ಮಂಗಳೂರಿನಲ್ಲಿ ನಡೆದ ಅದೃಷ್ಟವಶಾತ್ ತಪ್ಪಿಹೋದ ಭಯೋತ್ಪಾದಕ ಕೃತ್ಯದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ಪಂಪ್‍ವೆಲ್ ಬಳಿ ಕುಕ್ಕರ್ ಬಾಂಬ್ ಸ್ಫೋಟಿಸಿದ್ದು ಶಂಕಿತ ಉಗ್ರ ಶಾರೀಕ್. ತೀರ್ಥಹಳ್ಳಿಯವನು. ವಯಸ್ಸಿನ್ನೂ ಜಸ್ಟ್ 24. ಈ ಶಾರೀಕ್ ಜೊತೆ ನಂಟು ಹೊಂದಿದ್ದವರು ಅದೇ ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ ಹಾಗೂ ದುಬೈನಲ್ಲಿರೋ ಅರಾಫತ್ ಅಲಿ.

ಕುಕ್ಕರ್‍ನಲ್ಲಿ ಬಾಂಬಿಟ್ಟುಕೊಂಡು ಸ್ಕೆಚ್ ಹಾಕಿದ್ದ ಶಾಕೀರ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯವನು. ಬಿಕಾಂ ಓದಿದ್ದ. 2020ರ ನ.27ರಂದು ಹಾಗೂ 28ರಂದು ಉಗ್ರರ ಪರವಾದ ಬರಹ ಬರೆದಿದ್ದ. ಈ ಬಗ್ಗೆ ಮಂಗಳೂರಿನ ಪೂರ್ವ ಠಾಣೆಯಲ್ಲೊಂದು ಮತ್ತು ಉತ್ತರ ಠಾಣೆಯಲ್ಲೊಂದು ಕೇಸ್ ದಾಖಲಾಗಿತ್ತು. ಅರೆಸ್ಟ್ ಆಗಿ ನಂತರ ಜಾಮೀನು ಪಡೆದು ಬಟ್ಟೆ ಅಂಗಡಿ ನಡೆಸುತ್ತಿದ್ದ. ಬಟ್ಟೆ ಬ್ಯುಸಿನೆಸ್‍ನಲ್ಲಿ ಸೌದಿ ಅರೇಬಿಯಾದ ಕೆಲವರ ಸಂಪರ್ಕಕ್ಕೆ ಬಂದೂಬಿಟ್ಟ. ಅದೇ ಹೊತ್ತಿನಲ್ಲಿ ಸಂಪರ್ಕಕ್ಕೆ ಬಂದವನು ಮಹಮ್ಮದ್ ಮತೀನ್. ಈ ಮತೀನ್ ತಂದೆಯೇ ಕಾರ್ಗಿಲ್ ವೀರ. ನಿವೃತ್ತ ಯೋಧ.
ಶಂಕಿತ ಉಗ್ರ ಮತೀನ್ ತಲೆಮರೆಸಿಕೊಂಡು ಮೂರು ವರ್ಷಗಳಾಗಿವೆ. ಈತನ ತಲೆಗೆ 2 ಲಕ್ಷ ರೂ. ಬಹುಮಾನವನ್ನೂ ಎನ್‍ಐಎ ಘೋಷಿಸಿದೆ. ಈ ಮತೀನ್ ಈ ಹಿಂದೆ ತುಂಗಾ ನದಿತೀರದಲ್ಲಿ ಬಾಂಬ್ ಸ್ಫೋಟದ ಪ್ರಯೋಗ ನಡೆಸಿದ್ದ. ಮಂಗಳೂರು ಉಗ್ರರ ಪರ ಬರಹ ಪ್ರಕರಣದಲ್ಲಿ ಇದಾ ಶಾರೀಕ್ ಜೊತೆ ಈತನೂ ಆರೋಪಿ. ಈತನ ತಂದೆ ನಿವೃತ್ತ ಯೋಧ. ಕಾರ್ಗಿಲ್‍ನಲ್ಲಿಯೂ ಪಾಕಿಸ್ತಾದ ವಿರುದ್ಧ ಯುದ್ಧ ಮಾಡಿದ್ದ ಸೈನಿಕ. ಮನ್ಸೂರ್ ಅಹ್ಮದ್.
ಮಾಜಿ ಯೋಧ ಮನ್ಸೂರ್ ಅಹ್ಮದ್ ಅವರ ಮೂರು ಮಕ್ಕಳಲ್ಲಿ ಈತನೇ ಮೊದಲನೆಯವನು. ಎಂಜಿನಿಯರಿಂಗ್ ಓದಲು ಬೆಂಗಳೂರಿಗೆ ಹೋಗಿದ್ದ. ಹಾಗಂತ ಅರೇಬಿಕ್ ಭಾಷೆಯೂ ಬರುತ್ತಿರಲಿಲ್ಲ ಎನ್ನುತ್ತಾರೆ ಈತನ ತಂದೆ ಮನ್ಸೂರ್ ಅಹ್ಮದ್. ಆದರೆ ಈಗಲೂ ಅವರಿಗೆ ತಮ್ಮ ಮಗ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿದ್ದಾನೆ ಎನ್ನುವುದನ್ನು ಈಗಲೂ ನಂಬುವುದಕ್ಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ. ಶಾರೀಕ್ ಜೊತೆಗಿನ ಕುಕ್ಕರ್ ಬಾಂಬ್ ಸ್ಫೋಟದಲ್ಲಷ್ಟೇ ಅಲ್ಲ, ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಆರ್.ಎಸ್.ಎಸ್. ಮುಖಂಡನ ಕೊಲೆ ಆರೋಪದಲ್ಲಿ ಈತ ಆರೋಪಿ ನಂ.1
ಆದರೆ ನಿವೃತ್ತ ಯೋಧ ಮನ್ಸೂರ್ ಅಹ್ಮದ್ ತಮ್ಮ ಮಗ ನಾಪತ್ತೆಯಾಗಿರುವ ಬಗ್ಗೆ ದೂರು ಕೊಟ್ಟಿಲ್ಲವಂತೆ. ಅಲ್ಲದೆ ಮೀಡಿಯಾದಲ್ಲಿ ಹೇಳುತ್ತಿದ್ದೀರಿ. ನನಗೆ ಗೊತ್ತಿಲ್ಲ. ನಮ್ಮ ಮಗ ಅಂತಹ ಕೆಲಸ ಮಾಡಲ್ಲ ಎನ್ನುವ ವಿಶ್ವಾಸದಲ್ಲಿದ್ದಾರೆ ಮನ್ಸೂರ್ ಅಹ್ಮದ್. ತಮ್ಮ ಮಗ ಮತೀನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎನ್ನುತ್ತಾರೆ ಆತನ ತಾಯಿ.



