ಈ ವರ್ಷ ಕನ್ನಡ ಚಿತ್ರರಂಗಕ್ಕೆ ಸುಗ್ಗಿ. ಯಶಸ್ಸಿನ ಸುಗ್ಗಿ. ಪ್ಯಾನ್ ಇಂಡಿಯಾ ಸುಗ್ಗಿ. ಒಂದಲ್ಲ..ಎರಡಲ್ಲ.. ಐದು ಚಿತ್ರಗಳು 100 ಕೋಟಿ+ ಗಳಿಕೆ ಮಾಡಿವೆ. ಸ್ಯಾಂಡಲ್ವುಡ್ನಲ್ಲಿ ಈ ವರ್ಷ ಬಿಡುಗಡೆ ಆದ 80ಕ್ಕು ಹೆಚ್ಚು ಸಿನಿಮಾಗಳಲ್ಲಿ ಗೆದ್ದ ಮೂವಿಗಳ ಸಂಖ್ಯೆ 20ಕ್ಕೂ ಹೆಚ್ಚು. ಸಾಮಾನ್ಯವಾಗಿ ಯಶಸ್ವೀ ಚಿತ್ರಗಳ ಸಂಖ್ಯೆ 10 ದಾಟಲ್ಲ. ಆದರೆ ಈ ಬಾರಿ ಡಿಫರೆಂಟ್. ಹೊಸ ನಟರು ಹಳೆ ಸ್ಟಾರ್ ಹೀರೋಗಳು ಎನ್ನದೇ ಎಲ್ಲಾ ಸಿನಿಮಾಗಳನ್ನೂ ಪ್ರೇಕ್ಷಕ ಥಿಯೇಟರ್ಗೆ ನುಗ್ಗಿ ನೋಡಿದ್ದಾರೆ. ಹಾಗಾದ್ರೆ 2022ರಲ್ಲಿ ಕನ್ನಡದ ಅಂತ್ಯಂತ ಜನಪ್ರೀಯ ಹೀರೋ ಯಾರು.? ಟಾಪ್ 5 ಹೀರೋಗಳ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ.? ಅನ್ನೋದಕ್ಕೆ ಸಮೀಕ್ಷೆಯೊಂದು ನಡೆದಿದೆ. ಖಾಸಗಿ ಸಂಸ್ಥೆ ನಡೆಸಿರುವ ಆನ್ಲೈನ್ ಸಮೀಕ್ಷೆಯ ರಿಸಲ್ಟ್ ಹೀಗಿದೆ.

ನಂ.10 :ಶರಣ್
ಶರಣ್ ಈ ವರ್ಷ ಗುರು ಶಿಷ್ಯರು ಚಿತ್ರದಲ್ಲಿ ನಟಿಸಿದರು. ಗೆದ್ದರು. ಹಾಡುಗಳೂ ಹಿಟ್ ಆದವು. ಕಾಂತಾರಕ್ಕೆ ಒಂದು ವಾರ ಮುಂಚೆ ರಿಲೀಸ್ ಆದ ಗುರು ಶಿಷ್ಯರು ಬಾಕ್ಸಾಫೀಸ್ನಲ್ಲಿ ಯಶಸ್ಸು ಕಂಡಿತು. ಶರಣ್ 10ನೇ ಸ್ಥಾನದಲ್ಲಿದ್ದಾರೆ.
ನಂ.9 : ದುನಿಯಾ ವಿಜಯ್
ದುನಿಯಾ ವಿಜಯ್ ಅವರ ಯಾವ ಚಿತ್ರಗಳೂ ಈ ವರ್ಷ ರಿಲೀಸ್ ಆಗಲಿಲ್ಲ. ಆದರೆ ಕಳೆದ ವರ್ಷದ ಕೊನೆಯಲ್ಲಿ ಬಂದ ಸಲಗನ ಹವಾ ಇನ್ನೂ ಮುಗಿದಿಲ್ಲ. ಇನ್ನೊಂದು ಚಿತ್ರಕ್ಕೆ ಸಿದ್ಧರಾಗಿರುವ ವಿಜಯ್ ಅವರ ನಿರ್ದೇಶಿಸಿರುವ ಭೀಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ. ಜನಪ್ರಿಯತೆಗೇನೂ ಕೊರತೆಯಾಗಿಲ್ಲ.
ನಂ. 8 : ಗಣೇಶ್
ಈ ವರ್ಷ ಗಣೇಶ್ ಗಾಳಿಪಟ-2 ಸಕ್ಸಸ್ಸಿನೊಂದಿಗೆ ಟಾಪ್ಗೆ ಬಂದಿದ್ದಾರೆ. ವರ್ಷದ ಕೊನೆಗೆ ತ್ರಿಬ್ಬಲ್ ರೈಡಿಂಗ್ ರಿಲೀಸ್ ಆಗಿ ಆ ಸಿನಿಮಾ ಕೂಡಾ ಗೆದ್ದರೆ ಗೋಲ್ಡನ್ ಸ್ಟಾರ್ ಬಿರುದಿಗೆ ತಕ್ಕಂತೆ ಗೋಲ್ಡನ್ ಸ್ಟಾರ್ ಆಗಲಿದ್ದಾರೆ.
ನಂ. 7 : ರಾಜ್ ಬಿ.ಶೆಟ್ಟಿ
ಈ ವರ್ಷ ಇಡೀ ಇಂಡಿಯನ್ ಇಂಡಸ್ಟ್ರಿಯ ಗಮನ ಸೆಳೆದ ಇನ್ನೊಬ್ಬ ನಟ ನಿರ್ದೇಶಕ ಇವರು. ಗರುಡ ಗಮನ ವೃಷಭ ವಾಹನ ಗೆದ್ದಿದ್ದಷ್ಟೇ ಅಲ್ಲ, ರಾಜಮೌಳಿಯಂತಹವರ ಗಮನವನ್ನೂ ಸೆಳೆಯಿತು. ಅದರ ಇಂಪ್ಯಾಕ್ಟ್ ರಾಜ್ ಬಿ.ಶೆಟ್ಟಿ ನಂ.7 ಸ್ಥಾನದಲ್ಲಿದ್ದಾರೆ.
ನಂ. 6 : ಶಿವ ರಾಜ್ ಕುಮಾರ್
ಶಿವಣ್ಣಗೆ ಈ ವರ್ಷ ಶುಭ ಸೂಚಕವೇನೂ ಅಲ್ಲ. ಸೋತಿದ್ದೇ ಎಲ್ಲ. ಜೊತೆಗೆ ತಮ್ಮ ಪುನೀತ್ ಸಾವು ಕೂಡಾ ಸೇರಿದೆ. ಆದರೆ ಮುಂದಿನ ವರ್ಷ ಹಾಗಿರುವುದಿಲ್ಲ. ವರ್ಷದ ಕೊನೆಗೆ ತೆರೆಗೆ ಬರಲಿರುವ ವೇದ ಹೊಸ ಇತಿಹಾಸ ಬರೆಯುವ ನಿರೀಕ್ಷೆ ಹುಟ್ಟಿಸಿದೆ. ಅದು ಶಿವಣ್ಣ ಅವರ 125ನೇ ಸಿನಿಮಾ ಕೂಡಾ ಹೌದು.
ನಂ. 5 : ರಿಷಬ್ ಶೆಟ್ಟಿ
ಸದ್ಯ ಇಂಡಿಯಾದಲ್ಲಿ ಟ್ರೆಂಡ್ನಲ್ಲಿರೋದು ಕಾಂತಾರ ಮತ್ತು ರಿಷಬ್ ಶೆಟ್ಟಿ. ಕಾಂತಾರ ಕನ್ನಡದ ಚಿತ್ರರಂಗದ ಹೆಸರನ್ನ ಹಾಗೂ ಸಿನಿಮಾದ ಹೀರೋ ರಿಷಬ್ ಶೆಟ್ಟಿಯನ್ನ ಅಟ್ಟಕ್ಕೇರಿಸಿ ನಂ.5 ಸ್ಥಾನಕ್ಕೆ ತಂದಿದೆ. ಭಾರತೀಯ ಚಿತ್ರ ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಡಿವೈನ್ ಸ್ಟಾರ್ ಅನ್ನೋ ಬಿರುದನ್ನೂ ಕೊಟ್ಟಿದೆ.
ನಂ. 4 : ರಕ್ಷಿತ್ ಶೆಟ್ಟಿ
ಈ ವರ್ಷ ಕನ್ನಡದ ಜನಪ್ರಿಯ ನಟರ ಪಟ್ಟಿಯಲ್ಲಿ ಪೈಪೋಟಿಯಲ್ಲಿ ನಿಂತು ದೊಡ್ಡ ಮಟ್ಟದಲ್ಲಿ ಗೆದ್ದವರು ರಕ್ಷಿತ್ ಶೆಟ್ಟಿ. 777 ಚಾರ್ಲಿ ಸಿನಿಮಾದ ದೊಡ್ಡ ಗೆಲುವು ಕನ್ನಡದ ಜನಪ್ರಿಯ ನಟರ ಪಟ್ಟಿಯಲ್ಲಿ ರಕ್ಷಿತ್ ಶೆಟ್ಟಿಯನ್ನ ನಾಲ್ಕನೇ ಸ್ಥಾನಕ್ಕೇರಿಸಿದೆ.
ನಂ. 3 : ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್
ಇದು ಸಿನಿಮಾ ಸಕ್ಸಸ್ ಹಾಗೂ ಸಿನಿಮಾದ ಜನಪ್ರಿಯತೆ ಎರಡನ್ನೂ ಆಧರಿಸಿ ನೀಡಲಾದ ರೇಟಿಂಗ್. ಜನಪ್ರಿಯತೆಯ ಲೆಕ್ಕದಲ್ಲಿ ಪುನೀತ್ ನಂ.1 ಅನ್ನೋದ್ರಲ್ಲಿ ಯಾವ ಅನುಮಾನವೂ ಅಲ್ಲ. ಜೇಮ್ಸ್, ಲಕ್ಕಿಮ್ಯಾನ್ ಹಾಗೂ ಗಂಧದ ಗುಡಿ ಮೂರೂ ಗೆದ್ದಿವೆ.
ನಂ. 2 : ಸುದೀಪ್
ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಮೂಲಕ ಕನ್ನಡ ಚಿತ್ರರಂಗ ಟೆಕ್ನಿಕಲಿ ಎಷ್ಟು ಸ್ಟ್ರಾಂಗ್ ಅನ್ನೋದನ್ನ ಇಂಡಿಯಾಗೆ ತೋರಿಸಿಕೊಟ್ಟು ಗೆದ್ದರು. ಕಿಚ್ಚನ ಗತ್ತು ಇಂಡಿಯಾಗೆ ಗೊತ್ತು ಅನ್ನೋ ರೀತಿ ಇದ್ದವರು ಸುದೀಪ್. ಜನಪ್ರಿಯತೆ ದೃಷ್ಟಿಯಿಂದ ಕಿಚ್ಚ ಸುದೀಪ್ 2ನೇ ಸ್ಥಾನದಲ್ಲಿದ್ದಾರೆ.
ನಂ. 1 : ಯಶ್
ಕನ್ನಡದ ಅತ್ಯಂತ ಜನಪ್ರಿಯ ಸ್ಟಾರ್ ನಟನ ಪಟ್ಟಿಯಲ್ಲಿ ಯಶ್ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಕೆಜಿಎಫ್-2 ಸಿನಿಮಾ ಗೆದ್ದ ಮೇಲೆ ಯಶ್ಗೆ ಈ ಪಟ್ಟ ಸಿಕ್ಕಿದೆ. ಯಶ್ ಅವರ ಕೆಜಿಎಫ್ ಚಾಪ್ಟರ್ 2 ಹೊಸ ಇತಿಹಾಸವನ್ನೇ ಬರೆದಿದ್ದು ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ದಾಖಲೆ ಬರೆದಿದೆ. ಯಶ್ಗೆ ನಂ.1 ಸ್ಥಾನ ಸಿಕ್ಕಿದೆ.



