ಅಭಿಷೇಕ್ ಅಂಬರೀಷ್ ಮದುವೆ ಫಿಕ್ಸ್ ಆಗಿದೆ. ಅಂಬರೀಷ್ ಮತ್ತು ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಅಂಬರೀಷ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಅಭಿಷೇಕ್ ಅವರಿಗೆ ಈಗ 29 ವರ್ಷ ವಯಸ್ಸು. ಮದುವೆ ಫಿಕ್ಸ್ ಆಗಿದೆ. ಡಿಸೆಂಬರ್ 11ನೇ ತಾರೀಕು ಎಂಗೇಜ್ಮೆಂಟ್ ಫಿಕ್ಸ್ ಆಗಿದೆ. ಈ ಮೂಲಕ ಚಿತ್ರರಂಗ ಮತ್ತೊಂದು ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಡಿಸೆಂಬರ್ 11ರಂದು ಅಭಿಷೇಕ್ ಅಂಬರೀಷ್ ಎಂಗೇಜ್ಮೆಂಟ್ ಫಿಕ್ಸ್ ಆಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರಂಭ ನಡೆಯಲಿದ್ದು, ಎರಡೂ ಕುಟುಂಬದವರು ಸಂಭ್ರಮದಿಂದ ಓಡಾಡುತ್ತಿದ್ದಾರೆ.
ಇದೊಂದು ಅರೇಂಜ್ ಮ್ಯಾರೇಜ್ ಎನ್ನಲಾಗುತ್ತಿದೆ. ಆದರೆ ಇದು ಲವ್ ಕಂ ಅರೇಂಜ್ ಮ್ಯಾರೆಜ್. ಅಭಿಷೇಕ್ ಮತ್ತು ಮದುವೆಯಾಗುತ್ತಿರುವ ಯುವತಿ ಸುಮಾರು 4 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಸುಮಲತಾ ಅವರಿಗೂ ವಿಷಯ ಗೊತ್ತಾಗಿತ್ತು. ಅಂಬರೀಷ್ ಅವರಿಗೂ ಮಗನ ಲವ್ ಸ್ಟೋರಿಯ ಮಾಹಿತಿ ಇತ್ತು ಎನ್ನಲಾಗಿದೆ. ಎರಡೂ ಕುಟುಂಬದವರು ಪರಸ್ಪರ ಒಪ್ಪಿಗೆ ನೀಡಿದ್ದಾರಂತೆ.
ಧನುರ್ಮಾಸ ಶುರುವಾಗುವ ಹಿನ್ನೆಲೆಯಲ್ಲಿ ಅಮಾವಾಸ್ಯೆಗೂ ಮುನ್ನವೇ ನಿಶ್ಚಿತಾರ್ಥ ನಡೆಯಲಿದೆ. ಡಿಸೆಂಬರ್ 11ರಂದು ನಿಶ್ಚಿತಾರ್ಥ. ಹುಡುಗಿಯ ಹೆಸರು ಎ ಅಕ್ಷರಿಂದ ಶುರುವಾಗುತ್ತದಂತೆ. ಅಭಿಷೇಕ್ ಮದುವೆಯಾಗುತ್ತಿರುವ ಚಿತ್ರರಂಗದವರಂತೂ ಅಲ್ಲ.ಸುಮಲತಾ ಅವರು ಸಂಭ್ರಮದಿಂದ ಓಡಾಡುತ್ತಿದ್ದಾರೆ. ಎಂದಿನಂತೆ ಸುಮಲತಾ ಕುಟುಂಬದ ಆಪ್ತರಾಗಿರುವ ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಮೊದಲಾದವರು ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ.



