ದೊಡ್ಮನೆಯ ಸಿನಿಮಾ ಎಂದರೆ ಅದರ ಖದರೇ ಬೇರೆ. ಅದು ಅಣ್ಣಾವ್ರ ಮನೆಯ ಸಿನಿಮಾ. ಆ ಮನೆಗೆ ದೊಡ್ಮನೆ ಹೆಸರು ಬಂದಿದ್ದು ಡಾ.ರಾಜ್ ಹಾಗೂ ಪಾರ್ವತಮ್ಮ ಅವರಿಂದ. ಅಲ್ಲಿ ಸೋತವರ ಸಂಖ್ಯೆ ಕಡಿಮೆ. ಡಾ.ರಾಜ್ ವಿಷಯ ಬಿಡಿ, ಅವರಷ್ಟು ಸಕ್ಸಸ್ ರೇಟ್ ಇರುವ ಇನ್ನೊಬ್ಬ ನಟನ ಉದಾಹರಣೆ ಯಾವುದೇ ಭಾಷೆಯಲ್ಲಿಯೂ ಇಲ್ಲ. ಶೇ.98ಕ್ಕಿಂತಲೂ ಹೆಚ್ಚು ಹಿಟ್ ಸಿನಿಮಾಗಳು ಡಾ.ರಾಜ್ ಹೆಸರಲ್ಲಿವೆ.

ದೊಡ್ಮನೆಯಿಂದ ಬಂದ ಇನ್ನೊಬ್ಬ ಹೀರೋ ಶಿವಣ್ಣ. ಇದೀಗ ತಾನೇ 125ನೇ ಸಿನಿಮಾ ರಿಲೀಸ್ ಆಗಿದೆ. ಹಿಟ್ ಆಗುವ ಎಲ್ಲ ಸೂಚನೆಯೂ ಇದೆ. ಶಿವಣ್ಣ ಅಭಿನಯದ ಮೊದಲ ಆನಂದ್, ರಥಸಪ್ತಮಿ ಹಾಗೂ ಮನ ಮೆಚ್ಚಿದ ಹುಡುಗಿ. ಮೂರೂ ಚಿತ್ರಗಳು ಶತದಿನೋತ್ಸವ ಆಚರಿಸಿ ಹ್ಯಾಟ್ರಿಕ್ ಹೀರೋ ಆದವರು. ಆರಂಭದಲ್ಲಂತೂ ಸೋಲೇ ಇಲ್ಲ.
ರಾಘವೇಂದ್ರ ರಾಜಕುಮಾರ್ ಕೂಡಾ ಅಷ್ಟೆ, ಮೊದಲ ಚಿತ್ರ ಚಿರಂಜೀವಿ ಸುಧಾಕರ್ ಸೋತಿತಾದರೂ ನಂತರದ ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ ಎರಡೂ ಇಂಡಸ್ಟ್ರಿ ಹಿಟ್.
ಇನ್ನು ಪುನೀತ್ ರಾಜಕುಮಾರ್. ಬಾಲನಟನಾಗಿಯೇ ಸ್ಟಾರ್ ಆಗಿದ್ದ ಪುನೀತ್, ಹೀರೋ ಆದ ಮೇಲೆ ಸೂಪರ್ ಸ್ಟಾರ್ ಆದರು. ಅಪ್ಪು ಚಿತ್ರಗಳು ಸೋತಿದ್ದು ಕಡಿಮೆ.

ಆದರೆ ಇದೇ ಅದೃಷ್ಟ ರಾಘವೇಂದ್ರ ರಾಜಕುಮಾರ್ ಪುತ್ರ ವಿನಯ್ ರಾಜಕುಮಾರ್ ಅವರಿಗೆ ಇಲ್ಲದಂತಾಗಿದೆ. ವಿನಯ್ ಅವರ ಮೊದಲ ಸಿನಿಮಾ ಸಿದ್ದಾರ್ಥ. ಮಿಲನ ಪ್ರಕಾಶ್ ನಿರ್ದೇಶನದ ಚಿತ್ರದ ಕಂಟೆಂಟ್, ಕ್ವಾಲಿಟಿ, ಹಾಡು ಎಲ್ಲವೂ ಚೆನ್ನಾಗಿತ್ತು. ಚಿತ್ರ ಸುಮಾರಾಗಿ ಓಡಿತಾದರೂ, ದೊಡ್ಡ ಮಟ್ಟದ ಹಿಟ್ ಆಗಲಿಲ್ಲ. ಆದರೆ, 2ನೇ ಚಿತ್ರ ರನ್ ಆಂಟನಿ, 3ನೇ ಸಿನಿಮಾ ಅನಂತು ವರ್ಸಸ್ ನುಸ್ರತ್, ಮತ್ತೀಗೆ ಕಳೆದ ವಾರ ರಿಲೀಸ್ ಆಗಿರೋ 10(ಟೆನ್) ಚಿತ್ರಗಳು ಸದ್ದು ಸುದ್ದಿ ಎರಡನ್ನೂ ಮಾಡದೆ ಥಿಯೇಟರಿಂದ ಎತ್ತಂಗಡಿಯಾಗಿವೆ.

ಇಲ್ಲಿ ಸಮಸ್ಯೆ ಚಿತ್ರದ ಕಥೆಗಳದ್ದಲ್ಲ. ವಿನಯ್ ರಾಜಕುಮಾರ್ ಅಭಿನಯದ್ದೂ ಅಲ್ಲ. ಯಾವತ್ತೋ ಶುರುವಾದ ಚಿತ್ರ, ಸರಿಯಾದ ಪ್ರಚಾರವೂ ಇಲ್ಲದೆ ಬೇಕಾಬಿಟ್ಟಿಯಾಗಿ ರಿಲೀಸ್ ಆಗುತ್ತಿರುವುದೂ ಒಂದು ಕಾರಣ. ಈಗ ಫೇಲ್ ಆಗಿರುವ ಬಹುತೇಕ ಚಿತ್ರಗಳ ಹಣೆಬರಹಕ್ಕೆ ಇದೇ ಕಾರಣ. ಈಗ 10 ಚಿತ್ರವೂ ಅಷ್ಟೆ. ಒಂದೇ ಒಂದು ಪ್ರಮೋಷನ್ ಕೂಡಾ ಇಲ್ಲದೆ, ಸರಿಯಾಗಿ ಪೋಸ್ಟರ್ ಅಂಟಿಸದೆ, ಟ್ರೇಲರ್, ಟೀಸರ್, ಹಾಡು, ಪತ್ರಿಕೆ, ಟಿವಿ ಚಾನೆಲ್, ಸೋಷಿಯಲ್ ಮೀಡಿಯಾ..ಎಲ್ಲಿಯೂ ಪ್ರಚಾರ ಮಾಡದೆ ದಿಢೀರ್ ಎಂದು ಬಿಡುಗಡೆಯಾದ ಚಿತ್ರ.
ಇವುಗಳಷ್ಟೇ ಅಲ್ಲ, 




