2022ರ ಸೆಪ್ಟೆಂಬರ್ ಆಪಲ್ ತಿಂಗಳಾಗುವ ಸಾಧ್ಯತೆ ಇದೆ. ಸೆಪ್ಟೆಂಬರಲ್ಲಿ ಐಫೋನ್ 14 ಸಿರೀಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಆಪಲ್ ಮುಂದಾಗಿದೆ. ಈ ಸಿರೀಸ್ನಲ್ಲಿ ಹೊಸ ಚಿಪ್‌ಸೆಟ್, ಕ್ಯಾಮೆರಾ ಮತ್ತು ಇತರ ಗ್ಯಾಜೆಟ್ಗಳಲ್ಲಿ ನವೀಕರಣ ಮಾಡುತ್ತಿದೆ. ಪ್ರತ ಬಾರಿ ಐಫೋನ್ ಹೊಸ ಸಿರೀಸ್ ಬಂದಾಗಲೂ ಇವೆಲ್ಲ ಸಾಮಾನ್ಯ. ಫೇಸ್‌ಐಡಿ ಕಟೌಟ್‌ನೊಂದಿಗೆ ಪಂಚ್ ಹೋಲ್ ಡಿಸ್‌ಪ್ಲೇ ವಿನ್ಯಾಸದಲ್ಲಿ ಐಫೋನ್ 14 ಸರಣಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ. ಇದರ ಪ್ರೊ ಮಾದರಿ ಸ್ಮಾರ್ಟ್‌ಫೋನ್‌ಗಳು ಎ 16 ಬಯೋನಿಕ್ ಚಿಪ್‌ಸೆಟ್ ಹೊಂದಿರಲಿವೆ. ಹಾಗೂ ಸುಮಾರು 30 ನಿಮಿಷಗಳಲ್ಲಿ 0ಯಿಂದ 100 ಪರ್ಸೆಂಟ್ ಚಾರ್ಜ್ ಆಗುತ್ತದೆ ಎಂದೂ ಹೇಳಲಾಗುತ್ತಿದೆ. ಇವೆಲ್ಲವಕ್ಕಿಂತ ಹೆಚ್ಚಾಗಿ, ಐಫೋನ್ 14 ಸರಣಿ ಸ್ಮಾರ್ಟ್‌ಫೋನ್‌ಗಳು 30-ವ್ಯಾಟ್ ಚಾರ್ಜಿಂಗ್ ಬೆಂಬಲವನ್ನು ನೀಡಬಹುದು ಎಂಬ ನಿರೀಕ್ಷೆಯೂ ಇದೆ.
ನಮಗೆಲ್ಲ ಗೊತ್ತಿರುವಂತೆ ಇಂಡಿಯಾ ವಿಶ್ವದ ಅತಿದೊಡ್ಡ ಮಾರುಕಟ್ಟೆ. ಇಲ್ಲಿ ಆಪಲ್ ತನ್ನ ಮಾರ್ಕೆಟ್ ಹೆಚ್ಚಿಸಿಕೊಳ್ಳೋಕೆ ನೋಡುತ್ತಿದೆ. ಅವಕಾಶಗಳೂ ಇವೆ. ಅಷ್ಟೇ ಅಲ್ಲ, ಇಲ್ಲಿಯೇ ಮ್ಯಾನುಫಾಕ್ಚರಿಂಗ್ ಆರಂಭಿಸುವ ಸೂಚನೆಯೂ ಇದೆ. ಚೀನಾದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳೆಲ್ಲ ಆಪಲ್ ಕಂಪೆನಿಯನ್ನು ಭಾರತದತ್ತ ಬರುವಂತೆ ಮಾಡುತ್ತಿವೆ. ಇಂಡಿಯಾದಲ್ಲಿಯೇ ಐಫೋನ್ ಪ್ರೊಡಕ್ಷನ್ ಯೂನಿಟ್ ಸ್ಥಾಪಿಸುವುದು ಆಪಲ್ ಕಂಪೆನಿಯ ಪ್ರಮುಖ ಗುರಿಗಳಲ್ಲಿ ಒಂದು.
ಆಪಲ್ ಕಂಪೆನಿ ಇಲ್ಲಿಯೇ ಉತ್ಪಾದನೆ ಮಾಡುವುದಕ್ಕೆ ಪೂರಕ ವಾತಾವರಣವಂತೂ ಇದೆ. ಲೇಬರ್ ಚಾರ್ಜ್ ಕಡಿಮೆ. ಮಾರುಕಟ್ಟೆಯೂ ಸ್ಥಿರವಾಗಿದೆ. ಚೀನಾದ ಮಾರುಕಟ್ಟೆ ವಿಶ್ಲೇಷಕರೇ ಹೇಳುತ್ತಿರುವ ಪ್ರಕಾರ ಈ ಸುದ್ದಿ ನಿಜ. ಆದರೆ, ಈ ಬಗ್ಗೆ ಆಪಲ್ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.


ಚೀನಾದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳಿಂದ ಆಪಲ್ ಬೇಸತ್ತು ಹೋಗಿದೆ. ಚೀನಾದಲ್ಲೀಗ ಆರ್ಥಿಕತೆ ಕುಸಿಯುತ್ತಿದ್ದು ಇಷ್ಟು ದಿನ ಅವರು ತೋರಿಸಿದ್ದ ಗಾಳಿಗೋಪುರ ಅಲುಗಾಡುತ್ತಿದೆ. ಹೀಗಾಗಿ ವಿಶ್ವದ ಟೆಕ್ ಬ್ರ್ಯಾಂಡ್ ಆಪಲ್ ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತಿದೆ ಎಂಬ ಮಾಹಿತಿಗಳು ಹೊರಬೀಳುತ್ತಿವೆ. ಅವುಗಳ ಪ್ರಕಾರ ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ವೇಳೆಗೆ ಭಾರತದಿಂದ ಐಫೋನ್ 14 ಸರಣಿ ಸ್ಮಾರ್ಟ್‌ಫೋನ್‌ಗಳ ಮೊದಲ ಬ್ಯಾಚ್ ಉತ್ಪಾದನೆಯಾಗಲಿವೆ. ಈ ಮೂಲಕ ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಐಫೋನ್ 14 ಸರಣಿ ಸ್ಮಾರ್ಟ್‌ಫೋನ್‌ಗಳು ತಯಾರಾಗುತ್ತವೆ ಎಂಬ ಸುದ್ದಿಗೆ ಮತ್ತಷ್ಟು ಬಲ ಬಂದಿದೆ.
ಚೀನಾದಲ್ಲಿನ ಸ್ಥಿತಿಗತಿಗೆ ಭವಿಷ್ಯದಲ್ಲೂ ಕೊನೆ ಇಲ್ಲ ಎಂಬುದನ್ನು ಅರಿತ ಆಪಲ್, ಭಾರತವನ್ನು ಸೆಲೆಕ್ಟ್ ಮಾಡಿಕೊಂಡಿದೆ. ಇದರ ಜೊತೆಗೆ ಭಾರತದ ನೀತಿಗಳೂ ಅಷ್ಟೆ. ಇಲ್ಲಿಯೆ ಉತ್ಪಾದನೆ ಮಾಡಿದರೆ ಸರ್ಕಾರದಿಂದ ಸಿಗುವ ಆರ್ಥಿಕ ಅನುಕೂಲಗಳು ಇಲ್ಲಿ ಕೇವಲ ಅಸೆಂಬರ್ ಮತ್ತು ಮಾರಾಟ ಮಾಡುವುದರಿಂದ ಸಿಕ್ಕಲ್ಲ. ಇಲ್ಲಿಯೇ ಉತ್ಪಾದನೆ ಮಾಡಿ, ಇಲ್ಲಿಂದಲೇ ರಫ್ತು ಮಾಡಿದರೆ ಆಪಲ್ ಕಂಪೆನಿಗೂ ಲಾಭವಿದೆ.



