ಲೋನ್ ಮಾಡುವ ಮುನ್ನ ಬಹುತೇಕ ಮಂದಿ ಸರಿಯಾಗಿ ಪ್ಲಾನ್ ಮಾಡಲ್ಲ. ಪರ್ಸನಲ್ ಲೋನ್ ತೆಗೆದುಕೊಳ್ಳುವಾಗ ಆಗಲೀ, ಕಾರು ಅಥವಾ ಬೈಕ್ ಖರೀದಿಸುವಾಗ ಆಗಲಿ.. ಖರೀದಿಸುವ ಬಗ್ಗೆ ಯೋಚನೆ ಮಾಡ್ತಾರೆ.ಆದರೆ ಕಾರು ಅಥವಾ ಬೈಕ್ ಖರೀದಿಸುವ ಮುನ್ನ ಮೈಂಟೇನೆನ್ಸ್ ಬಗ್ಗೆ ಯೋಚನೆ ಮಾಡಲ್ಲ. ವಾಹನ ಖರೀದಿಗೂ ಮೊದಲು ಅದರ ವೆಚ್ಚಗಳ ಬಗ್ಗೆ ನಮಗೆ ಮಾಹಿತಿ ಇರಬೇಕು. ಕಾರು, ಬೈಕು, ವಾಹನಗಳ ಖರ್ಚು, ಪೆಟ್ರೋಲ್/ಡೀಸೆಲ್ ವೆಚ್ಚ ಹಾಗೂ ವಿಮೆ ಸೇರಿದಂತೆ ಎಲ್ಲವುಗಳ ಬಗ್ಗೆಯೂ ಗೊತ್ತಿರಬೇಕು.


ಇತ್ತೀಚೆಗೆ ಸ್ವಂತ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಕಾರಣ ಕೊರೊನಾ. ಸಾರ್ವಜನಿಕ ವಾಹನಗಳ ಬದಲು ಸ್ವಂತ ವಾಹನಗಳು ಸೇಫ್ ಅನ್ನೋ ಭಾವನೆಯೇ ಇದಕ್ಕೆಲ್ಲ ಕಾರಣ. ಹೀಗಾಗಿಯೇ ಸ್ವಂತ ಕಾರು, ಸ್ವಂತ ಬೈಕು ಖರೀದಿ ಹೆಚ್ಚಾಗಿದೆ. ಜನ ಪಬ್ಲಿಕ್ ಟ್ರಾನ್ಸ್ಫೋರ್ಟ್ನಿಂದ ದೂರವಾಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಾಲವೂ ಸುಲಭವಾಗಿ ಸಿಗುತ್ತಿದೆ. ಆದರೆ, ಸಾಲದ ಮೇಲೆ ಕಾರು ಅಥವಾ ಬೈಕು ಖರೀದಿಸುವವರು ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದೇ ಹೋದರೆ ಕಷ್ಟಕ್ಕೆ ಸಿಲುಕಬೇಕಾಗುತ್ತೆ. ಸಾಲ ತೆಗೆದುಕೊಂಡ ನಂತರ ಏನೇನೆಲ್ಲ ಸಮಸ್ಯೆ ಬರಬಹುದು ಅವುಗಳನ್ನು ನಿಭಾಯಿಸುವುದು ಹೇಗೆ ಅನ್ನೋದನ್ನು ತಿಳಿದುಕೊಂಡೇ ಮುಂದೆ ಹೆಜ್ಜೆಯಿಡಿ.


ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಷ್ಟೂ ಒಳ್ಳೆಯದು. ಕಾರು ಸಾಲ ಮಾತ್ರವಲ್ಲ, ಯಾವುದೇ ಸಾಲ ಪಡೆಯಲು ನಿಮಗೆ ಉತ್ತಮ ಕ್ರೆಡಿಟ್ ಸ್ಕೋರ್ ಬೇಕು. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಇತರ ಸಾಲಗಳನ್ನು ಸಕಾಲಿಕವಾಗಿ ಮರುಪಾವತಿ ಮಾಡುವುದು ನಿಮ್ಮ ಕ್ರೆಡಿಟ್ ಸ್ಕೋರ್ಗೆ ಪ್ಲಸ್ ಆಗಿರುತ್ತದೆ. ಹೀಗಾಗಿ ನಿಮ್ಮ ಹಿಂದಿನ ಯಾವುದೇ ಸಾಲಗಳಿರಲಿ, ಪೇಮೆಂಟ್ ಸರಿಯಾಗಿ ಸರಿಯಾದ ದಿನಾಂಕಕ್ಕೆ ಆಗಿರಬೇಕು. ಒಂದೇ ಒಂದು ಚೆಕ್ ಬೌನ್ಸ್ ಆಗಿದ್ದರೂ ಕಷ್ಟ. ಒಂದು ಇಎಂಐ ಲೇಟ್ ಆಗಿದ್ದರೂ ಕಷ್ಟ. ಅಕಸ್ಮಾತ್ ಯಾವುದಾದರೂ ಸಾಲ ತೆಗೆದುಕೊಂಡು ಒನ್ ಟೈಂ ಸೆಟ್ಲ್ಮೆಂಟ್ ಮಾಡಿಕೊಂಡಿದ್ದರೆ ನಿಮ್ಮ ಸಾಲದ ಆಸೆ ಕಟ್ಟಿಟ್ಟುಬಿಡಿ. ಸಾಲ ಸಿಕ್ಕಲ್ಲ.
ಬಜೆಟ್ ಪ್ಲಾನ್ ಮಾಡಿಕೊಳ್ಳಿ. ಕಾರು ಅಥವಾ ಖರೀದಿಸುವ ಹೆಚ್ಚಿನ ಜನರು ಅದರ ನಿರ್ವಹಣಾ ವೆಚ್ಚದ ಕುರಿತು ಯೋಚಿಸುವುದೇ ಇಲ್ಲ. ಆದರೆ, ವಾಹನ ಖರೀದಿಗೂ ಮೊದಲು ಅದರ ವೆಚ್ಚಗಳ ಕುರಿತು ಗೊತ್ತಿದ್ದರೆ ಎಷ್ಟು ವಿಮೆ ಕಟ್ಟಬೇಕು? ಪೆಟ್ರೋಲ್-ಡೀಸೆಲ್ ವೆಚ್ಚ ಎಷ್ಟಾಗುತ್ತೆ ಅನ್ನೋದು ಗೊತ್ತಾಗುತ್ತೆ. ನೀವು ಪ್ರತಿದಿನ ಓಡಾಡುವ ಸರಾಸರಿ ದೂರ ಮತ್ತು ವಾಹನದ ಮೈಲೇಜ್ ಲೆಕ್ಕ ಹಾಕಿ, ಅದರೊಂದಿಗೆ ಇತರೆ ಎಲ್ಲ ವೆಚ್ಚಗಳನ್ನೂ ತೂಕ ಮಾಡಿದರೆ ಇಎಂಐ ಎಷ್ಟು ಇದ್ದರೆ ಆರಾಮವಾಗಿ ಕಟ್ಟಲು ಸಾಧ್ಯ ಎಂದು ಲೆಕ್ಕ ಹಾಕಬಹುದು.
ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗಲ್ಲ. ಇದು ಸತ್ಯ. ಈ ಕಾರಣಕ್ಕಾಗಿಯೇ ನಿಮ್ಮ ಆದಾಯ ಮತ್ತು ವೆಚ್ಚ ಎರಡನ್ನೂ ಲೆಕ್ಕ ಹಾಕಿಕೊಂಡು ಬಜೆಟ್ ಪ್ಲಾನ್ ಮಾಡಿಕೊಳ್ಳಿ. ನಂತರ ನಿಮ್ಮ ಆದಾಯಕ್ಕೆ ತಕ್ಕಂತೆ, ಕಾರ್ ಲೋನ್‌ಗೆ ಅರ್ಜಿ ಸಲ್ಲಿಸಿ.
ಯಾವ ಕಾರು ಅಥವಾ ಬೈಕ್ ಅನ್ನೋದು ಮೊದಲೇ ಫಿಕ್ಸ್ ಆಗಿರಲಿ. ಒಮ್ಮೆ ಖರೀದಿಸಿದರೆ.. ಸುಮಾರು ಒಂದು ದಶಕ ಅಥವಾ ಹದಿನೈದು ವರ್ಷಗಳವರೆಗೆ ಯಾರೂ ಹೊಸ ಬೈಕ್ ಮತ್ತು ಕಾರನ್ನು ಬದಲಾಯಿಸುವುದಿಲ್ಲ. ಆದ್ದರಿಂದ ಖರೀದಿಸುವ ಮೊದಲು, ಕಾರಿ ಮತ್ತು ಬೈಕ್ ಡೀಲ್ ಬಗ್ಗೆ ತಿಳಿದುಕೊಳ್ಳಬೇಕು. ಅಗತ್ಯಕ್ಕೆ ಸರಿಹೊಂದುವ ವಾಹನ ಆಯ್ಕೆ ಮಾಡಿಕೊಳ್ಳಿ. ಖರೀದಿಸಲು ಬಯಸುವ ಕಾರಿನ ವೈಶಿಷ್ಟ್ಯಗಳನ್ನು ಮತ್ತೊಂದು ಕಂಪನಿಯು ಕಡಿಮೆ ದರದಲ್ಲಿ ನೀಡುತ್ತಿದ್ದರೆ, ಅದನ್ನೇ ಆರಿಸಿಕೊಳ್ಳುವುದು ಉತ್ತಮ. ಏಕೆಂದರೆ, ಕಾರಿನ ದರ ಕಡಿಮೆಯಾದಂತೆ ಸಾಲದ ಮೊತ್ತವೂ ಕಡಿಮೆಯಾಗುತ್ತದೆ. ಇಒI ಹೊರೆಯೂ ಕಡಿಮೆಯಾಗುತ್ತದೆ.
ಡೌನ್ ಪೇಮೆಂಟ್ ಸಾಧ್ಯವಾದಷ್ಟೂ ಹೆಚ್ಚಿರುವಂತೆ ಪ್ಲಾನ್ ಮಾಡಿ. ಮಾರುಕಟ್ಟೆಯಲ್ಲಿ ಉತ್ತಮ ಕಾರು ಅಥವಾ ಬೈಕ್ ಖರೀದಿಗೆ ಮೊದಲು ಹೆಚ್ಚು ಡೌನ್ ಪೇಮೆಂಟ್ ಪಾವತಿಸುವುದೇ ಒಳ್ಳೆಯದು. ಡೌನ್ ಪೇಮೆಂಟ್ ಹೆಚ್ಚಾದಷ್ಟೂ ಅಸಲು ಮತ್ತು ಬಡ್ಡಿ ಕಡಿಮೆಯಾಗುತ್ತದೆ. ನೀವು ಕಡಿಮೆ ಅಸಲು ಮೊತ್ತ ಪಾವತಿಸಬೇಕಾದರೆ, ಕಾರ್ ಲೋನ್ನಲ್ಲಿ ಮಾಸಿಕ ಕಂತುಗಳೂ ಕಡಿಮೆಯಾಗುತ್ತವೆ.
ಹಾಗೆ ಡೌನ್ ಪೇಮೆಂಟ್ ಹೆಚ್ಚಾದರೆ ಸಾಲದ ಇಎಂಐ ಕಡಿಮೆಯಾಗುವುದಷ್ಟೇ ಅಲ್ಲ, ಅವಧಿ ಕಡಿಮೆಯಾಗುತ್ತದೆ.
ಸಾಮಾನ್ಯವಾಗಿ ಕಾರ್ ಲೋನ್ ಬ್ಯಾಂಕ್ಗಳು ಹೆಚ್ಚು ಅವಧಿಯ ಸಾಲವನ್ನು ಶಿಫಾರಸು ಮಾಡುತ್ತವೆ. ಸಾಲದ ಅವಧಿಯು ಹೆಚ್ಚಿದಷ್ಟೂ ಇಎಂಐ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಒಂದು ವಿಷಯ ನೆನಪಿರಲಿ. ಇಎಂಐ ಕಡಿಮೆಯಾಗುತ್ತದೆ ಎನ್ನುವುದು ಸತ್ಯವಾದರೂ ಅಂತಿಮಾವಗಿ ನೀವು ಬ್ಯಾಂಕ್ಗೆ ಪಾವತಿಸುವ ಮೊತ್ತ ಹೆಚ್ಚಾಗಿರುತ್ತದೆ. ಸಾಲದ ಅವಧಿ ಕಡಿಮೆ ಇದ್ದರೆ ಇಎಂಐ ಹೆಚ್ಚುತ್ತದೆ. ಆದರೆ ಪ್ರೀಮಿಯಂ, ಬಡ್ಡಿ ದರ ಕಡಿಮೆಯಾಗುತ್ತದೆ.



