ಈಗಾಗಲೇ ಹೆಚ್ಚೂ ಕಮ್ಮಿ ಭಿಕಾರಿಯಾಗಿರುವ ಪಾಕಿಸ್ತಾನದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 12, 500 ರೂ . ಇದೆ. ಹೌದು, ಹನ್ನೆರಡೂವರೆ ಸಾವಿರ ರೂ. ಒಂದು ಲೀಟರ್ ಪೆಟ್ರೋಲ್ 300 ರೂ. ಗಡಿಯಲ್ಲಿದೆ. ಭಾರತದ ರೂಪಾಯಿಗೆ ಹೋಲಿಸಿದರೆ ಪಾಕಿಸ್ತಾನದ 4 ರೂ, ಭಾರತದ 1 ರೂಪಾಯಿಗೆ ಸಮ. ಒಂದು ಮೊಟ್ಟೆಗೆ ಪಾಕಿಸ್ತಾನದವರು ಹೆಚ್ಚೂ ಕಮ್ಮಿ 40 ರೂ. ಕೊಡ್ಬೇಕು. ಈರುಳ್ಳಿ ರೇಟು 300 ರೂಪಾಯ್. ಚಿಕನ್ ಕೆಜಿಗೆ 750 ರೂಪಾಯಿ.
ವಿಮಾನಗಳಿಗೆ ಇಂಧನ ಪೂರೈಕೆ ಸಾಧ್ಯವಾಗದೆ ಅರ್ಧಕ್ಕರ್ಧ ವಿಮಾನಗಳು ಹಾರಾಟ ನಡೆಸುತ್ತಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ಹೊಡೆತ ಬಿದ್ದಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇಂತಹ ಪಾಕಿಸ್ತಾನ ಅದೆಷ್ಟು ಸಾಲ ಮಾಡಿಕೊಂಡಿದೆಯಂದರೆ.. ಸಾಲದ ಬಡ್ಡಿ ಕಟ್ಟುವುದಕ್ಕೂ ಬೇಕಾದ ದುಡಿಮೆ ಇಲ್ಲ. ಜನ ಕಾಯಿಲೆ ಬಿದ್ದರೆ ಆಸ್ಪತ್ರೆಗೆ ಹೋಗದೆ.. ಇಲ್ಲೇ ಸಾಯೋಣ ಎಂಬ ಸ್ಥಿತಿಗೆ ತಲುಪಿದ್ಧಾರೆ. ಇದರ ನಡುವೆ ಭಾರತದ ಪ್ರತಿಷ್ಠಿತ ಕಂಪೆನಿ ಟಾಟಾದವರ ಒಟ್ಟಾರೆ ಮೌಲ್ಯವೇ ಪಾಕಿಸ್ತಾನಕ್ಕಿಂತ ದೊಡ್ಡದಾಗಿದೆ.
ಕಳೆದ ಒಂದು ವರ್ಷದಲ್ಲಿ ಹಲವಾರು ಟಾಟಾ ಗ್ರೂಪ್ ಕಂಪನಿಗಳು ಹೆಚ್ಚಿನ ಆದಾಯ ನೀಡಿದ್ದು, ಇದರಿಂದ ಉಪ್ಪಿನಿಂದ ಸಾಫ್ಟ್‌ವೇರ್‌ವರೆಗಿನ ಸಮೂಹದ ಮಾರುಕಟ್ಟೆ ಮೌಲ್ಯವು ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಎಷ್ಟರಮಟ್ಟಿಗೆ ಎಂದರೆ ಕಂಪನಿಯು ಮಾರುಕಟ್ಟೆ ಬಂಡವಾಳದಲ್ಲಿ ನೆರೆಯ ಪಾಕಿಸ್ತಾನದ ಆರ್ಥಿಕತೆಯನ್ನೇ ಹಿಂದಿಕ್ಕಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪಾಕಿಸ್ತಾನದ ಜಿಡಿಪಿ ಸುಮಾರು 341 ಬಿಲಿಯನ್ ಡಾಲರ್ ಎಂದು ಅಂದಾಜಿಸಿದೆ. ಟಾಟಾ ಸಮೂಹ ಕಂಪನಿಗಳ ಮಾರುಕಟ್ಟೆ ಮೌಲ್ಯ 30.3 ಲಕ್ಷ ಕೋಟಿ ರು.ಗೆ ತಲುಪಿದೆ. ಆರ್ಥಿಕ ಸಂಕಷ್ಟ, ಸಾಲಬಾಧೆಯಿಂದ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದ ಜಿಡಿಪಿ ಮೌಲ್ಯ ಕೇವಲ 28 ಲಕ್ಷ ಕೋಟಿ ರು.ನಷ್ಟು ಮಾತ್ರ.
ಟಾಟಾದ ಕನಿಷ್ಠ 25 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಿದ್ದು, ಇವುಗಳಲ್ಲಿ ಒಂದು ಮಾತ್ರ ಟಾಟಾ ಕೆಮಿಕಲ್ಸ್ – ಇದು ಒಂದು ವರ್ಷದಲ್ಲಿ ಶೇ. 5ರಷ್ಟು ಇಳಿಕೆ ಕಂಡಿದೆ. ಸಾಮಾನ್ಯವಾಗಿ ಉದ್ಯಮಗಳನ್ನು ಬಿಲಿಯನೇರ್ ಕುಟುಂಬಗಳು ನಡೆಸಿದರೆ, ಇದಕ್ಕೆ ಅಪವಾದವೆಂಬಂತೆ ಟಾಟಾ ಗ್ರೂಪ್ ಅನ್ನು ವೃತ್ತಿಪರರು ನಡೆಸುತ್ತಿದ್ದಾರೆ. ಇದು ಹೆಚ್ಚಾಗಿ ಪರೋಪಕಾರಿ ಟ್ರಸ್ಟ್‌ಗಳ ಒಡೆತನದಲ್ಲಿದ್ದು, ವೈಯಕ್ತಿಕ ಪ್ರವರ್ತಕರನ್ನು ಹೊಂದಿಲ್ಲ. ರತನ್ ಟಾಟಾ ಅವರು ಟಾಟಾ ಸನ್ಸ್‌ನಲ್ಲಿ ಶೇ. 1ಕ್ಕಿಂತಲೂ ಕಡಿಮೆ ಪಾಲನ್ನು ಹೊಂದಿದ್ದಾರೆ.
ದಿವಂಗತ ‘ಬಿಗ್ ಬುಲ್’ ರಾಕೇಶ್ ಜುಂಜುನ್‌ವಾಲಾ ಸಾರ್ವಜನಿಕವಾಗಿಯೇ ಟಾಟಾ ಕಂಪನಿಗಳ ಮೇಲಿನ ತಮ್ಮ ಆಕರ್ಷಣೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದರು. ಅವರ ಮರಣದ ನಂತರವೂ ಸುಮಾರು 50,000 ಕೋಟಿ ರೂ. ಮೌಲ್ಯದ ಕುಟುಂಬದ ಹಿಡುವಳಿಯಲ್ಲಿ ಅರ್ಧದಷ್ಟು ಟಾಟಾ ಷೇರುಗಳಲ್ಲೇ ಇವೆ.
ಟಾಟಾ ಕಂಪೆನಿಯೇನೋ.. ಹೀಗೇ ಮುಂದುವರೆಗೆ ಇನ್ನಷ್ಟು ಮತ್ತಷ್ಟು ಬೆಳೆಯಲಿದೆ. ಆದರೆ.. ಪಾಕಿಸ್ತಾನದ ಸ್ಥಿತಿ.. ಪಾಕಿಸ್ತಾನದಲ್ಲಿ ಚುನಾವಣೆ ಮುಗಿದ ಬಳಿಕ ಪರಿಸ್ಥಿತಿ ಸುಧಾರಿಸಬಹುದು ಎಂದು ಜನತೆ ಭಾವಿಸಿದ್ದರು. ಆದರೆ, ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಸರ್ಕಾರ ರಚನೆ ಪ್ರಕ್ರಿಯೆಯೇ ಅತಂತ್ರವಾಗಿದೆ. ಇಮ್ರಾನ್ ಖಾನ್ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಜಯಿಸಿದ್ದರೂ ಕೂಡಾ ಅವರಿಗೆ ಚುನಾವಣಾ ಚಿಹ್ನೆ ಸಿಗದ ಕಾರಣ ಎಲ್ಲರೂ ಪಕ್ಷೇತರರಾಗಿದ್ದಾರೆ. ಇನ್ನು ನವಾಜ್ ಷರೀಫ್ ಹಾಗೂ ಬಿಲಾವಲ್ ಭುಟ್ಟೋ ನಡುವೆ ಪ್ರಧಾನಿ ಹುದ್ದೆ ಸೇರಿದಂತೆ ಹಲವು ಕಾರಣಗಳಿಗೆ ಹಗ್ಗ ಜಗ್ಗಾಟ ನಡೆಯುತ್ತಿದ್ದು, ರಾಜಕೀಯ ಪರಿಸ್ಥಿತಿ ಅತಂತ್ರವಾಗಿದೆ. ಪಾಪಚ್ಚಿ..