ಲವ್ ಜಿಹಾದ್ ಪ್ರಕರಣಗಳು ದೇಶದಾದ್ಯಂತ ಸದ್ದು ಮಾಡುತ್ತಿವೆ. ಇತ್ತೀಚೆಗೆ ಮಂಡ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚು ಹೆಚ್ಚು ಸದ್ದು ಮಾಡುತ್ತಿವೆ. ಈಗ ನಾಗಮಂಗಲದಲ್ಲಿ ಲವ್ ಜಿಹಾದ್ ಶಂಕಿತ ಪ್ರಕರಣ ವರದಿಯಾಗಿದೆ. ಅಪ್ರಾಪ್ತ ಹಾಗೂ ಅಂಗವಿಕಲ ಬಾಲಕಿಯ ಸ್ನೇಹ ಬೆಳೆಸಿ, ಬೆದರಿಸಿ ಅತ್ಯಾಚಾರ ಮಾಡಿರುವ ಪ್ರಕರಣ ವರದಿಯಾಗಿದೆ. ಈಗ ಮುಸ್ಲಿಂ ಧರ್ಮಕ್ಕೆ ಮತಾಂತರ ಆದರೆ ಮದುವೆ ಆಗುತ್ತೇನೆ ಎಂದು ಹೇಳುತ್ತಿದ್ದಾನೆ.
ಮಂಡ್ಯದ ನಾಗಮಂಗಲ ಪಟ್ಟಣದಲ್ಲಿಯೇ ಈ ಘಟನೆ ನಡೆದಿದೆ. ಅತ್ಯಾಚಾರಕ್ಕೆ ಗುರಿಯಾಗಿರುವಾಕೆ 13 ವರ್ಷದ ಬಾಲಕಿ. ಈತನ ಮೇಲೆ ಯೂನುಸ್ ಪಾಷಾ ಎಂಬ 25 ವರ್ಷದ ಯುವಕ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಅಂದಹಾಗೆ ಯೂನುಸ್ ಪಾಷಾಗೆ ಈಗಾಗಲೇ ಮದುವೆಯಾಗಿದೆ.
8ನೇ ತರಗತಿ ಓದುತ್ತಿದ್ದ ಪುಟ್ಟ ಬಾಲಕಿಯ ಅಂಗವೈಕಲ್ಯವನ್ನೇ ನೆಪ ಮಾಡಿಕೊಂಡು ಅನುಕಂಪ ತೋರಿಸಿ ಬಾಲಕಿಯ ಸ್ನೇಹ ಬೆಳೆಸಿದ್ದ ಯೂನುಸ್, ಮನೆಯವರಿಗೂ ಗೊತ್ತಾಗದಂತೆ ಆಕೆಗೆ ಮೊಬೈಲ್ ಕೊಡಿಸಿದ್ದ. ಬಾಲಕಿಯ
ನಗ್ನ ಫೋಟೋ, ವಿಡಿಯೋಗಳನ್ನ ರೆಕಾರ್ಡ್ ಮಾಡಿಕೊಂಡಿದ್ದ. ಲೈಂಗಿಕ ಕ್ರಿಯೆಗೆ ಸಹಕರಿಸದಿದ್ರೆ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದ. ಹೆದರಬೇಡ, ಮದುವೆಯಾಗುತ್ತೇನೆ ಎಂದೂ ನಂಬಿಸಿದ್ದ. ಬಾಲಕಿಯ ಮನೆಯ ಎದುರೇ ವಾಸವಿದ್ದ ಆರೋಪಿ ಯೂನುಸ್ ಪಾಷಾಗೆ ಮದುವೆಯಾಗಿ 3 ವರ್ಷವಾಗಿದೆ. ಒಂದು ಮಗುವೂ ಇದೆ.
ನವೆಂಬರ್ 8ನೇ ತಾರೀಕು ಬಾಲಕಿಯ ಪೋಷಕರು ಪ್ರವಾಸಕ್ಕೆ ಹೋಗಿದ್ದ ವೇಳೆ ಬಾಲಕಿಯನ್ನು ಅವರ ಅಜ್ಜಿಯ ಮನೆಯಲ್ಲಿ ಬಿಡಲಾಗಿತ್ತು. ಆಗ ಸಂಪರ್ಕಿಸಿದ್ದ ಯೂನುಸ್ ನವೆಂಬರ್ 11 ರ ಮಧ್ಯರಾತ್ರಿ ಮನೆಗೆ ಬರುವುದಾಗಿ ತಿಳಿಸಿದ್ದ. ಬೆದರಿಸಿದ್ದ. ನಂತರ ನಿದ್ರೆ ಮಾತ್ರೆ ಕೊಟ್ಟು ಸಾಂಬಾರ್ನಲ್ಲಿ ಹಾಕಿಕೊಡುವಂತೆ ತಿಳಿಸಿದ್ದ. ಊಟ ಮಾಡಿದ ಅಜ್ಜಿ ಮಲಗಿದ್ದ ವೇಳೆ ಮನೆಗೆ ಬಂದು ಅತ್ಯಾಚಾರ ಎಸಗಿದ್ದ. ಪ್ರವಾಸ ಮುಗಿಸಿ ವಾಪಸ್ಸಾದ ಪೋಷಕರಿಗೆ ಮಗಳ ನಡವಳಿಕೆ ಮೇಲೆ ಅನುಮಾನ ಮೂಡಿತ್ತು. ಸಂದೇಹಪಟ್ಟು ಮಗಳನ್ನು ಪೋಷಕರು ವಿಚಾರಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಪಾಪಿ ಯೂನಸ್ ಪಾಷ ಮುಸ್ಲಿಂ ಧರ್ಮಕ್ಕೆ ಮತಾಂತರ ಆದರೆ ತನ್ನನ್ನು ಮದುವೆ ಆಗುವುದಾಗಿ ಹೇಳಿದ್ದ ಎಂದು ಬಾಲಕಿ ಹೇಳಿದ್ದಾರೆ. ಘಟನೆ ಕುರಿತು ನವೆಂಬರ್ 19 ರಂದು ನಾಗಮಂಗಲ ಪಟ್ಟಣಠಾಣೆಗೆ ದೂರು ನೀಡಲಾಗಿದೆ. ಪೋಷಕರ ದೂರಿನ ಅನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು. ಆರೋಪಿ ಯೂನುಸ್ ಪಾಷಾನನ್ನು ಅರೆಸ್ಟ್ ಮಾಡಿದ್ದಾರೆ.



