ಮಂಗಳೂರಿನಲ್ಲಿ ಇದೇ ಶನಿವಾರ ಸಂಜೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅದೃಷ್ಟವೂ ಜನ ಮತ್ತು ಪೊಲೀಸರ ಜೊತೆಗಿತ್ತು. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಆಟೋ ಹಾಳಾದರೂ, ಯಾವುದೇ ಪ್ರಾಣಾಪಾಯವಾಘಲಿಲ್ಲ. ಆಟೋ ಡ್ರೈವರ್ ಪುರುಷೋತ್ತಮ್ ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ಆರೋಪಿ ಶಾಕೀರ್ ಕೂಡಾ ಗಾಯಗೊಂಡು ಸಿಕ್ಕಿಬಿದ್ದ. ಶೇ.45ರಷ್ಟು ಸುಟ್ಟ ಗಾಯಗಳಾಗಿದ್ದ ಶಾಕೀರ್ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಈತನ ಜೊತೆಗಾರರಾದ ಮಾಸ್ಟರ್ ಮೈಂಡ್‍ಗಳ ಹುಡುಕಾಟವೂ ನಡೆಯುತ್ತಿದೆ.
ಆದರೆ ಪ್ರಕರಣದಲ್ಲಿ ಮತ್ತೊಮ್ಮೆ ಇದನ್ನು ಹಿಂದೂಗಳ ತಲೆಗೆ ಕಟ್ಟುವ ಸಂಚು ನಡೆದಿತ್ತೇ ಎಂಬ ಅನುಮಾನವೂ ಮೂಡುತ್ತಿದೆ. ಕಾರಣ, ಒಂದು ಆಧಾರ್ ಕಾರ್ಡ್. ಆರೋಪಿ ಶಾಕೀರ್ ಹೆಸರು ಆಧಾರ್ ಕಾರ್ಡ್ ಪ್ರಕಾರ ಪ್ರೇಮ್ ರಾಜ್ ಎಂದಿತ್ತು. ಆ ಪ್ರೇಮ್ ರಾಜ್ ತುಮಕೂರಿನ ರೈಲ್ವೇ ಇಲಾಖೆಯಲ್ಲಿ ಇಂಜಿನಿಯರ್. ಜೊತೆಗೆ ಈತ ಸೊಂಟಕ್ಕೆ ಕೇಸರಿ ಶಾಲು ಕಟ್ಟಿಕೊಂಡಿದ್ದ. ಹಾಗೂ ಆತನ ಬಳಿ ಒಂದು ಲಿಕ್ಕರ್ ಬಾಟಲ್ ಇತ್ತು. ಇದೆಲ್ಲವೂ ಶಾರೀಕ್
ಸೆ.15ರಂದು ಶಿವಮೊಗ್ಗದಲ್ಲಿ ಗಲಾಟೆ. ಪ್ರೇಮ್ ಸಿಂಗ್ ಎಂಬುವನಿಗೆ ಚಾಕು ಇರಿತ. ಅಲ್ಲಿ ನಾಲ್ವರನ್ನು ಅರೆಸ್ಟ್ ಮಾಡಲಾಗಿತ್ತು. ಹಾಗೆ ಅರೆಸ್ಟ್ ಆಗಿದ್ದ ಜಬೀವುಲ್ಲನ ಮೊಬೈಲ್‍ನಲ್ಲಿ ಬರಿಯ ಐಸಿಸ್, ಅಲ್‍ಕೈದಾ ಸೇರಿದಂತೆ ಭಯೋತ್ಪಾದಕರ ವಿಡಿಯೋಗಳೇ ಇದ್ದವು. ಅವನ ಗೆಳೆಯರ ಬಳಿಯೂ ಅಂತಹವೇ ಇದ್ದವು. ಅವು ಎಲ್ಲಿಂದ ಬರುತ್ತಿದೆ ಎಂದು ಹುಡುಕುತ್ತಾ ಹೊರಟಾಗ ತೀರ್ಥಹಳ್ಳಿಯ ತುಂಗಾ ತೀರದಲ್ಲಿ ಟ್ರಯಲ್ ಬಾಂಬ್ ಸ್ಫೋಟಿಸಿ, ರಾಷ್ಟ್ರಧ್ವಜವನ್ನು ಸುಟ್ಟ ವಿಡಿಯೋ ಇದ್ದವು. ಆ ಪ್ರಕರಣದಲ್ಲಿ ಇದ್ದ ಶಾರೀಕ್ ಈ ಮೊದಲು ಮಂಗಳೂರಿನಲ್ಲಿ ಗೋಡೆ ಬರಹ ಬರೆದು ಆರೋಪದಲ್ಲಿ ಅರೆಸ್ಟ್ ಆಗಿದ್ದವನು. ಸಂಘಿಗಳಿಗೆ ಎಚ್ಚರಿಕೆ. ತಾಲಿಬಾನಿಗಳನ್ನು ಕರೆಸುವಂತೆ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟ ಬರಹವದು. ಅದೆಲ್ಲವನ್ನೂ ಬಿಟ್ಟು ಈಗ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಸಿಕ್ಕಿಬಿದ್ದರುವ ಶಾರೀಕ್, ಕುಕ್ಕರ್ ಬಾಂಬ್ ಇಟ್ಟುಕೊಂಡು ಫೋಟೋ ತೆಗೆಸಿಕೊಂಡಿದ್ದಾನೆ. ಇದರ ಸಂದೇಶ ಇಷ್ಟೆ, ಅವನೊಬ್ಬ ಆತ್ಮಹತ್ಯಾ ಬಾಂಬರ್ ಆಗಲು ಸಿದ್ಧನಾಗಿದ್ದ. ಜೊತೆಗೆ ಹಿಂದೂ ಹೆಸರಿನ ಪ್ರೇಮರಾಜ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್, ಸೊಂಟದಲ್ಲಿ ಶಾಲು ಹಾಗೂ ಲಿಕ್ಕರ್ ಬಾಟಲ್ ಇಟ್ಟುಕೊಂಡಿದ್ದ. ಈ ಮೂಲಕ ತಾನೊಬ್ಬ ಹಿಂದೂ ಹೊರತು, ಮುಸಲ್ಮಾನ್ ಅಲ್ಲ ಎಂದು ತೋರಿಸುವ ಸಂಚು ರೂಪಿಸಿದ್ದ. ಅಂದರೆ ಹಿಂದೂ ಹೆಸರು ಹಾಗೂ ಕೇಸರಿ ಶಾಲು ಯಾಕೆ ಎನ್ನಬಹುದು? ಕಟ್ಟರ್ ಮುಸಲ್ಮಾನರು ಲಿಕ್ಕರ್ ಕುಡಿಯುವುದಿಲ್ಲ ಎನ್ನುವದು ನಂಬಿಕೆ. ಈ ಕಾರಣಕ್ಕಾಗಿಯೇ ಪೊಲೀಸರ ದಿಕ್ಕು ತಪ್ಪಿಸಲು ಶಾರೀಕ್ ಲಿಕ್ಕರ್ ಬಾಟಲ್ ಕೂಡಾ ಇಟ್ಟುಕೊಂಡಿದ್ದನೇ ಎಂಬ ಶಂಕೆಯೂ ಇದೆ.
ಈ ಮೂಲಕ ಕಾಶ್ಮೀರದ ಹೊರಗೂ ಆತ್ಮಹತ್ಯಾ ಬಾಂಬ್ ದಾಳಿಕೋರರು ಸಜ್ಜಾಗಿದ್ದಾರೆ ಎಂಬ ಸುಳಿವು, ಆತಂಕಕಾರಿ ಈ ಘಟನೆಯದ್ದು. ಈ ಹಿಂದೆ ಮುಂಬೈ ದಾಳಿ ನಡೆದಾಗಲೂ ಇಂಥದ್ದೇ ಆರೋಪ ಕೇಳಿ ಬಂದಿತ್ತು. ಆಗ ಇದ್ದದ್ದು ಯುಪಿಎ ಸರ್ಕಾರ. ಕಾಂಗ್ರೆಸ್‍ನ ದಿಗ್ವಿಜಯ್ ಸಿಂಗ್, ಚಿದಂಬರಂ, ಅಟಾವಳೆ ಸೇರಿದಂತೆ ಹಲವರು ಇದು ಕೇಸರಿ ಭಯೋತ್ಪಾದನೆ ಎಂದು ಕೂಗು ಹಾಕಿದ್ದರು. ಕಸಬ್ ಕೈಲಿದ್ದ ಒಂದು ಕೇಸರಿ ದಾರವನ್ನು ತೋರಿಸಿಯೇ ಆತ ಹಿಂದೂ ಉಗ್ರ ಎಂಬ ಹಣೆಪಟ್ಟಿ ಕಟ್ಟಿದ್ದರು. ಅದೃಷ್ಟವಶಾತ್ ಕಸಬ್ ಸಿಕ್ಕಿಬಿದ್ದ. ಇಲ್ಲದೇ ಹೋಗಿದ್ದರೆ ಮುಂಬೈ ದಾಳಿಯಲ್ಲಿಯೇ ಹಿಂದೂಗಳು ಹಾಗೂ ಹಿಂದೂ ಪರ ಸಂಘಟನೆಗಳಿಗೆ ಭಯೋತ್ಪಾದಕರು ಎಂಬ ಹಣೆಪಟ್ಟಿ ಕಟ್ಟಿಬಿಡುತ್ತಿದ್ದರು.
ಈಗಲೂ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಂತಹುದೇ ಸಂಚನ್ನು ಉಗ್ರರು ರೂಪಿಸಿದ್ದರು ಎಂಬುದು ಈ ಮೂಲಕ ಗೊತ್ತಾಗುತ್ತಿದೆ.



