

ಕೇರಳದ ಪತ್ತನಂತಿಟ್ಟದಲ್ಲಿ ಬಯಲಿಗೆ ಬಂದ ಇಬ್ಬರು ಮಹಿಳೆಯರ ನರಬಲಿ ಕೃತ್ಯ ದೇಶದಾದ್ಯಂತ ಆಘಾತ ಮೂಡಿಸಿದೆ. ನರಬಲಿ ನೀಡಿದರೆ ಶ್ರೀಮಂತಿಕೆ ಬರುತ್ತದೆ ಎಂಬ ಮೂಢನಂಬಿಕೆಯಿಂದ ಇಬ್ಬರನ್ನು ಬಲಿಕೊಟ್ಟಿರುವ ಘಟನೆಗಿಂತಲೂ, ಅದನ್ನು ನಡೆಸಿರುವ ರೀತಿ ಮತ್ತಷ್ಟು ಭೀಭತ್ಸವಾಗಿದೆ. ಪತ್ತನಂತಿಟ್ಟದ ಎಲಂತೂರ್ ಗ್ರಾಮದಲ್ಲಿರುವ ಆರೋಪಿ ದಂಪತಿ ಭಗವಾಲ್ ಸಿಂಗ್ ಮತ್ತು ಲೈಲಾ. ಭಗವಾನ್ ಸಿಂಗ್ ಮಸಾಜ್ ಪಾರ್ಲರ್ ನಡೆಸುತ್ತಿದ್ದ. ಲೈಲಾ ಗೃಹಿಣಿ. ಆದರೆ ಇವರಿಬ್ಬರು ನಡೆಸಿದ ನರಬಲಿ, ಆ ಕ್ರೌರ್ಯ ದೇಶವನ್ನೇ ಬೆಚ್ಚಿಬೀಳಿಸಿದೆ.
ಸಂಪತ್ತಿನ ಆಸೆಗಾಗಿ ಪದ್ಮಾ ಮತ್ತು ರೋಸ್ಲಿನ್ ಇಬ್ಬರನ್ನೂ ಕೊಂದ ದುಷ್ಕರ್ಮಿಗಳು, ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಹಿತ್ತಲಿನಲ್ಲಿ ಹೂತು ಹಾಕಿದ್ದರು. ಅವರ ದೇಹಗಳಿಂದ ಚಿಮ್ಮಿದ ರಕ್ತವನ್ನು ಮಾಟಮಂತ್ರದ ವಿಧಾನಕ್ಕೆ ಅನುಗುಣವಾಗಿ ಮನೆಯ ಗೋಡೆ ಮತ್ತು ನೆಲದ ಮೇಲೆಲ್ಲಾ ಚೆಲ್ಲಲಾಗಿತ್ತು. ಪೊಲೀಸರಿಗೂ ಇದು ಶಾಕ್. ಬಲಿಕೊಟ್ಟ ಮಹಿಳೆಯರಿಬ್ಬರೂ ಹೊಟ್ಟೆಪಾಡಿಗಾಗಿ ಬೀದಿಗಳಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಅಮಾಯಕಿಯರು. ಇವರಿಬ್ಬರಿಗೆ ಗೈಡ್ ಮಾಡಿದ್ದವನ ಹೆಸರು ಮಹಮ್ಮದ್ ಶಫಿ ಅಲಿಯಾಸ್ ರಷೀದ್. ಇವನೇ ಮಾಸ್ಟರ್ ಮೈಂಡ್.
ಇಬ್ಬರು ಮಹಿಳೆಯರ ನರಬಲಿ ಕೊಟ್ಟರೆ ಸಂಪತ್ತು ಸಿಗುತ್ತದೆ ಹಾಗೂ ಅವರ ಮಾಂಸವನ್ನು ತಿಂದರೆ ಯೌವ್ವನ ಶಾಶ್ವತವಾಗಿ ಉಳಿಯುತ್ತದೆ ಎಂದು ಭಗವಾಲ್ ಸಿಂಗ್ ಮತ್ತು ಲೈಲಾ ದಂಪತಿಯನ್ನು ನಂಬಿಸಿದ್ದ.ಇನ್ನು ಭಗವಾಲ್ ಸಿಂಗ್ ಹೈಕು ಕವಿತೆ ಬರೆಯುತ್ತಿದ್ದವನು. ಅದು ಜಪಾನ್ ಟ್ರೆಡಿಷನ್. ಸ್ಥಳೀಯವಾಗಿ ಸಣ್ಣ ಪುಟ್ಟ ವೈದ್ಯವನ್ನೂ ಮಾಡುತ್ತಿದ್ದವನು. ಸಿಪಿಎಂ ಕಾರ್ಯಕರ್ತ. ಸ್ಥಳೀಯ ಘಟಕದಲ್ಲಿ ಕಾರ್ಯದರ್ಶಿಯೂ ಆಗಿದ್ದ. ದೇವರನ್ನೇ ನಂಬದ ಪಕ್ಷದ ಕಾರ್ಯಕರ್ತನಾಗಿದ್ದವನು ದೆವ್ವದ ಬಲೆಗೆ ಬಿದ್ದಿದ್ದ. ವಯಸ್ಸು 68 ವರ್ಷ. ಈತನ ಪತ್ನಿ ಲೈಲಾಗೆ 59. ಈ ವಯಸ್ಸಿನಲ್ಲೂ ಯೌವ್ವನದ ಆಸೆಗೆ ಬಿದ್ದ ಇವರಿಬ್ಬರೂ ಕೊಲೆ ಮಾಡಿದ್ದಷ್ಟೇ ಅಲ್ಲ, ಅವರ ಮಾಂಸವನ್ನೂ ತಿಂದಿದ್ದರು. ಮಾಸ್ಟರ್ ಮೈಂಡ್ ಮಹಮ್ಮದ್ ಶಫಿ ಅಲಿಯಾಸ್ ರಷೀದನೇ ಅದನ್ನು ಹೇಳಿಕೊಟ್ಟಿದ್ದ.
ಶ್ರೀದೇವಿ ಅನ್ನೋ ಫೇಕ್ ಹೆಸರಲ್ಲಿ ಪರಿಚಯವಾಗಿದ್ದ ರಷೀದ್ ನಂತರ ದಂಪತಿಯ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದ. ನಂತರ ಶತ್ರುಗಳನ್ನು ನಿಶ್ಯಕ್ತರಾಗುವಂತೆ ಮಾಡಲು ರಷೀದ್ ಮತ್ತು ಲೈಲಾ ಸೆಕ್ಸ್ ಮಾಡಬೇಕು. ಅದೂ ಭಗವಾಲ್ ಸಿಂಗ್ ಎದುರಿಗೇ ಮಾಡಬೇಕು. ಇದು ಸಂಭೋಗ ಪ್ರಯೋಗ ಎಂದು ನಂಬಿಸಿ ಹಲವು ಬಾರಿ ಭಗವಾಲ್ ಸಿಂಗ್ ಜೊತೆ ಸೆಕ್ಸ್ ನಡೆಸಿದ್ದ.ತದನಂತರ ನಿನ್ನ ಪಾಪಕರ್ಮಗಳನ್ನೆಲ್ಲ ತೊಳೆದು ಹಾಕಲು ನರಬಲಿ ಕೊಡಬೇಕು. ಅದರಿಂದ ಪಾಪ ಕರ್ಮಗಳೆಲ್ಲ ನಿವಾರಣೆಯಾಗುವುದರ ಜೊತೆಗೆ ಸಂಪತ್ತು ಕೂಡಾ ಸಿಗುತ್ತದೆ ಹಾಗೂ ಬಲಿ ಕೊಟ್ಟವರ ಮಾಂಸ ತಿಂದರೆ ಯೌವ್ವನವೂ ಇರುತ್ತದೆ ಎಂದು ನಂಬಿಸಿದ್ದ.

ಅದಾದ ಮೇಲೆ ಲಾಟರಿ ಮಾರುವ ಪದ್ಮಾಳನ್ನು ನಂಬಿಸಿ, ಅಶ್ಲೀಲ ವಿಡಿಯೋದಲ್ಲಿ ನಟಿಸಿದರೆ 10 ಲಕ್ಷ ಕೊಡುವ ಆಸೆ ತೋರಿಸಿ ಕರೆತಂದು ಕತ್ತು ಸೀಳಿ ಬಲಿ ಕೊಟ್ಟಿದ್ದ. ಇದು ಜೂನ್ 8ರಂದೇ ನಡೆದಿತ್ತು. ಕಂಪ್ಲೇಂಟ್ ಆಗಸ್ಟ್ 27ರಂದು ದಾಖಲಾಗಿತ್ತು.ಎರಡನೆಯ ಮಹಿಳೆಗೂ ಅದೇ ರೀತಿ ಟ್ರ್ಯಾಪ್ ಮಾಡಿ ತಮಿಳುನಾಡಿನಿಂದ ಕರೆತಂದಿದ್ದ. ಸೆಪ್ಟೆಂಬರ್ 26ರಂದು ಅವಳನ್ನೂ ಮುಗಿಸಿದ್ದ. ನಂತರ ಇಬ್ಬರ ಮೃತದೇಹದ ಭಾಗಗಳನ್ನು ತಾನೆ ಕತ್ತರಿಸಿ ಅಡುಗೆ ಮಾಡಿ ಗಂಡ ಹೆಂಡತಿಗೆ ತಿನ್ನಿಸಿದ್ದ.
ಇನ್ನು ಶ್ರೀದೇವಿ ಹೆಸರು ಹೇಳಿಕೊಂಡು ದಂಪತಿಗೆ ಗಾಳ ಹಾಕಿದ್ದ ಶಫಿ, ಈಗ ಭಗವಾಲ್ ಸಿಂಗ್ನ ಪತ್ನಿ ಲೈಲಾಳನ್ನು ತಿಂದು ಮುಗಿಸಿದ್ದ. ಮಂತ್ರಶಕ್ತಿಗಳ ಹೆಸರಲ್ಲಿ ಪತಿಯ ಎದುರೇ ಹೆಂಡತಿಯನ್ನು ಅನುಭವಿಸಿದ್ದ. ಸ್ವತಃ ಭಗವಾನ್ ಲಾಲ್ ಹೆಂಡತಿಯ ಕೈ ಕಟ್ಟಿ ಹಾಕಿ ಆಕೆಯ ಜೊತೆ ಸೆಕ್ಸ್ ಮಾಡುವಂತೆ ರಷೀದನನ್ನು ಬಿಟ್ಟಿದ್ದ. ಅವನಿಗೆ 75 ವರ್ಷ. ಆತನ ಮೇಲೆ ಕೊಲೆ ಯತ್ನ, ಅತ್ಯಾಚಾರ ಹಾಗೂ ಅತ್ಯಾಚಾರ ಯತ್ನದ 10ಕ್ಕೂ ಹೆಚ್ಚು ಕೇಸ್ ಇದ್ದವು.



