ಯೋಗರಾಜ್ ಭಟ್ (Yogaraj Bhat) ಸಿನಿಮಾ ಅಂದ ಮೇಲೆ ಸಿನಿಮಾ ಪ್ರಚಾರವೂ ವಿಭಿನ್ನವಾಗಿಯೇ ಇರುತ್ತೆ. ನೆಗೆಟಿವ್ ಪ್ರಚಾರಗಳಿರಲ್ಲ. ಸುಳ್ ಸುಳ್ಳೇ ಗಿಮಿಕ್ಕುಗಳಿರಲ್ಲ. ಬದಲಿಗೆ ಶಿಸ್ತುಬದ್ಧ ಪ್ರಚಾರವನ್ನೇ ಮಾಡುವ ಯೋಗರಾಜ್ ಭಟ್ ಈ ಬಾರಿ ಗರಡಿ ಸಿನಿಮಾಗೆ ನ್ಯೂಸ್ ಪೇಪರ್ ಸುದ್ದಿಯನ್ನೇ (news paper headline) ಸುದ್ದಿ ಮಾಡಿದ್ದಾರೆ.
ಭಾನುವಾರದ ಪತ್ರಿಕೆಗಳಲ್ಲಿ ಯಾವ ಪತ್ರಿಕೆ ನೋಡಿದರೂ ಗರಡಿ (garadi) ಸಿನಿಮಾದ ಫುಲ್ ಪೇಜ್ ನ್ಯೂಸ್ ಇತ್ತು. ಕನ್ನಡ ಪ್ರಭ, ಉದಯವಾಣಿ (kannada prabha, udayavani) ಸೇರಿದಂತೆ ಎಲ್ಲ ಪತ್ರಿಕೆಗಳಲ್ಲೂ ಗರಡಿ ಮೇಯ್ನ್ ಸುದ್ದಿ ಗರಡಿಯದ್ದೇ. ಈ ಪೇಪರ್ ನೋಡಿದವರಿಗೆ ಸಿನಿಮಾದ ಕಥೆಯ ಸುಳಿವಂತೂ ಸಿಕ್ಕಿತು. ಗರಡಿ ಸಿನಿಮಾದಲ್ಲಿ ಪೈಲ್ವಾನ್ ಒಬ್ಬನ ಕೊಲೆ, ಆ ಕೊಲೆ ಹೀರೋ ಮತ್ತು ಹೀರೋನ ಗುರುವಿನ ಮೇಲೆ ಬರೋದು, ಅವುಗಳಿಂದ ಆತ ಪಾರಾಗುವ ಕಥೆ ಇದೆ. ಯಶಸ್ ಸೂರ್ಯ (actor Yashas surya), ಸೋನಲ್ ಮಂಥೆರೋ (sonal manthero) ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ನಟ ದರ್ಶನ್ (actor Darshan) ಅತಿಥಿ ನಟರಾಗಿದ್ದಾರೆ. ಬಿಸಿ ಪಾಟೀಲ್ (kaurava BC patil) ನಿರ್ಮಾಪಕರಷ್ಟೇ ಅಲ್ಲ, ಚಿತ್ರದಲ್ಲಿ ಪೈಲ್ವಾನರ ಗುರುವೂ ಹೌದು. ನಡುವೆ ನಿಶ್ವಿಕಾ ನಾಯ್ಡು (niswhwia naidu) ಹೊಡಿರಲೆ ಹಲಗಿ (hodirale halagi..) ಎಂದು ಹುಡುಗರನ್ನು ಹುಚ್ಚಾಗಿಸಿ ಹೋಗ್ತಾರೆ. ಅರ್ಜುನ್ ಜನ್ಯ ಸಂಗೀತವಿದೆ. ಈಗಾಗಲೇ ‘ಗರಡಿ’ ಸಿನಿಮಾದ ಹಾಡುಗಳು ಹಿಟ್ ಆಗಿವೆ. ‘ಹೊಡಿರೆಲೆ ಹಲಗಿ..’ ಹಾಡು ಸದ್ದು ಮಾಡಿದೆ. ಯೋಗರಾಜ್ ಭಟ್ ಅವರು ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಹಾಡು ಮೂಡಿ ಬಂದಿದೆ. ಪೃಥ್ವಿ ಶಾಮನೂರು, ಧರ್ಮಣ್ಣ ಕಡೂರು, ರವಿಶಂಕರ್ ಮೊದಲಾದವರು ನಟಿಸಿರೋ ಚಿತ್ರದಲ್ಲಿ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಕೂಡಾ ಸ್ಪೆಷಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.



