ಕಾರಿನಲ್ಲಿ ಹತ್ತುತ್ತಿದ್ದಂತೆಯೇ ವಾಕರಿಕೆ. ಯಾರೋ ಮಲ್ಲಿಗೆ ಹೂವು ಮುಡಿದ ವಾಸನೆ ಬಂದರೆ ವಾಸನೆ ಇಷ್ಟವಾದರೂ ವ್ಯಾಕ್ವ್ಯಾಕ್. ಇದ್ದಕ್ಕಿದ್ದಂತೆ ಹೊಟ್ಟೆನೋವು. ಟಾಯ್ಲೆಟ್ಟಿಗೆ ಓಡಿ ಕುಳಿತರಷ್ಟೇ ಸಮಾಧಾನ. ವಿಪರೀತ ಎನ್ನಿಸುವ ಸುಸ್ತು.. ಹೀಗೆ ಹಲವು ಬಾಧೆ ಅನುಭವಿಸುವವರಿಗೆ ಶುಂಠಿಯೇ ಸಂಜೀವಿನಿ.
ಮನೆಯಲ್ಲಿ ತಯಾರಿಸುವ ಸಾಕಷ್ಟು ಅಡುಗೆಗಳಲ್ಲಿ ಶುಂಠಿ ಇರುತ್ತದೆ. ಶುಂಠಿಯ ರುಚಿಯಿಂದ ಅಡುಗೆಯ ಟೇಸ್ಟೂ ಬದಲಾಗುತ್ತದೆ. ಒಗ್ಗರಣೆಗೆ ಶುಂಠಿ ಬಳಸಿದಾಗ ಸಿಗುವ ಒಗರು ಒಗರಾದ ರುಚಿಯ ಗಮ್ಮತ್ತೇ ಬೇರೆ. ಕೇವಲ ರುಚಿಗಾಗಿ ಮಾತ್ರವಲ್ಲ, ಆರೋಗ್ಯದ ವಿಚಾರದಲ್ಲೂ ಕೂಡ ಶುಂಠಿ ತುಂಬಾ ಲಾಭಕಾರಿ. ಇಲ್ಲಿ ಈಗ ಪ್ರಶ್ನೆ ಎಂದರೆ ನಾವು ನಮ್ಮ ಆಹಾರ ಪದ್ಧತಿಯಲ್ಲಿ ಶುಂಠಿಯನ್ನು ಸೇರಿಸಿ ತಿನ್ನುವುದು ಮಾಮೂಲಿ. ಆದರೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಹೇಗೆ ಲಾಭಕಾರಿ ಎನ್ನುವ ವಿಷಯ.
ನಮ್ಮೆಲ್ಲರ ಅಡುಗೆ ಮನೆಗಳಲ್ಲಿ ಶುಂಠಿ ಇದ್ದೇ ಇರುತ್ತದೆ. ಇದಕ್ಕೆ ಕಾರಣ ಆಹಾರ ಪದಾರ್ಥ ಗಳಲ್ಲಿ ಇದು ಕೊಡುವ ರುಚಿ. ಜೊತೆಗೆ ಬಹಳ ಹಿಂದಿನಿಂದಲೂ ನಮ್ಮ ಆಯುರ್ವೇದ ಪದ್ಧತಿ ಕೂಡ ಶುಂಠಿಯನ್ನು ಅಪಾರವಾಗಿ ನಂಬಿದೆ. ನಿಮ್ಮ ಆರೋಗ್ಯಕ್ಕೆ ಶುಂಠಿ ತುಂಬಾ ಒಳ್ಳೆಯದು. ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ಸದಾ ನಿಮಗೆ ನೆನಪಿನಲ್ಲಿರಬೇಕು. ಅಪ್ಪಿತಪ್ಪಿ ಸೇವಿಸುವ ಪ್ರಮಾಣ ಹೆಚ್ಚಾದರೆ ಅದರಿಂದ ಎದೆಯುರಿ, ಹೊಟ್ಟೆಯ ಅಸ್ವಸ್ಥತೆ, ಭೇದಿ, ಚರ್ಮದ ಸಮಸ್ಯೆಗಳು ಹಾಗೂ ಇನ್ನಿತರ ಆರೋಗ್ಯ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ.
ಹೀಗಾಗಿಯೇ ನಮಗೆ ಬರುವ ಹೊಟ್ಟೆ ನೋವು, ವಾಕರಿಕೆ ಇತ್ಯಾದಿ ಜೀರ್ಣಾಂಗಕ್ಕೆ ಸಂಬಂಧ ಪಟ್ಟ ತೊಂದರೆಗಳನ್ನು ಇದು ಸರಿಪಡಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ರಕ್ತ ಸಂಚಾರಕ್ಕೆ ಸಂಬಂಧ ಪಟ್ಟಂತೆ ಇರುವ ಮಧುಮೇಹ ಮತ್ತು ರಕ್ತದ ಒತ್ತಡ ಸಮಸ್ಯೆಗಳನ್ನು ಸಹ ಇದು ಇಲ್ಲವಾಗಿ ಸುತ್ತದೆ. ಅನೇಕ ಸಮಸ್ಯೆಗಳಿಗೆ ರಾಮಬಾಣ ಈ ಶುಂಠಿ. ತಾಜಾ ಶುಂಠಿಯನ್ನು ಮಾತ್ರ ಅಡುಗೆ ಮತ್ತು ಚಹಾದಲ್ಲಿ ಬಳಸಲಾಗುತ್ತದೆ. ಆದರೆ, ಅರಿವಿನ ಕೊರತೆಯಿಂದ ನಾವು ಒಣಗಿದ ಶುಂಠಿಯನ್ನು ಎಸೆಯುತ್ತೇವೆ. ಆದರೆ ಹಾಗೆ ಮಾಡಬೇಡಿ. ಸಂಪೂರ್ಣವಾಗಿ ಒಣಗಿದ ಶುಂಠಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಶುಂಠಿ ಪುಡಿಯನ್ನು ಕಡ, ಚೂರಣ ರೂಪದಲ್ಲಿ ತೆಗೆದುಕೊಳ್ಳಬಹುದು.


ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದಾ? ತಿಂದರೆ ಏನಾಗುತ್ತದೆ? ಯಾವೆಲ್ಲ ಆರೋಗ್ಯ ಪ್ರಯೋಜನಗಳ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂಬ ಇತ್ಯಾದಿ ಪ್ರಶ್ನೆಗಳು ನಿಮ್ಮ ಮನಸ್ಸಿಗೆ ಬರುತ್ತವೆ. ಶುಂಠಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಪ್ರಪ್ರಥಮವಾಗಿ ನಿಮ್ಮ ದೇಹಕ್ಕೆ ಸಿಗುವ ಶಕ್ತಿಯ ಪ್ರಮಾಣ ಹೆಚ್ಚಾಗುತ್ತದೆ. ವಾಕರಿಕೆ ಮತ್ತು ವಾಂತಿ ತೊಂದರೆ ಇಲ್ಲವಾಗುತ್ತದೆ. ಒಣ ಶುಂಠಿ ಪುಡಿ ಗರ್ಭಿಣಿಯರಿಗೆ ವಾಕರಿಕೆ ಮತ್ತು ಬೆಳಗಿನ ಬೇನೆಯನ್ನು ನಿವಾರಿಸಲು ತುಂಬಾ ಉಪಯುಕ್ತವಾಗಿದೆ. ಳಿಗ್ಗೆ ಇದನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು. ಅರ್ಧ ಚಮಚ ಶುಂಠಿ ಪುಡಿಯನ್ನು ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಬೆಳಿಗ್ಗೆ ಕುಡಿಯಿರಿ. ಸಿಹಿ ರುಚಿಗೆ ಜೇನುತುಪ್ಪ ಸೇರಿಸಿ. ಇದು ಬೆಳಗಿನ ಬೇನೆ ಮತ್ತು ವಾಕರಿಕೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಮಾಯವಾಗುತ್ತವೆ, ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು ಮಾರಣಾಂತಿಕ ಹೃದಯ ಕಾಯಿಲೆಗೆ ಕಾರಣವಾಗಬಹುದು. ಅದಕ್ಕಾಗಿಯೇ ಶುಂಠಿ ಪುಡಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.ಇದರ ಜೊತೆಗೆ ಮೈ ಕೈ ನೋವು ಹಾಗೂ ಮುಟ್ಟಿನ ನೋವು ಸಹ ನಿಯಂತ್ರಣವಾಗುತ್ತದೆ. ತಾಜಾ ಶುಂಠಿಯ ಸೇವನೆಯಿಂದ ದೇಹದ ಉಷ್ಣತೆಯನ್ನು ಕಡಿಮೆಯಾಗುತ್ತದೆ. ಅಲ್ಲದೆ ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಬಿಸಿ ಚಹಾದೊಂದಿಗೆ ಒಟ್ಟಿಗೆ ತೆಗೆದುಕೊಳ್ಳಬೇಕು.
ವಿವಿಧ ರೀತಿಯಲ್ಲಿ ಶುಂಠಿಯನ್ನು ದೇಹಕ್ಕೆ ನೀಡಬಹುದು. ಶುಂಠಿಯನ್ನು ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡು ಸೇವಿಸಬಹುದು. ಪ್ರಮುಖವಾಗಿ ಬೆಳಗಿನ ಸಂದರ್ಭದಲ್ಲಿ ಖಾಲಿ ಹೊಟ್ಟೆಯಲ್ಲಿ ಶುಂಠಿ ವಾಟರ್ ತಯಾರಿಸಿ ಕುಡಿಯಬಹುದು. ಇದಕ್ಕಾಗಿ ನಿಮಗೆ ಹಸಿ ಶುಂಠಿ, ನಿಂಬೆ ಹಣ್ಣಿನ ರಸ, ಎಳನೀರು, ಕಾಳು ಮೆಣಸು ಬೇಕು. ಎಲ್ಲವನ್ನು ಸೇರಿಸಿ ಮಿಕ್ಸರ್ ಜಾರ್ ನಲ್ಲಿ ಬ್ಲೆಂಡ್ ಮಾಡಿ ಇದನ್ನು ಸೋಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಶುಂಠಿಯು ಶೀತ, ಕೆಮ್ಮು ಮತ್ತು ಜ್ವರವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಬೆವರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಮೈಗ್ರೇನ್ ನೋವಿಗೆ ಹಸಿ ಶುಂಠಿ ಸೇವನೆ ತುಂಬಾ ಪ್ರಯೋಜನಕಾರಿ ಆಗಿದ್ದು, ಮೈಗ್ರೇನ್ ಇರುವವರು ಪ್ರತಿದಿನ ಹಸಿ ಶುಂಠಿಯನ್ನು ಸೇವಿಸಬೇಕು. ದಣಿವು ನಿವಾರಣೆಗೆ ಶುಂಠಿ ಸೇವನೆ ಉತ್ತಮವಾಗಿದೆ. ಶುಂಠಿಯಲ್ಲಿ ಆಂಟಿಹಿಸ್ಟಾಮೈನ್ ಗುಣಗಳು ಇವೆ. ಹೀಗಾಗಿ ಅಲರ್ಜಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಲ್ಲದೆ ತಾಜಾ ಶುಂಠಿ ರಸ ಮತ್ತು ಮೆಂತ್ಯದ ಮಿಶ್ರಣವು ಅಸ್ತಮಾವನ್ನು ಗುಣಪಡಿಸಲು ಸಹಾಯಕವಾಗಿದೆ.



