ಅಫ್ತಾಬ್ ಕೂಡಾ ಮುಂಬೈನವನೇ. ನೋಡಿದರೆ ಇನ್ನೂ ಚಾಕ್ಲೇಟ್ ತಿನ್ನೋ ಹುಡುಗನಂತೆ ಕಾಣುತ್ತಾನೆ. ಶ್ರದ್ಧಾ ವಾಕರ್ ಕೂಡಾ ಮುಂಬೈನವಳೇ. ಕಾಲ್ ಸೆಂಟರ್‍ವೊಂದರಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಆದರೆ ತಾನೇ ಪ್ರೀತಿಸಿ ಜೊತೆಯಲ್ಲಿಟ್ಟುಕೊಂಡಿದ್ದ ಹುಡುಗಿ ಶ್ರದ್ಧಾಳನ್ನು 35 ಪೀಸ್ ಮಾಡಿ ಕೊಂದಿದ್ದಾನೆ. ಅದನ್ನು ಅವನು ಆಕ್ಸಿಡೆಂಟ್ ಆಗಿ ಮಾಡಿದ್ದಲ್ಲ. ಕೊಲೆ ಮಾಡಲೆಂದೇ ತಯಾರಾಗಿದ್ದಾನೆ. ಅದಕ್ಕಾಗಿ 300 ಲೀ. ಫ್ರಿಡ್ಜ್ ನೋಡಿ ಶ್ರದ್ಧಾಳ ಎತ್ತರಕ್ಕೆ ಅದು ಮ್ಯಾಚ್ ಆಗುತ್ತಿದೆಯೇ ಎಂದೆಲ್ಲ ಚೆಕ್ ಮಾಡಿದ್ದಾನೆ. ಅದಾದ ಮೇಲೇ ಫ್ರಿಡ್ಜ್ ತಂದಿರೋದು.
ಶ್ರದ್ಧಾಳನ್ನು ಮೊದಲು ಹೊಡೆದು ಬಡಿದು ಕೊಂದಿದ್ದಾನೆ. ಅಂದಹಾಗೆ ಹೋಟೆಲ್ಲೊಂದರಲ್ಲಿ ಬಾಣಸಿಗನಾಗಿದ್ದ ಅಫ್ತಾಬ್‍ಗೆ ಚಿಕನ್, ಮಟನ್ ಕಟ್ ಮಾಡಿದ ಅನುಭವವಿತ್ತು. ಆ ಅನುಭವದಲ್ಲಿಯೇ ಶ್ರದ್ಧಾಳನ್ನು ಪೀಸ್ ಪೀಸ್ ಮಾಡಿದ್ದಾನೆ. ಗೂಗಲ್ ಚೆಕ್ ಮಾಡಿದ್ದಾನೆ. ಬಿದ್ದ ರಕ್ತದ ಕಲೆಗಳನ್ನು ಕ್ಲೀನ್ ಮಾಡುವುದು ಹೇಗೆ ಎಂದು ತಿಳಿದುಕೊಂಡಿದ್ದಾನೆ. ಅಕಸ್ಮಾತ್ ಹುಡುಕಲು ಬಂದರೆ ನಾಯಿಗಳಿಗೂ ಗುರುತು ಸಿಗಬಾರದು. ಹಾಗೆ ರೂಮಿನಲ್ಲಿದ್ದ ಶ್ರದ್ಧಾಳ ಪ್ರತಿಯೊಂದು ವಸ್ತುವನ್ನು ಡಿಸ್‍ಪೋಸ್ ಮಾಡಿದ್ದಾನೆ. ರಕ್ತವನ್ನು ಕೆಮಿಕಲ್ ಹಾಕಿ ತೊಳೆದಿದ್ದಾನೆ. ಒರೆಸಿದ ಬಟ್ಟೆಗಳನ್ನು ಅಷ್ಟೇ ನೀಟಾಗಿ ಶ್ರದ್ಧಾಳ ಹೆಣ ಹೊರಗೆ ಹಾಕಿದಂತೆಯೇ ಹೊರ ಹಾಕಿದ್ದಾನೆ.

ಅಫ್ತಾಬ್ ಮತ್ತು ಶ್ರದ್ಧಾಳದ್ದು ಸುಮಾರು 3 ವರ್ಷದ ಲವ್ ಸ್ಟೋರಿ. ಮುಂಬೈನಲ್ಲೇ ಇದ್ದ ಇಬ್ಬರಿಗೂ ಪ್ರೀತಿಯಿತ್ತು. ಲಿವಿಂಗ್ ರಿಲೇಷನ್ ಕೂಡಾ ಇತ್ತು. ಆದರೆ ಒಟ್ಟಿಗೇ ಇರಲಿಲ್ಲ. ತಾಯಿ-ತಂದೆಯ ಜೊತೆಯಲ್ಲಿದ್ದಳು. ಯಾವಾಗ ಮದುವೆಗೆ ಮನೆಯವರು ಒಪ್ಪಲಿಲ್ಲವೋ ಆಗ ದೂರವಾದಳು. ಹೆತ್ತವರನ್ನು ಬಿಟ್ಟು ಅಫ್ತಾಬ್ ನಂಬಿ ಬಂದಳು. ಕೊನೆಗೀಗ ಹೆಣವಾದಳು.
ಅಫ್ತಾಬ್ ಎಲ್‍ಜಿಬಿಟಿ ಅಂದ್ರೆ ಲೈಂಗಿಕ ಅಲ್ಪಸಂಖ್ಯಾತರ ಪರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದ. ಮಹಿಳಾ ಪರ ಹೋರಾಟದಲ್ಲೂ ಸಕ್ರಿಯನಾಗಿದ್ದ. ಈ ಮೂಲಕ ತಾನು ಮಹಿಳೆಯರು ಹಾಗೂ ಮಾನವೀತೆಯ ಪ್ರೇಮಿ ಎಂಬಂತೆ ಕ್ಯಾರೆಕ್ಟರ್ ಬಿಂಬಿಸಿಕೊಂಡಿದ್ದ. ಆದರೆ ಈ ಮಹಿಳಾ ಹೋರಾಟಗಾರ ತಾನು ಪ್ರೀತಿಸಿದ್ದ ಹುಡುಗಿಯನ್ನು 35 ಪೀಸ್ ಮಾಡಿದ್ದಾನೆ.
ಅಂದಹಾಗೆ ಅಫ್ತಾಬ್ ಈ ರೀತಿ ಕೊಲೆ ಮಾಡಲು ಸ್ಫೂರ್ತಿ ಅಮೆರಿಕನ್ ವೆಬ್ ಸಿರೀಸ್ ಡೆಕ್ಸ್‍ಟರ್ ಅಂತೆ. ಅಲ್ಲಿಯೂ ಹಾಗೆಯೇ ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಎಸೆಯುವವನ ಕಥೆ ಅದು. ಅಲ್ಲಿ ಕಥೆಯಲ್ಲಿ ಬರುವ ಕೊಲೆಗಾರ ಫೊರೆನ್ಸಿಕ್ ಎಕ್ಸ್‍ಪರ್ಟ್. ತಾನೇ ಕೊಲೆ ಮಾಡಿ ಪೊಲೀಸರ ಜೊತೆ ಕೊಲೆಗಾರನನ್ನು ಹುಡುಕಿ ನಾಟಕ ಮಾಡುವಾತ. ಆದರೆ ಅದು ಸೈಕೋ ಮೂವಿ. ಅಫ್ತಾಬ್ ನೋಡುತ್ತಿದ್ದರೆ ಸೈಕೋನಂತೆಯೇನೂ ಕಾಣುತ್ತಿಲ್ಲ. ಅಫ್‍ಕೋರ್ಸ್, ಸೈಕೋಗಳು ಹಾಗೆಯೇ ಇರುತ್ತಾರೆ ಕೂಡಾ.



