ಯುವ ರಾಜ್ ಕುಮಾರ್. ಎಂಟ್ರಿಯೇನೋ ಫಿಕ್ಸ್ ಆಗಿತ್ತು. ಕನ್ನಡದಲ್ಲಿ ಅಣ್ಣಾವ್ರ ಕುಟುಂಬದ ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದರೆ ಅದು ಸೃಷ್ಟಿಸುವ ಸಂಚಲನವೇ ಬೇರೆ. ಡಾ.ರಾಜ್ ನಂತರ ಶಿವಣ್ಣ, ಪುನೀತ್, ರಾಘವೇಂದ್ರ ರಾಜ್ ಕುಮಾರ್ ಕ್ರೇಜ್ ಸೃಷ್ಟಿಸಿದ್ದರು. ಶಿವಣ್ಣ ಕ್ರೇಜ್ ಇನ್ನೂ ಹಾಗೆಯೇ ಇದೆ. ರಾಘಣ್ಣ ಕ್ರೇಜ್ ಹೋಗಿದೆ. ಪುನೀತ್ ಅವರು ಈಗ ಜೊತೆಯಲ್ಲಿ ಇಲ್ಲ. ವಿನಯ್ ರಾಜಕುಮಾರ್ ಬಂದರಾದರೂ ದೊಡ್ಡಮಟ್ಟದ ಸಕ್ಸಸ್ ಸಿಕ್ಕಿಲ್ಲ. ರಾಮ್ ಕುಮಾರ್ ಮಕ್ಕಳಿಬ್ಬರೂ ತೆರೆಗೆ ಬಂದರೂ ಅವರಿಗೂ ಬಿಗ್ ಸಕ್ಸಸ್ ದೂರವೇ ಇದೆ. ಹೀಗಾಗಿಯೇ ಯುವ ರಾಜ ಕುಮಾರ್ ಮೇಲೆ ನಿರೀಕ್ಷೆ ಹೆಚ್ಚಿತ್ತು.
ದೊಡ್ಮನೆಯ ಚಿಕ್ಕ ಹುಡುಗ.. ಪುನೀತ್ ನಿಧನದ ನಂತರ ಅಭಿಮಾನಿಗಳು ಯುವ ರಾಜ್ ಕುಮಾರ್ ಅವರಲ್ಲೇ ಅಪ್ಪು ಅವರನ್ನು ನೋಡುತ್ತಿದ್ದಾರೆ. ಯುವ ರಾಜ ಕುಮಾರ್ ಅವರು ಇದೀಗ ಲಾಂಚ್ ಆಗುತ್ತಿದ್ದು ಘೋಷಿಸಿದ್ದಂತೆಯೇ ಹೊಂಬಾಳೆಯವರೇ ಚಿತ್ರದ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಯುವ ಚಿತ್ರಕ್ಕೆ ಡೈರೆಕ್ಟರ್ ಆಗಿರುವುದು ಸೋಲನ್ನೇ ಕಾಣದ ನಿರ್ದೇಶಕ ಸಂತೋಷ್ ಆನಂದರಾಮ್.
ಇಂದು ಅಂದರೆ ಮಾರ್ಚ್ 3ನೇ ತಾರೀಕು ಸಂಜೆ 6.55ಕ್ಕೆ ಸರಿಯಾಗಿ ಚಿತ್ರದ ಟೈಟಲ್ ಘೋಷಣೆಯಾಗಲಿದೆ. ಕೋಣೆಯೊಂದರಲ್ಲಿ ಬೈಕ್ ನಿಲ್ಲಿಸಿರುವ ಹಾಗೂ ಗೋಡೆ ಮೇಲೆ ಬೈಕ್ ರೈಡಿಂಗ್ ಜಾಕೆಟ್ ಒಂದನ್ನು ನೇತಾಕಿರುವ ಫೋಟೊ ಬ್ಯಾಕ್ಗ್ರೌಂಡ್ ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಈ ಪೋಸ್ಟರ್ನ ತಲೆ ಭಾಗದಲ್ಲಿ ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ ಎಂದು ಬರೆದಿದೆ.


ಶಿವಣ್ಣ ಆನಂದ್ ಚಿತ್ರದಲ್ಲಿ, ಪುನೀತ್ ಅಪ್ಪು ಚಿತ್ರದಲ್ಲಿ, ವಿನಯ್ ಸಿದ್ಧಾರ್ಥ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿಯೇ ತೆರೆಗೆ ಬಂದವರು. ರಾಘವೇಂದ್ರ ರಾಜಕುಮಾರ್ ಒಬ್ಬರೇ ಡಿಫರೆಂಟ್. ಈಗ ಯುವರಾಜ್ ಕುಮಾರ್ ಹೀರೋ ಆಗಿ ತೆರೆಯ ಮೇಲೆ ಪ್ರತ್ಯಕ್ಷರಾಗುತ್ತಿರುವುದು ಕಾಲೇಜ್ ಸ್ಟೂಡೆಂಟ್ ಪಾತ್ರದಲ್ಲೇನಾ..? ಸಂಜೆ 7ರವರೆಗೆ ಕಾದಿರಿ.



