

3 ಡಬಲ್ ಸೆಂಚುರಿ ಗುರೂ.. ನಿಮ್ ಕೊಹ್ಲಿ ಹೊಡ್ದವ್ನಾ.. ಸುಮ್ನೆ ಸೆಂಚುರಿ ಹೊಡ್ಯೋದಲ್ಲ..
ಕೊಹ್ಲಿ ಫಿಟ್‍ನೆಸ್ ನೋಡು.. ನಿಮ್ ರೋಹಿತ್ ಹೊಟ್ಟೆ ಡುಮ್ಮಣ್ಣ..
ಹೊಟ್ಟೆ ಅಲ್ಲ.. ಹಿಟ್ ಮಾಡೋದು ನೋಡು. ಹಿಟ್‍ಮ್ಯಾನ್.. ಹಿಟ್‍ಮ್ಯಾನ್..
ಒಂದು ಓವರಲ್ಲಿ ಆರೂ ಬಾಲಿಗೆ ಓಡಿ ರನ್ ತಗೊಳ್ಳಾಕುತ್ತಾ ನಿಮ್ ರೋಹಿತ್`ಗೆ..
ಒಂದ್ಸಲ ಕಪ್ ಗೆಲ್ಲೋಕಾಗುತ್ತಾ ನಿಮ್ ಆರ್.ಸಿ.ಬಿ.ಗೆ..


ವಿಘ್ನೇಶ್ ಎಂಬುವನು ಕೊಲೆಯಾದವನು. ಧರ್ಮರಾಜ್ ಎಂಬುವನು ಆರೋಪಿ. ಇವರಿಬ್ಬರೂ ಸ್ನೇಹಿತರು. ಕೊಲೆಯಾದ ವಿಘ್ನೇಶ್ ಮುಂಬೈ ಇಂಡಿಯನ್ಸ್ ಅಂದ್ರೆ ರೋಹಿತ್ ಶರ್ಮಾ ಫ್ಯಾನ್. ಧರ್ಮರಾಜ್ ಆರ್‍ಸಿಬಿ ಅಂದ್ರೆ ಕೊಹ್ಲಿ ಫ್ಯಾನ್. ಐಟಿಐ ಮುಗಿಸಿ ಸಿಂಗಾಪೂರ್‍ನಲ್ಲಿ ಕೆಲಸವೂ ಆಗಿತ್ತು. ಹೋಗಲು ಕಾಯುತ್ತಿದ್ದರು. ಈ ಮಧ್ಯೆ ಡ್ರಿಂಕ್ಸ್‍ಗೆಂದು ಹೋದಾಗ ಮಾತಿಗೆ ಮಾತು ಬೆಳೆದು ರಾದ್ಧಾಂತವಾಗಿದೆ. ಕೊಹ್ಲಿಯ ಫ್ಯಾನ್ ಧರ್ಮರಾಜ್ ಡುಮ್ಮನಿದ್ದು ಅದನ್ನೇ ಕೊಲೆಯಾದ ವಿಘ್ನೇಶ್ ಲೇವಡಿ ಮಾಡಿದ್ದಾನೆ. 




