ರಶ್ಮಿಕಾ ಮಂದಣ್ಣ ಏನೇ ಮಾತನಾಡಿದರೂ ವಿವಾದವಾಗುತ್ತದಾ?
ಹೌದು ಎನ್ನಬೇಕು. ಏಕೆಂದರೆ ಇತ್ತೀಚೆಗೆ ರಶ್ಮಿಕಾ ತುಟಿ ಬಿಚ್ಚಿದರೆ ಸಾಕು, ಒಂದು ಕಾಂಟ್ರವರ್ಸಿ ಸೃಷ್ಟಿಯಾಗುತ್ತಿದೆ. ಹೊಸ ಸಿನಿಮಾ ಘೋಷಣೆಯಾಗಲಿ, ಹೊಸ ಹಾಡು ರಿಲೀಸ್ ಆಗಲಿ, ಒಂದು ಇಂಟರ್ ವ್ಯೂ ಅಟೆಂಡ್ ಮಾಡಲಿ, ಮಾತನಾಡಲಿ, ಮಾತನಾಡದೇ ಇರಲಿ, ಮಾಡ್ ಡ್ರೆಸ್ ಹಾಕಿರಲಿ, ಟ್ರೆಡಿಷನಲ್ ಡ್ರೆಸ್ ಹಾಕಿರಲಿ.. ನಕ್ಕರೆ ಒಂದು ವಿವಾದ. ನಗದೇ ಸೀರಿಯಸ್ಸಾಗಿ ಇದ್ದರೆ ಒಂದು ವಿವಾದ.. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಷ್ ಎಂದು ಕರೆದರೋ ಗೊತ್ತಿಲ್ಲ, ಆದರೆ ಕಾಂಟ್ರವರ್ಸಿಗಳಲ್ಲಿ ಕ್ರಷ್ ಆಗುತ್ತಿರುವುದಂತೂ ನಿಜ. ಇತ್ತೀಚೆಗೆ ಆಗಿದ್ದೂ ಅದೇ.




ಆದರೆ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿಯೇ ಮಾಡುತ್ತಿರುವ ಚಿತ್ರತಂಡ ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಿತ್ತು. ಆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಶ್ಮಿಕಾ ಮಂದಣ್ಣ ನಾನು ಚಿಕ್ಕಂದಿನಲ್ಲಿ ಹೆಚ್ಚು ಹೆಚ್ಚು ಬಾಲಿವುಡ್ ಸಾಂಗ್ಸ್ ಕೇಳುತ್ತಿದ್ದೆ. ಅದರಲ್ಲೂ ಹಳೆಯ ಹಿಂದಿ ರೊಮ್ಯಾಂಟಿಕ್ ಸಾಂಗ್ಸ್ ಎಂದರೆ ಸಖತ್ ಇಷ್ಟ ಎಂದರು. ಅಷ್ಟೆ, ವಿವಾದವಾಗಿ ಹೋಯ್ತು.

ರಶ್ಮಿಕಾ ಮಂದಣ್ಣ ಎಲ್ಲಿಯೂ ಸೌಥ್ ಸಿನಿಮಾ ಎಂಬ ಪದ ಬಳಸದೇ ಇದ್ದರೂ ಇದು ದಕ್ಷಿಣದ ಚಿತ್ರರಂಗವನ್ನೇ ಗುರಿಯಿಟ್ಟು ಹೇಳಿದ್ದಾರೆ. ಯಾಕೆ ನಮ್ಮಲ್ಲಿ ಹಂಸಲೇಖ, ಇಳಯರಾಜ, ರಾಜನ್-ನಾಗೇಂದ್ರ, ವಿಜಯಭಾಸ್ಕರ್ ಇಲ್ಲವೇ. ಕನ್ನಡದ ಹಾಡುಗಳೂ ರೊಮ್ಯಾಂಟಿಕ್ ಆಗಿಲ್ಲವೇ?
ಬ್ಲಾಬ್ಲಾಬ್ಲಾಬ್ಲಾಬ್ಲಾಬ್ಲಾಬ್ಲಾಬ್ಲಾಬ್ಲಾಬ್ಲಾಬ್ಲಾಬ್ಲಾ ಎಂಬ ಟೀಕೆ ಶುರುವಾದವು.
ಆದರೆ ರಶ್ಮಿಕಾ ಮಂದಣ್ಣ ಹೇಳಿದ್ದ ಮಾತುಗಳಲ್ಲಿ ಯಾವ ವಿವಾದವೂ ಇರಲಿಲ್ಲ. ನನಗೆ ಹಳೆಯ ಹಿಂದಿ ರೊಮ್ಯಾಂಟಿಕ್ ಸಾಂಗ್ಸ್ ಇಷ್ಟ. ಈಗ ಅದೇ ಹಿಂದಿಯಲ್ಲಿ ರೊಮ್ಯಾಂಟಿಕ್ ಸಾಂಗ್‍ನಲ್ಲಿ ನಟಿಸಿದ್ದೇನೆ. ಥ್ರಿಲ್ ಆಗಿದೆ ಎಂದಿದ್ದಾರೆ. ಒಬ್ಬ ನಟಿ ತಾನು ನಟಿಸಿದ್ದಕ್ಕೆ ಎಕ್ಸೈಟ್ ಆದೆ ಎಂದು ಹೇಳೋದು ಕೂಡಾ ತಪ್ಪಾ? ಟೀಕೆಗಳು ಮಿತಿಯಲ್ಲಿರಬೇಡವಾ..



