ಸೈಯದ್ ಮೋಯಿನ್ ಎನ್ನುವ ಯುವಕ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಪ್ರೀತಿಯ ಅಮಲಿನಲ್ಲಿದ್ದ ಯುವತಿಗೆ ಪ್ರೀತಿಯೇ ಮುಖ್ಯವಾಗಿತ್ತು. ಅಪ್ಪ-ಅಮ್ಮನನ್ನು ಬಿಟ್ಟು ಆತನ ಜೊತೆ ಓಡಿ ಬಂದಳು. ಮಗಳು ಮನೆ ಬಿಟ್ಟು ಹೋಗುತ್ತಿದ್ದಂತೆ ಪೋಷಕರು ಯಶವಂತಪುರ ಠಾಣೆಗೆ ದೂರು ಕೊಟ್ಟರು. ಸೈಯದ್ ಮೋಯಿನ್ ಎಂಬ ಯುವಕ ಅರೆಸ್ಟ್ ಆದ. ಮತಾಂತರ ನಿಷೇಧ ಕಾಯ್ದೆ ಜಾರಿ ಬಳಿಕ ಮೊದಲ ಕೇಸ್ ಇದು. ಯಶವಂತಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮನೆ ಬಿಟ್ಟು ಹೋಗಿದ್ದ ಮಗಳು ಠಾಣೆಗೆ ಬಂದಾಗ ಯುವತಿಯ ವೇಷವೇ ಬದಲಾಗಿತ್ತು. ಬುರ್ಖಾ ಧರಿಸಿ ಬಂದ ಮಗಳನ್ನು ಕಂಡು ಪೊಲೀಸರಷ್ಟೇ ಅಲ್ಲ, ಪೋಷಕರೂ ಶಾಕ್ ಆಗಿದ್ದರು. ನಾನು ಮಸೀದಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾನೆ, ಮದುವೆಯಾಗಬೇಕೆಂದರೆ ಮತಾಂತರವಾಗಬೇಕೆಂದು ಹೇಳಿದ್ದ. ನನ್ನ ಪ್ರೀತಿ ಉಳಿಸಿಕೊಳ್ಳಲು ಮತಾಂತರವಾದೆ ಎಂದು ಪೊಲೀಸರ ಮುಂದೆ ಹೇಳಿದ್ದಾಳೆ ಅ ಯುವತಿ.

ಮತಾಂತರಕ್ಕೆ ಸಾಕಷ್ಟು ನಿಯಮಗಳಿವೆ . ಸರ್ಕಾರ ಕೂಡ ಹೊಸದಾಗಿ ನೀತಿ ನಿಯಮಗಳನ್ನು ರೂಪಿಸಿದೆ. ಇಷ್ಟು ದಿನ ನಡೆದ ಮತಾಂತರಗಳೇ ಬೇರೆ. ಇನ್ನು ಮುಂದೆ ನಡೆಯುವ ಮತಾಂತರಗಳೇ ಬೇರೆ. ಮತಾಂತರ ಆಗಲೇಬಾರದೆಂದೇನಿಲ್ಲ. ಅದರೆ ನೀತಿ-ನಿಯಮಗಳನ್ನು ಪಾಲಿಸಬೇಕು. ಅಷ್ಟೆ. ಅಂದರೆ ಈ ಯುವತಿ ಮತಾಂತರವಾಗಿದ್ದಾಳಲ್ಲ.. ಆಕೆ ತನ್ನ ಪೋಷಕರ ಒಪ್ಪಿಗೆ ಪಡೆಯಬೇಕು. ಇಲ್ಲದೇ ಹೋದರೆ ಅದನ್ನು ಕಾನೂನು ಪ್ರಕಾರವಾಗಿ ಮೊದಲೇ ಘೋಷಿಸಬೇಕು. ಸರ್ಕಾರ ಹೊರಡಿಸಿರಯವ ಅಧಿ ಸೂಚನೆ ಅನ್ವಯ ಮತಾಂತರವಾಗಲು ಆಯಾ ಜಿಲ್ಲೆಯ ಡಿಸಿಗೆ ಮನವಿ ಸಲ್ಲಿಸಬೇಕು. ಎರಡೂ ಕುಟುಂಬದವರ ಹೇಳಿಕೆಗಳನ್ನ ಪಡೆಯಬೇಕು ಇದಾದ ಬಳಿಕ ಮೂವತ್ತು ದಿನಗಳ ಕಾಲ ಸಮಯ ನೀಡಲಾಗುತ್ತೆ . ಯಾವುದೇ ಒತ್ತಡ ,ವಿರೋಧ ಬಾರದೆ ಇದ್ದರೆ ಡಿಸಿ ಮತಾಂತರಕ್ಕೆ ಅನುಮತಿ ನೀಡ್ತಾರೆ. ಹೀಗೆ ಏಕಾಏಕಿ ನಾನು ಮಸೀದಿಗೆ ಹೋದೆ. ಮತಾಂತರವಾದೆ ಎನ್ನುವಂತಿಲ್ಲ. ಅಲ್ಲದೆ ಮದುವೆಯಾಗಬೇಕು ಎಂದರೆ ನೀನು ಇಸ್ಲಾಂಗೆ ಬರಬೇಕು ಎಂದು ಒತ್ತಾಯಿಸಿದ್ದಾನೆ ಎಂದು ಯುವತಿ ಹೇಳಿರುವುದು ಬಲವಂತದ ಮತಾಂತರ ಎಂದು ಆರೋಪಿಸಿ ಪೊಲೀಸರು ಸೈಯದ್ ಮುಹೀನ್ನ್ನು ಅರೆಸ್ಟ್ ಮಾಡಿದ್ದಾರೆ.



