ಆತ ನೂರಾರು ಜನರನ್ನು ಕೊಂದು, ತಾನೂ ಸಾಯೋಕೆ ಸಿದ್ಧವಾಗಿ ಬಂದಿದ್ದ. ಆತನೇ ತಂದಿದ್ದ ಕುಕ್ಕರ್ ಬಾಂಬ್ ಆತನ ಜೀವಕ್ಕೇ ಕುತ್ತು ತಂದಿದೆ. ಶಾರೀಕ್ ಒಟ್ಟು ಮೂರು ಕುಕ್ಕರ್ ತಂದಿದ್ದ. ಅವುಗಳಲ್ಲಿ ಒಂದನ್ನು ಮೈಸೂರಿಂದ ಮಂಗಳೂರಿಗೆ ತಂದು, ಇಲ್ಲಿಯೇ ಬ್ಯಾಟರಿ, ನಟ್ಟು ಬೋಲ್ಟು, ವೈರು.. ಹೀಗೆ ಎಲ್ಲವನ್ನೂ ಜೋಡಿಸಿದ್ದ. ಆದರೆ ಪ್ಲಸ್ & ಮೈನಸ್ ವೈರ್ ಕನೆಕ್ಟ್ ಮಾಡುವಾಗ ಮಾಡಿಕೊಂಡ ಎಡವಟ್ಟು ಕುಕ್ಕರ್ ಬಾಂಬ್ ರಸ್ತೆ ಮಧ್ಯೆಯೇ ಸ್ಫೋಟಗೊಳ್ಳೋ ಹಾಗೆ ಮಾಡ್ತು.
ಅಷ್ಟೇ ಅಲ್ಲ, ನೀವು ವಿಡಿಯೋ ಗಮನಿಸದ್ದರೆ ಅರ್ಥವಾಗುತ್ತದೆ. ಬಾಂಬ್ ಸ್ಫೋಟಿಸುವ ಕೆಲವೇ ಸೆಕೆಂಡುಗಳ ಮೊದಲು ಒಂದು ಆಯಿಲ್ ಟ್ಯಾಂಕರ್, ಎರಡು ಬಸ್ ಪಾಸ್ ಆಗುತ್ತವೆ. ಜಸ್ಟ್ ಕೆಲವೇ ಸೆಕೆಂಡುಗಳ ಮುಂಚೆ. ಸ್ಫೋಟಿಸಿದ್ದ ಕುಕ್ಕರ್ ಬಾಂಬ್ ಅಚಾನಕ್ ಸ್ಫೋಟಿಸಿದ್ದಕ್ಕೆ ತೀವ್ರತೆ ಕಡಿಮೆಯಾಗಿರಬಹುದು. ಅದರಲ್ಲಿ ಸ್ಫೋಟಕ, ಡಿಟೋನೇಟರ್ಸ್ ಎಲ್ಲ ಇದ್ದವು. ಅದು 3 ಲೀಟರ್ ಕುಕ್ಕರ್. ಡಿಟೋನೇಟರ್ಸ್ ಪ್ಲಸ್-ಮೈನಸ್ ವೈರ್ ಕನೆಕ್ಷನ್ ಎಡವಟ್ಟಿಂದ ಭಾರಿ ಅನಾಹುತವೊಂದು ತಪ್ಪಿತ್ತು. ತೊಡೆಯ ಮೇಲಿಟ್ಟುಕೊಂಡಿದ್ದ ಕುಕ್ಕರ್ ಬಾಂಬ್ ಸ್ಫೋಟಿಸಿ, ಅದಕ್ಕೆ ಅವನೇ ಬಲಿಯಾಗುತ್ತಿದ್ದಾನೆ.
ಶಾರೀಕ್‍ನ ಬಗ್ಗೆ ಅನುಮಾನವಿದ್ದರೂ, ಆತನನ್ನು ಗುರುತಿಸೋಕೆ ಸಾಧ್ಯವಾಗಿದ್ದು ಮನೆಯವರು ಬಂದು ಗುರುತಿಸಿದ ಮೇಲೆಯೇ. ಶೇ.45ರಷ್ಟು ದೇಹ ಸುಟ್ಟು ಹೋಗಿದೆ. ಒಂದು ಕಣ್ಣು ಹೋಗಿದೆ. ಇನ್ನೊಂದು ಕಣ್ಣು ಮಂಜು ಮಂಜಾಗಿ ಕಾಣುತ್ತಿದೆ. ಬಾಯಿ ವರ್ಕ್ ಆಗುತ್ತಿಲ್ಲ. ತಿನ್ನುವುದಕ್ಕೂ ಆಗುತ್ತಿಲ್ಲ. ಮಾತನಾಡೋಕೂ ಆಗುತ್ತಿಲ್ಲ. ಕೈ ಸುಟ್ಟಿದೆ. ಹೊಟ್ಟೆ ಬಳಿಯೂ ಸ್ಫೋಟದ ಗಾಯವಿದೆ. ಇದೇನಾದರೂ ಇನ್ಫೆಕ್ಷನ್ ಆದರೆ ಜೀವಕ್ಕೇ ಅಪಾಯ.
ಗಂಭೀರ ಸ್ಥಿತಿಯಲ್ಲಿರುವ ಶಾರೀಕ್ ಒಂದು ವೇಳೆ ಸಾವನ್ನಪ್ಪಿದ್ದರೆ ಆತನ ಉಗ್ರ ಚಟುವಟಿಕೆಗಳೂ ಆತನೊಂದಿಗೆ ಸಾಯಲಿದೆ. ಆತ ಈ ಹಿಂದೆ ಏನೆಲ್ಲಾ ಉಗ್ರ ಚಟುವಟಿಕೆ ಮಾಡಿದ್ದ, ಮುಂದೆ ಯಾವ ಪ್ಲಾನ್ ಮಾಡಿದ್ದ, ಆತನೊಂದಿಗಿರುವ ತಂಡ ಯಾವುದು. ಫಂಡಿಂಗ್ ಮಾಡಿದ್ಯಾರು..? ಯಾರೆಲ್ಲಾ ಆಶ್ರಯ ಕೊಟ್ಟಿದ್ದರು, ಉಗ್ರರ ಜೊತೆ ಸಂಪರ್ಕದಲ್ಲಿದ್ನಾ ಅನ್ನೋ ಸಾಕಷ್ಟು ಆಘಾತಕಾರಿ ಮಾಹಿತಿಗಳು ನಾಶವಾಗಲಿದೆ. ಹೀಗಾಗಿ ಆತನನ್ನು ಹೇಗಾದ್ರೂ ಮಾಡಿ ಬದುಕಿಸಲೇಬೇಕೆಂದು ಪೊಲೀಸರು ವೈದ್ಯರು ತಂಡಕ್ಕೆ ಸೂಚಿಸಿದ್ದಾರೆ. ವೈದ್ಯರೂ ಆತನ ಮೇಲೆ ವಿಶೇಷ ಗಮನ ಇಟ್ಟಿದ್ದು ಬದುಕಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶಾರಿಕ್ ತಂದಿದ್ದು ಅಂತಿಂಥ ಬಾಂಬ್ ಅಲ್ಲ. ಆ ಕುಕ್ಕರ್ ಬಾಂಬ್ಗೆ ಇಡೀ ಬಸ್ಸನ್ನೇ ಸ್ಫೋಟಿಸುವ ಪವರ್ ಇತ್ತಂತೆ. 3 ಲೀಟರ್ ಕುಕ್ಕರ್ ತುಂಬಾ ಸ್ಫೋಟಕದ ಜೆಲ್ ತಂದಿದ್ದ. ಡಿಟೋನೇಟರ್ ಕೂಡ ಇದ್ದು ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತಂತೆ, ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೆ ಶಾರ್ಟ್ ಸರ್ಕ್ಯೂಟ್ ಆಗಿ ಜೆಲ್ಗೆ ಬೆಂಕಿ ಹೊತ್ತಿಕೊಂಡು ಘಟನೆ ಸಂಭವಿಸಿದೆ. ಒಂದ್ವೇಳೆ ಡಿಟೊನೇಟರ್ ಮತ್ತು ಜೆಲ್ ಎರಡೂ ಒಂದೇ ಬಾರಿಗೆ ಸ್ಫೋಟಿಸಿದರೆ ಭಯಾನಕ ಘಟನೆಯೇ ನಡೆದು ಹೋಗ್ತಿತ್ತು.
ಅಂದಹಾಗೆ ಶಾರೀಕ್ ಆಧಾರ್ ಕಾರ್ಡ್‍ನಲ್ಲಿ ಪ್ರೇಮ್ ರಾಜ್ ಎಂಬ ಹೆಸರು ಹೊಂದಿದ್ದ. ಆತನ ಸಿಮ್ ಕಾರ್ಡ್ ಅರುಣ್ ಅನ್ನೋ ಸಂಡೂರಿನ ಯುವಕನ ಹೆಸರಲ್ಲಿ ಆಗಿತ್ತು. ಮೈಸೂರಿನಲ್ಲಿ ಮನೆ ಬಾಡಿಗೆ ಕೊಟ್ಟಿದ್ದವರ ಹೆಸರು ಮಂಗಳಾ. ಅಕಸ್ಮಾತ್ ಶಾರೀಕ್ ಸಿಗದೆ, ಜೀವಂತವಾಗಿ ಸಿಗದೆ ಛಿದ್ರ ಛಿದ್ರವಾಗಿ ಸಿಕ್ಕು ದಾಖಲೆಗಳಷ್ಟೇ ಉಳಿದಿದ್ದರೆ.. ಇಷ್ಟು ಹೊತ್ತಿಗೆ ಹಿಂದೂಗಳ ಭಯೋತ್ಪಾದನೆ ಎಂಬ ಕಳಂಕವೂ ಅಂಟಿಕೊಳ್ಳುತ್ತಿತ್ತು.



