ಶಿವಣ್ಣ ಕಣ್ಣುಗಳಲ್ಲೇ ನಟಿಸೋದು ಕನ್ನಡಿಗರಿಗೆ ಗೊತ್ತು. ಕಣ್ಣಲ್ಲಿ ಬೆಂಕಿಯುಂಡೆಯನ್ನು ಕುಣಿಸುವ ಶಿವಣ್ಣ ವೇದದಲ್ಲಿಯೂ ಆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಒಂದು ಪುಟ್ಟ ಹೆಜ್ಜೆ.. ಬೆಂಕಿಯಂತಾ ನೋಟ.. ಸಖತ್ ಆಕ್ಷನ್.. ಮೂಲಕ ಹಾಗೆಯೇ ಆವರಿಸಿಕೊಳ್ಳುತ್ತಾರೆ. ಟ್ರೇಲರ್ ಆರಂಭದಲ್ಲಿ ಇದು ಮಾಮೂಲಿ ಸಿನಿಮಾ ಇರ್ಬೇಕ್ ಎನ್ನಿಸುವಷ್ಟ್ರಲ್ಲಿ ಸೀನ್ ಚೇಂಜ್. ಕೆಲವೇ ಕ್ಷಣಗಳಲ್ಲಿ ಬೆಂಕಿಯುಗುಳುವ ನಾಯಕಿಯರು.. ಅಬ್ಬಬ್ಬಾ.. ಹೆದರೋದು ಇಲ್ಲ.. ಕ್ಷಮಿಸೋದೂ ಇಲ್ಲ.. 

ಕತ್ತಲು ಬೆಳಕಿನ ಆಟದ ದೃಶ್ಯಗಳು. ಈ ಕಾಲದ್ದಂತೂ ಅಲ್ಲ. ಹೀರೋ ವಿಲನ್‍ಗಳನ್ನು ಚಚ್ಚಿ ಪುಡಿಗಟ್ಟುತ್ತಿದ್ದನ್ನು ನೋಡುತ್ತಿದ್ದವರಿಗೆ.. ಹೀರೋಯಿನ್‍ಗಳೂ ವ್ಹಾವ್ ಎನ್ನುವಂತೆ ಮಚ್ಚು ಬೀಸುತ್ತಾರೆ. ಹಾರಿ ಹಾರಿ ವಿಲನ್‍ಗಳ ಎದೆ ಬಗೆಯುತ್ತಾರೆ. ರಕ್ತ ಚೆಲುತ್ತಾರೆ. ಕಣ್ಣುಗಳಲ್ಲೇ ಕೆಂಡದ ಮಳೆ ಸುರಿಸುತ್ತಾರೆ.. ಶಿವಣ್ಣನ ಕಣ್ಣುಗಳಲ್ಲಿರೋ ಸುಡು ಸುಡು ಬೆಂಕಿಗೆ ಸವ್ವಾಸೇರು ಎನ್ನುವಂತೆ
ಗಾನವಿ ಲಕ್ಷ್ಮಣ್, ಉಮಾಶ್ರೀ, ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ.. ಎಲ್ಲರೂ ವಂಡರ್‍ಗಳೇ. ರವಿವರ್ಮ, ವಿಕ್ರಂಮೋರ್, ಚೇತನ್ ಡಿಸೋಜಾ, ಅರ್ಜುನ್ ರಾಜ್ ಸ್ಟಂಟುಗಳು ಟ್ರೇಲರಿನಲ್ಲೇ ಉಸಿರುಗಟ್ಟಿ ನೋಡುವಂತಿವೆ.

ಯಾಕೆ.. ಏನು.. ಅನ್ನೋ ಸಣ್ಣದೊಂದು ಸುಳಿವು ಕೊಟ್ಟು ಕುತೂಹಲದ ಮೂಟೆಯನ್ನು ದೊಡ್ಡದು ಮಾಡೋಕೆ ಬಿಡುತ್ತಾರೆ ಹರ್ಷ. ವೇದ ಟ್ರೇಲರ್‍ನಲ್ಲಿ ಕಾಣಿಸುವ ಅತಿ ದೊಡ್ಡ ಶಕ್ತಿಯೇ ಅದು. ಎಲ್ಲವನ್ನೂ ತೋರಿಸಿದಂತೆ ಮಾಡಿ.. ಏನನ್ನೂ ತೋರಿಸದೆ ಕುತೂಹಲ ಹುಟ್ಟಿಸುವ ಪರಿ. ಹೆಜ್ಜೆ ಹೆಜ್ಜೆಗೂ ವ್ಹಾವ್ ಎನ್ನಿಸುವುದು ಅರ್ಜುನ್ ಜನ್ಯ ಮ್ಯೂಸಿಕ್ಕು.
ಗೀತಾ ಶಿವರಾಜ್‍ಕುಮಾರ್ ನಿರ್ಮಾಣದ ಮೊದಲ ಚಿತ್ರ ವೇದ. ಶಿವಣ್ಣ ಕೆರಿಯರ್‍ನ 125ನೇ ಸಿನಿಮಾ ವೇದ. ಕ್ವಾಲಿಟಿಯಲ್ಲಿ ಎಲ್ಲಿಯೂ ಕಾಂಪ್ರೊಮೈಸ್ ಇಲ್ಲದೆ ಮೂಡಿ ಬಂದಿರುವ ವೇದ ಡಿ.23ಕ್ಕೆ ರಿಲೀಸ್.



