ತಂದೆ ಮತ್ತು ಮಗಳ ನಡುವೆ ಇರುವ ಬಾಂಧವ್ಯವೇ ಬೇರೆ. ಪ್ರತಿಯೊಬ್ಬ ತಂದೆಗೂ ಮಗಳು ರಾಜಕುಮಾರಿಯಾದರೆ, ಮಗಳಿಗೆ ಅಪ್ಪನೇ ಸೂಪರ್ ಪವರ್ ಇರೋ ಸೂಪರ್ ಮ್ಯಾನ್. ಆದರೆ ತಂದೆಯನ್ನೇ ಮದುವೆಯಾಗಿದ್ದೇನೆ ಎಂದು ಹೇಳಿಕೊಳ್ಳೋ ಘಟನೆ ಕೇಳಿದ್ದೀರಾ.. (Father Daughter relationship) ನೋಡಿದ್ದೀರಾ.. ಉತ್ತರ ಪ್ರದೇಶದಲ್ಲಿ ಅಂತಾದ್ದೊಂದು ಘಟನೆ ನಡೆದಿದೆ.
ಉತ್ತರ ಪ್ರದೇಶದ (Uttar Pradesh) ಇಟಾಹ್ ಜಿಲ್ಲೆಯಲ್ಲಿನ ಮೊಹ್ಸಿನಾ ಪರ್ವೆಜ್ ಇಂತಹ ಮಗಳು. ಈಕೆ ತನ್ನ ತಂದೆಯನ್ನೇ ಗಂಡ ಎಂದು ಹೇಳಿಕೊಂಡು ಬದುಕಿದ್ದಳು. ಅದೂ.. ಒಂದಲ್ಲ..ಎರಡಲ್ಲ.. 11 ವರ್ಷ. ಗಂಡನೆಂದು ಹೇಳಿಕೊಂಡಿದ್ದ ಅಪ್ಪ ಸತ್ತು 10-11 ವರ್ಷಗಳೇ ಕಳೆದಿದ್ದರೂ, ಈಕೆ ಮಾತ್ರ ಅಪ್ಪನಿಗೆ ತಕ್ಕ ಹೆಂಡತಿಯಾಗಿಯೇ ಇದ್ದಳು. ದುಡ್ಡಿಗಾಗಿ.
ಮೊಹ್ಸಿನಾ ಪರ್ವೆಜ್ ಮೃತ ತಂದೆಯ ಪತ್ನಿ ಎಂದು ಹೇಳಿಕೊಂಡು ಕಳೆದ 10 ವರ್ಷದಿಂದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದಳು. ಶೇಷವೆಂದರೆ ಪೊಲೀಸರಿಗೆ ಇದರ ಕುರಿತಾದ ಮಾಹಿತಿ ನೀಡಿದ್ದು ಮೊಹ್ಸಿನಾ ಪರ್ವೇಜ್ ಪತಿ. ಆತ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮೊಹ್ಸಿನಾ ಪರ್ವೇಜ್ರನ್ನು ಬಂಧಿಸಿದ್ದಾರೆ. ಮೊಹ್ಸಿನಾ ಪರ್ವೆಜ್ ಕಳೆದ 10 ವರ್ಷಗಳಲ್ಲಿ ಸರ್ಕಾರದಿಂದ ಬರೋಬ್ಬರಿ 12 ಲಕ್ಷ ರೂಪಾಯಿ ಪಿಂಚಣಿ ಹಣ ಪಡೆದಿದ್ದಳು. ಹಾಗಂತ ಗಂಡನಿಗೆ ಗೊತ್ತೇ ಇರಲಿಲ್ಲ ಎಂದಲ್ಲ.
ತನ್ನ ಹೆಂಡತಿ ಆಕೆಯ ತಂದೆಗೆ ಹೆಂಡತಿಯಾಗಿ ಬದುಕಿದ್ದಾಳೆ. ಆಕೆಗೆ ಪಿಂಚಣಿ ಬರುತ್ತಿದೆ ಎಂದು ಆತನಿಗೂ ಗೊತ್ತಿತ್ತು. ಆದರೆ ತಾನು ಕೇಳಿದಾಗ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಜಗಳ ಮಾಡಿದ್ದಾನೆ. ಗಂಡ ಹೆಂಡತಿಯ ಜಗಳ ತಾರಕಕ್ಕೆ ಹೋಗಿ, ಪೊಲೀಸ್ ಠಾಣೆ ಮೆಟ್ಟಿಲೇರಿ ಆಕೆ ಅರೆಸ್ಟ್ ಆಗಿದ್ದಾಳೆ, ಅಷ್ಟೆ.
ಆಲಿಗಂಜ್ ನಿವಾಸಿಯಾಗಿದ್ದ ವಿಜರತ್ ಉಲ್ಲಾ ಖಾನ್ 1987ರ ನವೆಂಬರ್ 30 ರಂದು ಲೇಖಪಾಲ್ (ಸರ್ವೇಯರ್) ಹುದ್ದೆಯಿಂದ ನಿವೃತ್ತರಾಗಿದ್ದರು. 2013ರ ಜನವರಿ 2ರವರೆಗೂ ಅವರು ಸರ್ಕಾರದಿಂದ ನಿವೃತ್ತಿ ವೇತನ ಪಡೆದುಕೊಳ್ಳುತ್ತಿದ್ದರು. ಇವರ ಪತ್ನಿ ಸವಿಯಾ ಬೇಗಂ ಇದಕ್ಕೂ ಮುನ್ನವೇ ನಿಧನರಾಗಿದ್ದರು. ತನ್ನ ತಂದೆ ವಿಜರತ್ ಉಲ್ಲಾ ಖಾನ್ ಮರಣದ ನಂತರ, ಮಗಳು ಮೊಹ್ಸಿನಾ ಪರ್ವೇಜ್ ತನ್ನ ತಂದೆಯ ಹೆಂಡತಿ ಎಂದು ತೋರಿಸಲು ದಾಖಲೆಗಳನ್ನು ನಿರ್ಮಿಸಿ ಪಿಂಚಣಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಆರಂಭಿಸಿದ್ದ ಮೊಹ್ಸಿನಾ, ಕಳೆದ 10 ವರ್ಷದ ಅವಧಿಯಲ್ಲಿ ಸರ್ಕಾರದಿಂದ 2 ಲಕ್ಷ ರೂಪಾಯಿ ಪಿಂಚಣಿ ಹಣ ಪಡೆದುಕೊಂಡಿದ್ದಾರೆ.
ಸರ್ಕಾರಿ ಸೌಲಭ್ಯಕ್ಕಾಗಿ ಜನ ಏನೇನೆಲ್ಲಾ ಮಾಡೋದನ್ನು ನೋಡ್ತೇವೆ. ಈಗಲೂ ಕೂಡ ಎಂಥೆಂತಾ ಸರ್ಕಾರಿ ಕುಳಗಳು ಕೂಡ ಬಡ ಜನರಿಗಾಗಿಯೇ ಇರುವ ಬಿಪಿಎಲ್ ಕಾರ್ಡ್ಗಳನ್ನು ಹಿಡಿದುಕೊಂಡಿರೋದನ್ನ ಕಾಣುತ್ತೇವೆ. ಸರ್ಕಾರ ಅದೆಷ್ಟೇ ನಿಯಮಗಳನ್ನು ಮಾಡಿದರೂ, ನಿಯಮಗಳಲ್ಲಿನ ಲೋಪದೋಷ ಕಂಡುಹಿಡಿದು ಅದ ಲಾಭ ಪಡೆಯೋದನ್ನ ನೋಡ್ತೇವೆ.
ತಂಗಿಯನ್ನು ಹೆಂಡತಿ ಎಂದು ತೋರಿಸುವ ಗಂಡಸರಿದ್ದಾರೆ. ರಾಜಕಾರಣಿಗಳೂ ಇದ್ದಾರೆ. ಹೆಂಡತಿಯನ್ನೇ ಕೈಗೊಂದು ಮಗು ಕೊಟ್ಟೂ ಯಾರೊ ಗೊತ್ತಿಲ್ಲ ಎಂದು ಹೇಳುವ ಪುರುಷರಿದ್ದಾರೆ. ಗಂಡನನ್ನೇ ದೂರ ತಳ್ಳಿ, ಮತ್ತೊಬ್ಬರನ್ನು ಒಪ್ಪಿಕೊಳ್ಳುವ ಹೆಂಗಸರೂ ಇದ್ದಾರೆ. ಆದರೆ ತಂದೆಯನ್ನೇ ಗಂಡ ಎಂದು ಹೇಳಿಕೊಂಡು ಬದುಕುತ್ತಿದ್ದ ಮಗಳ ಕಥೆ, ಹೊಸದು.



