ಒಂದು ಕಡೆ ಸಮಂತಾ ನನ್ನ ಮೊದಲ ಕ್ರಶ್ ಎಂದಿರೋ ವಿಜಯ್ ದೇವರಕೊಂಡ ಹೇಳಿಕೆ ಸಂಚಲನ ಸೃಷ್ಟಿಸುತ್ತಿರುವಾಗಲೇ ನಟಿ ದಿ.ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹೇಳಿಕೆ ಬಿರುಗಾಳಿಯನ್ನೇ ಎಬ್ಬಿಸಿದೆ. ವಿಜಯ್ ದೇವರಕೊಂಡ ಕುರಿತು ಹೇಳಿದ್ದಿಷ್ಟೆ. ವಿಜಯ್ ದೇವರಕೊಂಡ ಪ್ರಾಕ್ಟಿಕಲಿ ಮ್ಯಾರೀಡ್ ಎಂದು. ಅದು ಫ್ಯಾನ್ಸ್ ಮಧ್ಯೆ ಸೃಷ್ಟಿಸಿದ ಊಹಾಪೋಹಗಳು ಒಂದೆರಡಲ್ಲ.
ಜಾಹ್ನವಿ ಕಪೂರ್ ಈ ಮಾತು ಹೇಳಿದ್ದು ಸಂದರ್ಶನವೊಂದರಲ್ಲಿ. ಆಗಿನ್ನೂ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫಾರಿನ್ ಟ್ರಿಪ್ ಮುಗಿಸಿ ಬಂದಿದ್ದರು. ಅ ಸುದ್ದಿಯೇ ಸಂಚಲನ ಸೃಷ್ಟಿಸಿದ್ದಾಗ ಜಾಹ್ನವಿ ಕಪೂರ್ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಹಾಗಾದರೆ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಮದುವೆಯಾಗಿದ್ದಾರಾ? ಮದುವೆಯನ್ನು ಗುಟ್ಟಾಗಿಟ್ಟಿದ್ದಾರಾ? ಎಂದೆಲ್ಲ ಪ್ರಶ್ನೆಗಳೆದ್ದಿದ್ದವು. ಜಾಹ್ನವಿ ಕಪೂರ್ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

ನನಗೆ ಸಂದರ್ಶನದಲ್ಲಿ ನೀವು ಸ್ವಯಂವರ ಎದುರಿಸುವುದಾದರೆ ವರರ ಲಿಸ್ಟಿನಲ್ಲಿ ಯಾರನ್ನು ನೋಡಲು ಬಯಸುತ್ತೀರಿ ಎಂದು ಪ್ರಶ್ನೆ ಕೇಳಿದ್ದರು. ನಾನು ರಣಬೀರ್ ಕಪೂರ್, ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಹೆಸರು ಹೇಳಿದ್ದೆ. ಅಷ್ಟು ಹೊತ್ತಿಗೆ ರಣಬೀರ್ ಕಪೂರ್ಗೆ ಈಗಿನ್ನೂ ಮದುವೆಯಾಗಿದೆ ಅನ್ನೋದು ನೆನಪಾಯ್ತು. ಆಗ ನಾನು ರಣ್ಬೀರ್ ಕಪೂರ್ ಬದಲಿಗೆ ಹೆಸರು ಹುಡುಕುತ್ತಿದ್ದಾಗ.. ಯಾರ್ ಹೆಸರು ಹೇಳೋದು. ಎಲ್ಲರಿಗೂ ಮದುವೆಯಾಗಿದೆಯಲ್ಲ ಎನ್ನುತ್ತಿದ್ದೆ. ಆಗ ಸಂದರ್ಶನಕಾರರೇ ವಿಜಯ್ ದೇವರಕೊಂಡ ಹೆಸರು ಹೇಳಿದ್ದರು. ಆಗ ನಾನು ಹಿ ಈಸ್ ಪ್ರಾಕ್ಟಿಕಲಿ ಮ್ಯಾರೀಡ್ ಎಂದಿದ್ದೆ.
ಇತ್ತೀಚೆಗೆ ಇದೇ ಪ್ರಶ್ನೆ ರಶ್ಮಿಕಾ ಮಂದಣ್ಣ ಅವರಿಗೂ ಎದುರಾಗಿತ್ತು. ಆಗ ನಾವು ಒಟ್ಟು 15 ಜನ ಫ್ರೆಂಡ್ಸ್ ಗ್ಯಾಂಗ್ ಇದ್ದೇವೆ. ಜೊತೆಯಲ್ಲೇ ಪಾರ್ಟಿ ಮಾಡ್ತೇವೆ. ಪುರುಸೊತ್ತೇ ಇಲ್ಲದಂತೆ ಮಾತನಾಡುತ್ತೇವೆ. ಎಂಜಾಯ್ ಮಾಡುತ್ತೇವೆ. ಫ್ರೆಂಡ್ಸ್ಗಳ ಮಧ್ಯೆ ನಾವು ನಟರಲ್ಲ. ಎಲ್ಲರೂ ಒಂದೇ. ಸೋಷಿಯಲ್ ಮೀಡಿಯಾ ಬಗ್ಗೆ ಗೊತ್ತಿಲ್ಲ ಎಂದೇನೂ ಇಲ್ಲ. ಆದರೆ ಅವನ್ನು ನಾವು ಚರ್ಚೆ ಕೂಡಾ ಮಾಡಿಲ್ಲ ಎಂದಿದ್ದರು ರಶ್ಮಿಕಾ. ನಾವಿಬ್ಬರೂ ಫ್ರೆಂಡ್ಸ್ ಮಾತ್ರ ಎಂದಿದ್ದರು.



