ಆ ದಿನಗಳು ಖ್ಯಾತಿಯ ಚೇತನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮತ್ತೊಮ್ಮೆ ಹಿಂದೂಗಳ ಭಾವನೆಯ ಬಗ್ಗೆಯೇ ಮಾತನಾಡಿದ್ದಾರೆ. ಇದೀಗ ಕಾಂತಾರ ಇಡೀ ದೇಶಾದ್ಯಂತ ಸದ್ದು ಮಾಡುತ್ತಿರುವುದು ಹಾಗೂ ಜನ ಮೆಚ್ಚುಗೆ ಗಳಿಸಿರುವುದು ಗೊತ್ತಿದೆಯಷ್ಟೆ. ಆ ಚಿತ್ರದ ಬಗ್ಗೆ ಯಾರು ಮಾತನಾಡಿದರೂ ಈಗ ಸುದ್ದಿ. ಪಾಸಿಟಿವ್ ಆಗಲೀ.. ನೆಗೆಟಿವ್ ಆಗಲೀ.. ಎಲ್ಲವೂ ಸುದ್ದಿಯಾಗುತ್ತಿದೆ. ನಟ ಚೇತನ್ ಕೂಡಾ ಅದಕ್ಕೆ ಹೊರತಲ್ಲ. ಕೆಲವರು ಚಿತ್ರದಲ್ಲಿ ತಮಗೆ ಕಂಡ ವೈದಿಕ ಆಚರಣೆ, ಬ್ರಾಹ್ಮಣ್ಯ, ಹಿಂದುತ್ವದ ಹೇರಿಕೆ ಬಗ್ಗೆ ಮಾತನಾಡಿದ್ದಾರೆ. ನಟ ಚೇತನ್ ಕೂಡಾ ಹಾಗೆಯೇ ಮತ್ತೊಮ್ಮೆ ವಿವಾದ ಕೆಣಕಿದ್ದಾರೆ.
ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ.
ಈ ಮಾತು ಹೇಳಿರುವುದು ಆ ದಿನಗಳು ಖ್ಯಾತಿಯ.ತಮ್ಮ ಫೇಸ್‍ಬುಕ್‍ನಲ್ಲಿ ಈ ರೀತಿ ಬರೆದುಕೊಂಡಿರುವ ಚೇತನ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಒಂದೆಡೆ ರಿಷಬ್ ನಟನೆ ಹಾಗೂ ನಿರ್ದೇಶನದ ಕಾಂತಾರ ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆಯುತ್ತಿದೆ. 150 ಕೋಟಿ ಸಮೀಪದಲ್ಲಿದೆ. ರಿಷಬ್ ಶೆಟ್ಟಿಗೆ ಅಭಿಮಾನಿಗಳು ಡಿವೈನ್ ಸ್ಟಾರ್ ಎಂದೆಲ್ಲ ಕರೆಯುತ್ತಿದ್ದಾರೆ. ರಿಷಬ್ ಶೆಟ್ಟಿಯವರಿಗೆ ಅಭಿಮಾನಿಗಳು ಕಾಲಿಗೆ ನಮಸ್ಕರಿಸುತ್ತಿರುವ ಪ್ರಸಂಗಗಳೂ ನಡೆದಿವೆ. ಇದು ಕನ್ನಡ, ಕರಾವಳಿ ಹಾಗೂ ನಮ್ಮ ನೆಲದ ಸಂಸ್ಕøತಿ ಎತ್ತಿ ಹಿಡಿಯುವ ಸಿನಿಮಾ ಎನ್ನುತ್ತಿರುವಾಗಲೇ ಆ ದಿನಗಳು ಚೇತನ್ ಭೂತಕೋಲ ಹಿಂದೂಗಳ ಸಂಸ್ಕøತಿಯದ್ದಲ್ಲ. ವೈದಿಕ-ಬ್ರಾಹ್ಮಣ್ಯಕ್ಕಿಂತ ಹಿಂದಿನ ಮೂಲ ನಿವಾಸಿ ಸಂಸ್ಕøತಿ ಎಂದಿದ್ದಾರೆ.
ಅಂದಹಾಗೆ ಚೇತನ್ ಕಾಂತಾರ ಚಿತ್ರವನ್ನು ನೋಡಿದ್ದಾರಾ..? ಇಲ್ಲವಾ..? ಅನ್ನೋದು ಕನ್‍ಫರ್ಮ್ ಆಗಿಲ್ಲ. ಚೆತ್ರವನ್ನು ನೋಡಿ ಆ ಮಾತು ಹೇಳಿದ್ದರೆ ನೋಡಿ ಬಂದ ಪ್ರೇಕ್ಷಕನ ಅಭಿಪ್ರಾಯ ಎಂದು ಹೇಳಬಹುದಿತ್ತು. ಆಗ ಆತ ನೆಗೆಟಿವ್ ಹೇಳಿದ್ದರೂ ಅದು ಆತನ ವೈಯಕ್ತಿಕ ಅಭಿಪ್ರಾಯ ಎಂದು ಗೌರವಿಸಬಹುದಿತ್ತು. ಆದರೆ ಸಿನಿಮಾ ನೋಡದೆ ಅವರಿವರು ಹೇಳಿದ್ದನ್ನೇ ಕೇಳಿಕೊಂದು ಚಿತ್ರದ ವಿಮರ್ಶೆ ಮಾಡುವುದೇಕೆ?




