ಆಕಾಶದೀಪ ಧಾರಾವಾಹಿಯ ದೀಪ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದೆ. ಅಮ್ಜಾದ್ ಖಾನ್ ಜೊತೆ ಮದುವೆ ಮತಾಂತರವಾಗಿ ಮದುವೆ ಆಗಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ತಮಿಳು ಮೀಡಿಯಾಗಳ ಜೊತೆ ಮಾತನಾಡುತ್ತಾ ನಾವಿಬ್ಬರೂ ಸೀರಿಯಲ್ನಲ್ಲಿ ನಟಿಸುತ್ತಿದ್ದಾಗ ಪರಿಚಯವಾಗಿತ್ತು. ಪರಸ್ಪರ ಪ್ರೀತಿಸೋಕೆ ಶುರು ಮಾಡಿದೆವು. ಮೊದಲು ಅವರು ಮುಸ್ಲಿಂ ಅಂತ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಅಮ್ಜದ್ ಖಾನ್ ಒತ್ತಾಯಿಸಿದ್ದರು ಎಂದಿದ್ದಾರೆ.
ಇಷ್ಟಪಟ್ಟ ಹುಡುಗನನ್ನು ಮದುವೆ ಆಗುವುದಕ್ಕಾಗಿ ನಾನು ಇಸ್ಲಾಂಗೆ ಮತಾಂತರ ಆದೆ. ಅದು ಆನಂತರ ಹಿಂದೂ ವಿವಾಹದ ಪ್ರಕಾರವೂ ನಾವಿಬ್ಬರೂ ಮದುವೆ ಆಗಲು ತೀರ್ಮಾನಿಸಿ ಕಾಂಚಿಪುರಂನಲ್ಲಿರುವ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಪ್ರಕಾರ ಮದುವೆ ಆಗಿದ್ದೆವು ಎಂದಿದ್ದಾರೆ ದಿವ್ಯಾ ಶ್ರೀಧರ್.

ನಾವಿಬ್ಬರೂ ಮದುವೆ ಆದ ಫೋಟೋ ಮತ್ತು ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಬಿಟ್ಟಿದ್ದನ್ನು ಅವರು ವಿರೋಧಿಸಿದ್ದರು. ನನ್ನ ಕೆರಿಯರ್ಗೆ ತೊಂದರೆ ಆಗುತ್ತದೆ. ಡಿಲಿಟ್ ಮಾಡು ಎಂದು ಒತ್ತಡ ಹೇರಿದರು. ಯಾರಾದರೂ ಕೇಳಿದರೆ ಅವು ಜಾಹೀರಾತಿಗಾಗಿ ತಗೆದದ್ದು ಎಂದು ಹೇಳುವಂತೆ ತಿಳಿಸಿದ್ದರು ಎನ್ನುತ್ತಾರೆ ದಿವ್ಯಾ.
ದಿವ್ಯಾ ಗರ್ಭಿಣಿ ಎನ್ನುವುದು ತಿಳಿಯುತ್ತಿದ್ದಂತೆಯೇ ಅಮ್ಜದ್ ಖಾನ್ ದೂರವಾಗೋಕೆ ಪ್ರಯತ್ನಿಸಿದರು. ಗರ್ಭಪಾತಕ್ಕೆ ಒತ್ತಾಯಿಸಿದರು. ಅಲ್ಲಿಂದಲೇ ತಮ್ಮಿಬ್ಬರ ನಡುವೆ ಜಗಳ ಶುರುವಾಯ್ತು ಎನ್ನುವ ದಿವ್ಯಾ ಈಗ ಆಸ್ಪತ್ರೆಯಲ್ಲಿದ್ದಾರೆ.





