ಮೂಗಿಗೆ ಡ್ರಾಪ್ ಹಾಕುವ ರೀತಿ ಹಾಕುತ್ತಾರೆ. 0.4 ಎಂಎಲ್ ಹಾಕುತ್ತಾರೆ.

ಎಷ್ಟು ಬಾರಿ ಹಾಕಿಸಿಕೊಳ್ಳಬೇಕು?
ಈಗಾಗಲೇ ವ್ಯಾಕ್ಸಿನ್ ಪಡೆದವರು ಎರಡು ಬಾರಿ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬೇಕು. ಮೊದಲ ಬಾರಿಯೂ 0.4 ಎಲ್‍ಎಲ್. ಎರಡನೇ ಬಾರಿಯೂ 0.4 ಎಂಎಲ್. ಎರಡು ಡೋಸ್‍ಗಳ ಮಧ್ಯೆ ಒಂದು ತಿಂಗಳು ಅಂದ್ರೆ 4 ವಾರಗಳ ಗ್ಯಾಪ್ ಇರಲಿದೆ.

ಏನು ಲಾಭ?
ಇಂಜೆಕ್ಷನ್, ಸೂಜಿಯ ಭಯ ಇಲ್ಲ. ಹೆಚ್ಚು ಬಾರಿ ಮೂಗಿನ ಮೂಲಕವೇ ವೈರಸ್ ಪ್ರವೇಶಿಸುತ್ತದೆ. ಈಗ ಮೂಗಿನಿಂದಲೇ ಡ್ರಾಪ್ ಹಾಕಲಾಗುತ್ತದೆ.

Tags: #Corona #Covid19 #Booster #BF.7 #Covishield #Covaxin #Noselvaccine #Bharathbiotech #Modi #Sudhakar#ಕೊರೊನಾ #ವ್ಯಾಕ್ಸಿನ್ #ಬೂಸ್ಟರ್ #2ನೇಡೋಸ್ #ಬಿಎಫ್.7 #ಕೊವ್ಯಾಕ್ಸಿನ್ #ಕೋವಿಶೀಲ್ಡ್ #ಭಾರತ್ #ಮೋದಿ #ಸುಧಾಕರ್
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.