ಯೂನಿಲಿವರ್ ಕಂಪನಿಯು ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಕೆಲವು ಜನಪ್ರಿಯ ಬ್ರಾಂಡ್ಗಳನ್ನು ಹಿಂಪಡೆದಿದೆ. ಇವುಗಳಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಬೆಂಜೀನ್ ಹೊಂದಿವೆ ಎಂದು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಡ್ರೈ ಶಾಂಪೂ ಎಂದರೆ ಅದು ಲಿಕ್ವಿಡ್ ರೂಪದಲ್ಲಿ ಇರುವುದಿಲ್ಲ. ಪೌಡರ್ ಅಥವಾ ಸ್ಪ್ರೇ ರೂಪದಲ್ಲಿರುತ್ತೆ. ತಲೆ ಕೂದಲಲ್ಲಿ ಹೆಚ್ಚು ಜಿಡ್ಡು ಅಥವಾ ಎಣ್ಣೆ ಅಂಶ ಇರುವವರು ಇದನ್ನು ಬಳಸುತ್ತಾರೆ. ಪೌಡರ್ ಅಥವಾ ಸ್ಪ್ರೇ ಮಾಡಿಕೊಂಡರೆ ಸ್ನಾನ ಮಾಡಿದಂತೆಯೇ ಕೂದಲು ಫ್ರೆಶ್ ಆಗಿರುತ್ತೆ. ಆಲ್ಕೋಹಾಲ್ ಅಥವಾ ಪಿಷ್ಠದ ಅಂಶಗಳಿಂದ ಇದನ್ನು ತಯಾರಿಸಲಾಗಿರುತ್ತೆ. ಇದನ್ನು ಹಾಕಿಕೊಂಡರೆ ಕೂದಲು ಒದ್ದೆಯಾಗುವುದಿಲ್ಲ. ಸ್ನಾನ ಮಾಡಿದಂತೆಯೇ ಇರುತ್ತೆ. ಆದರೆ ಇದರಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಜಿಂಜೀನ್ ಕೆಮಿಕಲ್ ಇದ್ದು, ಇದನ್ನು ಸೋಕಿದ ಚರ್ಮ, ಕೂದಲು ಅಥವಾ ದೇಹದ ಯಾವುದೇ ಅಂಗಕ್ಕೆ ಸೋಕಿದರೂ ಅದರಿಂದ ಕ್ಯಾನ್ಸರ್ ಬರುವ ಅತಂಕವಿದೆ ಎಂದು ತಜ್ಞರು ಹೇಳಿದ್ದರು. ಈ ಹಿನ್ನೆಯಲ್ಲಿ ಯುನಿಲಿವರ್ ಕಂಪೆನಿ ಡವ್, ಏರೋಆಲ್ ಡ್ರೈ ಶಾಂಪೂಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆದುಕೊಂಡಿದೆ.

ಡೌ ಡ್ರೈ ಶಾಂಪೂ ವಾಲ್ಯೂಮ್ & ಫುಲ್ನೆಸ್
ಡೌ ಡ್ರೈ ಶಾಂಪೂ ಫ್ರೆಶ್ ಕೋಕನಟ್
ಡೌ ಡ್ರೈ ಶಾಂಪೂ ಫ್ರೆಶ್ & ಫ್ಲೋರಲ್
ಡೌ ಡ್ರೈ ಶಾಂಪೂ ಅಲ್ಟ್ರಾ ಕ್ಲೀನ್
ಡೌ ಡ್ರೈ ಶಾಂಪೂ ಇನ್ವಿಸಿಬಲ್
ಡೌ ಡ್ರೈ ಶಾಂಪೂ ಡೆಟೊಕ್ & ಪ್ಯೂರಿಫೈ
ಡೌ ಡ್ರೈ ಶಾಂಪೂ ಗೋ ಆಕ್ಟಿವ್
ನೆಕ್ಸಸ್ ಡ್ರೈ ಶಾಂಪೂ ರಿಫ್ರೆಶಿಂಗ್ ಮಿಸ್ಟ್
ನೆಕ್ಸಸ್ ಇನರ್ಜಿ ಫೋಮ್ ಶಾಂಪೂ
ಸುಯೇವ್ ಡ್ರೈ ಶಾಂಪೂ ಹೇರ್ ರಿಫ್ರೆಶ್ನರ್
ಸುಯೇವ್ ಡ್ರೈ ಶಾಂಪೂ ರಿಫ್ರೆಶ್ & ರಿವೈವ್
ಟ್ರಿಸಮ್ ಡ್ರೈ ಶಾಂಪೂ ವಾಲ್ಯೂಮೈಝಿಂಗ್
ಟ್ರಿಸಮ್ ಡ್ರೈ ಶಾಂಪೂ ಫ್ರೆಶ್ & ಕ್ಲೀನ್
ಟ್ರಿಸಮ್ ಪ್ರೊ ಪ್ಯೂರ್ ಡ್ರೈ ಶಾಂಪೂ
ಬೆಡ್ ಹೆಡ್ ಒಹೆಚ್ ಬೀಹೈ ಡ್ರೈ ಶಾಂಪೂ
ಬೆಡ್ ಹೆಡ್ ಒಹೆಚ್ ಬಿಹೈವ್ ವಾಲ್ಯೂಮೈಝಿಂಗ್ ಡ್ರೈ ಶಾಂಪೂ
ಬೆಡ್ ಹೆಡ್ ಡರ್ಟಿ ಸೀಕ್ರೆಟ್ ಡ್ರೈ ಶಾಂಪೂ
ಬೆಡ್ ಹೆಡ್ ರಾಕಾಲಿಕ್ ಡರ್ಟಿ ಸೀಕ್ರೆಟ್ ಡ್ರೈ ಶಾಂಪೂ
ಹಿಂಪಡೆಯಲಾದ ಉತ್ಪನ್ನಗಳು ಮುಖ್ಯವಾಗಿ ಅಕ್ಟೋಬರ್ 2021ರ ಮೊದಲು ತಯಾರಿಸಲ್ಪಟ್ಟವುಗಳಾಗಿವೆ ಎಂದೂ ವರದಿ ಹೇಳಿದೆ.ಕನೆಕ್ಟಿಕಟ್ನಲ್ಲಿರುವ ವ್ಯಾಲಿಸೂರ್ ಎಂಬ ವಿಶ್ಲೇಷಣಾ ಲ್ಯಾಬ್ನ ಪರೀಕ್ಷೆಯಿಂದ ಇಂತಹ ಉತ್ಪನ್ನಗಳಲ್ಲಿ ಬೆಂಜೀನ್ನ ಅಂಶಗಳಿರುವುದು ಕಂಡು ಬರುತ್ತಿದ್ದಂತೆ ಈ ಪ್ರಕ್ರಿಯೆಗಳು ಪ್ರಾರಂಭವಾದವು.ವೈಯಕ್ತಿಕ ನೈರ್ಮಲ್ಯ ಉತ್ಪನ್ನಗಳಲ್ಲಿರುವ ಏರೋಸಾಲ್ ಸುರಕ್ಷತೆಯ ಬಗ್ಗೆಯೂ ಈ ಕ್ರಮವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವರದಿಗಳು ಹೇಳಿವೆ.
ಸಮಸ್ಯೆಯು ಮುಖ್ಯವಾಗಿ ಬಾಟಲ್ಗಳಿಂದ ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಸಿಂಪಡಿಸಲು ಬಳಸುವ ಪ್ರೊಪೆಲ್ಲಂಟ್ಗಳಿಂದ ಉಂಟಾಗುತ್ತಿವೆ. ಯೂನಿಲಿವರ್ ತನ್ನ ಡ್ರೈ ಶಾಂಪೂ ಹಿಂಪಡೆಯುವಿಕೆಯ ಸಂದರ್ಭದಲ್ಲಿ, ಇದೇ ಮುಖ್ಯ ಕಾರಣ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.



