ಅವಳನ್ನು ಸುಲಭವಾಗಿ ಸಾಯಿಸಿಬಿಟ್ಟೆ. ಆದರೆ ಅವಳ ಹೆಣವನ್ನು ವಿಲೇವಾರಿ ಮಾಡುವುದೇ ಕಷ್ಟವಾಗಿ ಹೋಯ್ತು ಎಂದಿದ್ದಾನೆ ಅಫ್ತಾಬ್. ಅಫ್ತಾಬ್ ನೀಡುತ್ತಿರುವ ವಿವರಗಳನ್ನು ಕೇಳಿದ ಪೊಲೀಸರು ತಾವು ಒಬ್ಬ ಮನುಷ್ಯನ ವಿಚಾರಣೆ ನಡೆಸುತ್ತಿದ್ದೇವೋ.. ರಾಕ್ಷಸನ ವಿಚಾರಣೆಯನ್ನೋ ಎಂದುಕೊಂಡಿದ್ದರೆ ಅದು ಅವರ ತಪ್ಪಲ್ಲ. ಶ್ರದ್ಧಾಳನ್ನು ತಾನು ಕೊಂದಿದ್ದು ಹಾಗೂ ನಂತರ ನಡೆದ ಘಟನೆಗಳ ವಿವರವನ್ನು ಅಫ್ತಾಬ್ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರೆ ಮೊದಲಿಗೆ ನಡುಗುವ ಸರದಿ ಪೊಲೀಸರದ್ದೇ.
ಆಕೆಯನ್ನು ಕೊಂದ ನಂತರ ಮಟನ್ ಕತ್ತರಿಸುವ ಕತ್ತಿಯನ್ನು ತಂದೆ. ಹೋಟೆಲ್ಲೊಂದರಲ್ಲಿ ಬಾಣಸಿಗನಾಗಿದ್ದ ನನಗೆ ದೇಹವನ್ನು ಕತ್ತರಿಸುವುದು ಕಷ್ಟವಾಗಲಿಲ್ಲ. ಮನುಷ್ಯನ ದೇಹದ ತುಂಡುಗಳು ಪ್ರಾಣಿಗಳ ತುಂಡಿನ ಹಾಗಲ್ಲ. ಒಂದೊಂದು ಪಾರ್ಟ್ 3-4 ಕೆಜಿ ತೂಗುತ್ತದೆ.
ಕರೆಕ್ಟ್ ಆಗಿ ಕಟ್ ಮಾಡದೆ ಹೋದರೆ ಕತ್ತರಿಸುವ ಕತ್ತಿಯೇ ಕೈಮೇಲೆ ಜಾರಿ ಬರುತ್ತದೆ ಎಂದಿರೋ ಅಫ್ತಾಬ್‍ಗೆ ಹಾಗೆ ಕತ್ತರಿಸುವಾಗ ಕತ್ತಿ ಜಾರಿ ಕೈಗೇ ಬಂದು ಫ್ರಾಕ್ಚರ್ ಆಗಿತ್ತಂತೆ. ಆ ಗಾಯಕ್ಕೆ ಡಾಕ್ಟರ್ ಒಬ್ಬರ ಬಳಿ ಹೊಲಿಗೆ ಹಾಕಿಸಿಕೊಂಡು ಟ್ರೀಟ್‍ಮೆಂಟ್ ತೆಗೆದುಕೊಂಡಿದ್ದಾನೆ ಅಫ್ತಾಬ್. ಆತನ ಮನೆಯಲ್ಲಿ ಸಿಕ್ಕ ಡಾಕ್ಟರ್ ಪ್ರಿಸ್ಕಿಪ್ಷನ್ ನೋಡಿ ವಿಚಾರಣೆ ಮಾಡಿದಾಗ ಬೆಳಕಿಗೆ ಬಂದಿರೋ ಕಥೆಯಿದು. ಮಟನ್ ಕಟ್ ಮಾಡುವಾಗ ಕತ್ತಿ ಜಾರಿ ಗಾಯವಾಯಿತು ಎಂದು ಹೇಳಿದ್ದ. ನನಗೂ ಹಾಗೆಯೇ ಅನ್ನಿಸಿತ್ತು ಎಂದಿರುವ ಡಾಕ್ಟರ್‍ಗೆ ಆತ ಕತ್ತರಿಸಿದ್ದು ಅವನೇ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದ ಹುಡುಗಿಯನ್ನು ಎನ್ನುವ ಕಲ್ಪನೆಯಾದರೂ ಹೇಗೆ ಬಂದೀತು.

ಅವಳ ದೇಹವನ್ನೇನೋ ಆ ದಿನವೇ ಪೂರ್ತಿ ಕತ್ತಿರಿಸಿ ಪಾಲಿಥಿನ್ ಕವರುಗಳಲ್ಲಿ ಇಟ್ಟುಬಿಟ್ಟೆ. ಅದು ಮನುಷ್ಯರ ಹೆಣ. ಏನೇ ಫ್ರಿಜ್ಜಿನಲ್ಲಿಟ್ಟರೂ ವಾಸನೆ ಬರುತ್ತದೆ. ಆಗ ಐಸ್ ಚೇಂಜ್ ಮಾಡಬೇಕು. ಮನೆ ತುಂಬಾ ಅಗರಬತ್ತಿ, ಫ್ರೆಶ್‍ನರ್ ಮತ್ತು ಪರ್‍ಫ್ಯೂಮ್ ಬಳಸುತ್ತಿದ್ದೆ. ದಿನಕ್ಕೆ ಎರಡು ಪೀಸ್ ತೆಗೆದುಕೊಂಡು ಮಧ್ಯರಾತ್ರಿ 2 ಗಂಟೆಗೆ ಹೊರಡುತ್ತಿದ್ದೆ. ಹಾಗೆ ಕಾಡು, ಚರಂಡಿಯಲ್ಲಿ ಬಿಸಾಕುವಾಗ ಅವುಗಳನ್ನು ಮತ್ತೆ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸುತ್ತಿದೆ. ಕೆಲವೊಮ್ಮೆ ಆ ಪೀಸುಗಳನ್ನು ನಾಯಿಗಳಿಗೆ ಎಸೆಯುತ್ತಿದ್ದೆ ಎಂದು ಮಾಹಿತಿ ನೀಡಿದ್ದಾನಂತೆ ಅಫ್ತಾಬ್. ಅಷ್ಟೇ ಅಲ್ಲ ಕಡೆಯದಾಗಿ ಹೊರಗೆಸೆದಿದ್ದು ಆಕೆಯ ತಲೆಯನ್ನು. ಪ್ರತಿ ದಿನ ಆಕೆಯ ಮುಖವನ್ನು ಫ್ರಿಜ್ಜಿನಲ್ಲಿ ನೋಡುತ್ತಿದ್ದೆ. ಆಕೆಯ ಮುಖ ನೋಡುವುದು ಒಂದು ರೀತಿಯ ಥ್ರಿಲ್ ಕೊಡುತ್ತಿತ್ತು ಎಂದು ಬಾಯ್ಬಿಟ್ಟಿದ್ದಾನೆ ಅಫ್ತಾಬ್.
ಮನೆಗೆ ಶ್ರದ್ಧಾಳನ್ನು ಕೊಂದ ಮೇಲೆ ಡೇಟಿಂಗ್ ಆಪ್‍ನಲ್ಲಿ ಪರಿಚಿತರಾಗಿದ್ದ ಬೇರೆ ಬೇರೆ ಹುಡುಗಿಯರನ್ನು ಮನೆಗೆ ಕರೆತರುತ್ತಿದ್ದ. ಶ್ರದ್ಧಾಳ ಹೆಣ ಮನೆಯಲ್ಲಿದ್ದಾಗ ಆತ ಕರೆತಂದು 8 ಹುಡುಗಿಯರ ಜೊತೆ ಸೆಕ್ಸ್ ಮಾಡಿದ್ದಾನಂತೆ. ಹಾಗೆ ಸೆಕ್ಸ್ ಮಾಡುವ ಮುನ್ನ ಶ್ರದ್ಧಾಳ ಮುಖ ನೋಡಿದರೆ ವಿಚಿತ್ರ ಫೀಲ್ ಬರುತ್ತಿತ್ತು ಎಂದಿದ್ದಾನೆ ಅಫ್ತಾಬ್.
ಸದ್ಯಕ್ಕೆ ಪೊಲೀಸರ ಕೈಗೆ ಸಿಕ್ಕಿರುವುದು 18 ತುಂಡುಗಳು. ಇನ್ನುಳಿದ ತುಂಡುಗಳು ಸಿಗುತ್ತವೆಯೋ.. ಇಲ್ಲವೋ ಗೊತ್ತಿಲ್ಲ. ಹಾಗೆ ಸಿಕ್ಕ ತುಂಡುಗಳು, ಶ್ರದ್ಧಾಳ ತಂದೆಯ ಡಿಎನ್‍ಎ ಜೊತೆ ಮ್ಯಾಚ್ ಆಗಬೇಕು. ಆತನ ಮನೆಯಲ್ಲಿ ಕೂಡಾ 10-12 ಮೂಳೆಗಳು ಸಿಕ್ಕಿವೆ. ಅವುಗಳೂ ಕೂಡಾ ಶ್ರದ್ಧಾಳ ಡಿಎನ್‍ಗೆ ಮ್ಯಾಚ್ ಆದರೆ ಅಫ್ತಾಬ್‍ಗೆ ಶಿಕ್ಷೆ ಗ್ಯಾರಂಟಿ. ಜೊತೆಗೆ ಈಗ ಚಿಕಿತ್ಸೆ ನೀಡಿರುವ ಡಾಕ್ಟರ್ ಕೂಡಾ ಪ್ರಬಲ ಸಾಕ್ಷಿಯಾಗಲಿದ್ದಾನೆ. ಪೊಲೀಸರು ಭಯಂಕರ ಪ್ರಕರಣವನ್ನು ಭೇದಿಸಿರುವುದಷ್ಟೇ ಅಲ್ಲ, ಅದನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡಬೇಕಿರುವುದು ದೊಡ್ಡ ಸವಾಲು. ಆ ನಿಟ್ಟಿನಲ್ಲಿ ಪೊಲೀಸರೀಗ ಆಕ್ಟಿವ್ ಆಗಿದ್ದಾರೆ.



