ವೇದ ರಿಲೀಸ್ ಆಗಿದೆ. ಎಂದಿನಂತೆ ದೊಡ್ಮನೆಯ ಅಭಿಮಾನಿ ದೇವರುಗಳ ರಾಜಧಾನಿ ಬಳ್ಳಾರಿ-ಹೊಸಪೇಟೆಯಲ್ಲಿ ಬೆಳಗ್ಗೆ 3ಕ್ಕೇ ಶೋಗಳು ಶುರುವಾಗಿವೆ. 2ನೇ ರಾಜಧಾನಿ ಹುಬ್ಬಳ್ಳಿಯಲ್ಲಿ 5ಕ್ಕೆ, ಬೆಂಗಳೂರಿನಲ್ಲಿ ಬೆಳಗ್ಗೆ 5-6 ಗಂಟೆಗೆ ಶೋ ಶುರುವಾಗಿವೆ. ಚಿತ್ರದ ಆರಂಭದಲ್ಲಿಯೇ ಪುನೀತ್ ಮತ್ತು ಶಿವಣ್ಣ ಇಬ್ಬರೂ ಜೊತೆಯಾಗಿ ವೇದಿಕೆ ಹಂಚಿಕೊಂಡಿದ್ದ ದೃಶ್ಯ ಬರುತ್ತೆ. ನಂತರ ಶುರುವಾಗುವುದೇ ವೇದದ ಹಬ್ಬ. 

ಅಭಿಮಾನಿಗಳು ಚಿತ್ರವನ್ನು ನೋಡಿ ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶಿವಣ್ಣ ಫ್ಯಾನ್ಸ್‍ಗೆ ಹಬ್ಬ ಮಾಡಿಸ್ತಾರೆ. ಆದರೆ, ಚಿತ್ರದ ಸರ್‍ಪ್ರೈಸ್ ಗಾನವಿ, ಆದಿತಿ, ಶ್ವೇತಾ ಚೆಂಗಪ್ಪ, ಉಮಾಶ್ರೀ ಹಾಗೂ ವೀಣಾ ಪೊನ್ನಪ್ಪ. ಹರ್ಷ ಮೆಚ್ಯೂರ್ಡ್ ಕಂಟೆಂಟ್ ಸಿನಿಮಾ ಮಾಡಿದ್ದಾರೆ.
ಹೆಣ್ಣು ಮಕ್ಕಳ ಮೇಲೆ ಕೈ ಮಾಡೋದು ಗಂಡಸ್ತನ ಅಲ್ಲ.. ಹೆಣ್ಣು ನಿಂದನೆ ವಿರುದ್ಧ ಹೋರಾಡೋದು ಗಂಡಸ್ತನ ಅನ್ನೋ ಡೈಲಾಗ್ ವೈರಲ್ ಆಗ್ತಿದೆ.
ಆಕ್ಷನ್, ಜುಂಜಪ್ಪ, ಕಾಮಿಡಿ..ಎಲ್ಲದರಲ್ಲೂ ಶಿವಣ್ಣ ಬೆಸ್ಟ್. ಕ್ಲೈಮಾಕ್ಸ್ ಸಂದೇಶವಂತೂ ಅದ್ಭುತ.
ವೇದದಲ್ಲಿ ಹೀರೋ ಇಂಟ್ರೊಡಕ್ಷನ್‍ಗಿಂತ ಬೇರೆಯವರ ಪಾತ್ರಗಳ ಎಂಟ್ರಿ ಸಖತ್ತಾಗಿದೆ.
ವೇದ ಹೆದರೋದು ಇಲ್ಲ..ಕ್ಷಮಿಸೋದು ಇಲ್ಲ..

ಒಟ್ಟಾರೆ ಈ ಅಭಿಪ್ರಾಯಗಳೇ ಚಿತ್ರ ನೋಡಿದವರಿಂದ ಬಂದಿವೆ. ಚಿತ್ರದಲ್ಲಿ ಆದಿತಿ ಸಾಗರ್, ಗಾನವಿ ಲಕ್ಷ್ಮಣ್ , ಶ್ವೇತಾ ಚೆಂಗಪ್ಪ.. ಎಲ್ಲರೂ ಸರ್‍ಪ್ರೈಸುಗಳ ಮೂಟೆಯನ್ನೇ ಕೊಟ್ಟಿದ್ದಾರೆ. ಸಿನಿಮಾ ಮಾಡುವಾಗ ಸಣ್ಣ ಪುಟ್ಟ ಗಾಯಗಳಾದವು.. ಆದರೆ ಶಿವಣ್ಣ ಮಾಡಿಕೊಂಡ ಗಾಯ ನೋಡಿ ಹೇಳಿಕೊಳ್ಳೋಕೆ ನಾಚಿಕೆಯಾಗಿ ಸುಮ್ಮನಾಗಿದ್ದೆ ಎಂದಿದ್ದರು ಗಾನವಿ. ಶ್ವೇತಾ ಚೆಂಗಪ್ಪ ಅವರ ಬೆನ್ನು, ಕೂದಲು ಸುಟ್ಟು ಹೋಗಿತ್ತಂತೆ. ಅಂತಹ ಗಾಯಗಳಿಗೀಗ ಅಭಿಮಾನದ ಮೆಚ್ಚುಗೆಯ ಔಷಧ ಸಿಕ್ಕಿದೆ. ಆದಿತಿ ಸಾಗರ್ ಅಸಾಮಾನ್ಯ ಹುಡುಗಿಯ ಪಾತ್ರದಲ್ಲಿ ಪರಕಾಯ ಪ್ರವೇಶವನ್ನೇ ಮಾಡಿದ್ದಾರೆ. ವೇದ ಹಿಟ್ ಆಗುವ ಎಲ್ಲ ಸೂಚನೆಗಳೂ ಇವೆ.



