ವಿಕ್ರಾಂತ್ ರೋಣ.. ಈ ವರ್ಷದ ಸೂಪರ್ ಹಿಟ್ ಸಾಂಗ್ ರಾರಾ ರಕ್ಕಮ್ಮ.. ಜೋಶ್ ಇನ್ನೂ ಆರಿಲ್ಲ. ಈ ವರ್ಷ 100 ಕೋಟಿ ಕ್ಲಬ್ ಸೇರಿದ ಚಿತ್ರಗಳಲ್ಲೊಂದು ವಿಕ್ರಾಂತ್ ರೋಣ. ವಿಕ್ರಾಂತ್ ರೋಣ ಸೂಪರ್ ಹಿಟ್ ಆದ ನಂತರ ಕಿಚ್ಚ ಸುದೀಪ್ ಮುಂದೇನು ಎಂ

ರಜನಿಕಾಂತ್, ಕಮಲ್ ಹಾಸನ್, ಅಜಿತ್, ವಿಜಯ್, ಅಕ್ಷಯ್ ಕುಮಾರ್, ಐಶ್ವರ್ಯಾ ರೈ.. ಮೊದಲಾದವರಿಗೆ ಸಿನಿಮಾ ಮಾಡಿದ್ದ ಲೈಕಾ ಸಂಸ್ಥೆ ಜೊತೆ ಸುದೀಪ್ ಸಿನಿಮಾ ಒಪ್ಪಿಕೊಂಡಿದ್ದಾರಂತೆ. 2.0, ಪೊನ್ನಿಯನ್ ಸೆಲ್ವನ್ (ಪಿಎಸ್), ಇಂಡಿಯನ್ 2, ದರ್ಬಾರ್, ರಾಮ್ ಸೇತು, ಕತ್ತಿ, ಖೈದಿ 150, ಕೊಲಮಾವು ಕೋಕಿಲ.. ಹೀಗೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಲೈಕಾ ಸಂಸ್ಥೆ ಹೊಸ ಪ್ರಾಜೆಕ್ಟ್‍ಗಾಗಿ ಸುದೀಪ್ ಅವರನ್ನು ಕಾಂಟ್ಯಾಕ್ಟ್ ಮಾಡಿದೆ. ಕಥೆಯನ್ನು ಸುದೀಪ್ ಓಕೆ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.
ಇತ್ತೀಚೆಗೆ ಸುದೀಪ್ ಅವರ ಶಾಂತಿನಿವಾಸಕ್ಕೆ (ಸುದೀಪ್ ಅವರ ಮನೆಯ ಹೆಸರು) ಲೈಕಾದವರು ಭೇಟಿ ನೀಡಿದ್ದರಂತೆ. ಎಲ್ಲವೂ ಓಕೆ ಆಗಿದ್ದು ಜನವರಿಯಲ್ಲಿ ಸುದೀಪ್ ಅವರ 46ನೇ ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿ ಇದೆ.

ಇತ್ತ ಸುದೀಪ್ ಬಿಗ್ ಬಾಸ್ ನಿರೂಪಣೆ, ಫ್ಯಾಮಿಲಿ ಜೊತೆ ಪ್ರವಾಸ ಮತ್ತು ತೀರ್ಥಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ. ಮಂತ್ರಾಲಯ, ಕಟೀಲು.. ಮೊದಲಾದ ಪುಣ್ಯ ಕ್ಷೇತ್ರಗಳು, ಮಗಳೊಂದಿಗೆ ಪ್ರವಾಸಿ ತಾಣಗಳಿಗೆ, ವಿದೇಶಗಳಿಗೆ, ವಿಶ್ವಕಪ್ ಕ್ರಿಕೆಟ್ ನೊಡೋಕೆ.. ಹೀಗೆ ರೌಂಡ್ ಹೊಡೆಯುತ್ತಿದ್ದಾರೆ. ಇದರ ನಡುವೆ ಕಥೆ ಓಕೆ ಆಗಿದ್ದು, ಲೈಕಾ ಸಂಸ್ಥೆ ಜೊತೆಗೆ ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿದೆ. ಡೈರೆಕ್ಟರ್, ಸಿನಿಮಾ ಟೀಂ ಸೇರಿದಂತೆ ಎಲ್ಲವೂ ಶೀಘ್ರದಲ್ಲೇ ಫೈನಲ್ ಆಗಲಿದೆ.



