ಹಿಂದೂ ಹೃದಯ ಸಾಮ್ರಾಟನೆಂದೇ ಹೆಸರಾಗಿರುವ ಛತ್ರಪತಿ ಶಿವಾಜಿ, ಇತಿಹಾಸದಲ್ಲಿ ಮೊಘಲರ ವಿರುದ್ಧ ಸಿಡಿದೆದ್ದು ಹಿಂದೂ ರಾಜ್ಯ ಪ್ರತಿಷ್ಠಾಪನೆ ಮಾಡಿದ ರಾಜ. ಮರಾಠಿಗರಂತೂ ಶಿವಾಜಿಯನ್ನು ದೇವರೆಂದೇ ಪೂಜಿಸುತ್ತಾರೆ. ಶಿವಾಜಿಯ ಕುರಿತು ಹಲವು ಚಿತ್ರಗಳು ಬಂದಿವೆ. 



ಅಕ್ಷಯ್ ಕುಮಾರ್ ಬಯೋಪಿಕ್‍ಗಳಿಗೆ ಹೇಳಿ ಮಾಡಿಸಿದ ನಟ. ರಿಯಲ್ ಸ್ಟೋರಿಗಳನ್ನೇ ಸಿನಿಮಾ ಮಾಡಿ ಗೆದ್ದಿದ್ದೇ ಹೆಚ್ಚು. ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಪ್ಯಾಡ್ ಮ್ಯಾನ್, ಬೇಬಿ, ಮಿಷನ್ ಮಂಗಲ್, ಕೇಸರಿ, ರುಸ್ತುಂ, ಏರ್ ಲಿಫ್ಟ್, ಸ್ಪೆಷಲ್ 26.. ಎಲ್ಲವೂ ಬಯೋಪಿಕ್‍ಗಳೇ. ಈಗ ಮತ್ತೊಂದು ಬಯೋಪಿಕ್ ಸಿದ್ಧವಾಗಿದೆ.
ವೇದಾತ್ ಮರಾಠೆ ವೀರ್ ದೌಡಲೇ ಸಾಥ್.. ಇದು ಚಿತ್ರದ ಹೆಸರು. ಮಹೇಶ್ ಮಾಂಜ್ರೇಕರ್ ನಿರ್ದೇಶಕರಾಗಿದ್ದಾರೆ. ಇತ್ತೀಚೆಗೆ ಅಕ್ಷಯ್ ಕುಮಾರ್‍ಗೆ ಗೆಲುವು ಕೈಹಿಡಿದಿಲ್ಲ. ಸತತವಾಗಿ ಹಿಟ್ ಕೊಟ್ಟು ದಾಖಲೆ ಬರೆದಿದ್ದ ಅಕ್ಷಯ್ ಕುಮಾರ್, ಸತತವಾಗಿ ಸೋತು ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ರಾಣಾ ಪ್ರತಾಪ್ ಚಿತ್ರವೂ ಅಟ್ಟರ್ ಫ್ಲಾಪ್ ಆಗಿತ್ತು. ಬಚ್ಚನ್ ಪಾಂಡೆ, ರಕ್ಷಾ ಬಂಧನ್ ಚಿತ್ರಗಳೂ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ್ದವು. ಒಳ್ಳೆಯ ವಿಮರ್ಶೆ ಗಳಿಸಿದ್ದ ರಾಮ್ ಸೇತು ಕೂಡಾ ಕೈ ಹಿಡಿದಿರಲಿಲ್ಲ. ಹೀಗಿರುವಾಗಲೇ ಅಕ್ಷಯ್ ಕುಮಾರ್‍ಗೆ ಶಿವಾಜಿ ಚಿತ್ರ ಕೈಗೆ ಸಿಕ್ಕಿದೆ.

ಇದು ನನ್ನ ಅದೃಷ್ಟ. ಜೈ ಭವಾನಿ ಜೈ ಶಿವಾಜಿ ಎಂದು ಬರೆದುಕೊಂಡಿದ್ದಾರೆ ಅಕ್ಷಯ್ ಕುಮಾರ್. ಶಿವಾಜಿ ಪಾತ್ರ ಮಾಡುತ್ತಿರುವ ಅಕ್ಷಯ್ ಕುಮಾರ್ ಅವರಿಗೆ ತಾನಾಜಿ ಪಾತ್ರ ಮಾಡಿ ಗೆದ್ದಿದ್ದ ಅಜಯ್ ದೇವಗನ್ ಶುಭ ಕೋರಿದ್ದಾರೆ. ಶಿವಾಜಿ ನನ್ನ ಮೆಚ್ಚಿನ ಮರಾಠಿ ಹೀರೋ. ಶಿವಾಜಿಯ ಪಾತ್ರ ಮಡುವುದಕ್ಕೆ ನಿಜಕ್ಕೂ ನೀನು ಪುಣ್ಯ ಮಾಡಿದ್ದೀಯ ಅಕ್ಷಯ್ ಎಂದಿದ್ದಾರೆ ಅಜಯ್ ದೇವಗನ್.



