ಕಾಂತಾರ ನೋಡಿದವರಿಗೆಲ್ಲ ನಾವು ನೋಡುತ್ತಿರುವುದು ದಂತಕಥೆಯೇನೋ ಎಂಬ ಅನುಭವವಾಗುತ್ತಿದೆ. ಪ್ರೇಕ್ಷಕರ ಮಾತು ಬಿಡಿ.. ಮುಲಾಜೇ ಇಲ್ಲದೆ ಅದ್ಭುತ ಸಿನಿಮಾ ಎಂದು ಒಪ್ಪಿಕೊಂಡಿದ್ದಾರೆ. ಬೇರೆ ಭಾಷೆಯ ಚಿತ್ರರಂಗದವರು, ರಾಜಕಾರಣಿಗಳು, ಉದ್ಯಮಿಗಳೂ ಕೂಡಾ ಚಿತ್ರವನ್ನು ಅಮೋಘ ಅದ್ಭುತ ಎಂದಿರುವುದು ವಿಶೇಷ. ಇವರೆಲ್ಲರೂ ಥಿಯೇಟರಿಗೆ ಹೋಗಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಂಸದರು, ಶಾಸಕರು ಕೂಡಾ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಅವರೆಲ್ಲರ ಅಭಿಪ್ರಾಯ ಹೇಗಿತ್ತು?
ಮೋಹನ್ ದಾಸ್ ಪೈ : ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರು. ಉದ್ಯಮಿ
ಇದು ಕನ್ನಡಿಗರ ವಿಜಯೋತ್ಸವ. ನಮ್ಮ ಸಂಸ್ಕøತಿಯನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸುತ್ತಿರುವ ಸಿನಿಮಾ.
Rishab Shetty’s `Kantara` becomes IMDb`s highest rated Indian film -A great event for Kannadigas, showcasing our flourishing creative culture @BSBommai @CMofKarnataka @drashwathcn @blsanthosh @iamanilshetty https://t.co/6L5Ol1ovJ2
— Mohandas Pai (@TVMohandasPai) October 16, 2022
ಪ್ರಶಾಂತ್ ನೀಲ್ : ಕೆಜಿಎಫ್ ನಿರ್ದೇಶಕ
ನಮ್ಮ ಆಲ್‍ಟೈಂ ಫೇವರಿಟ್ ಸಿನಿಮಾಗಳ ಪಟ್ಟಿಗೆ ಹೊಸ ಸೇರ್ಪಡೆ ಕಾಂತಾರ.
ಕಾರ್ತಿಕ್ ಸುಬ್ರಮಣಿಯನ್ : ತಮಿಳು ನಿರ್ದೇಶಕ
ಎಲ್ಲರೂ ಹೊಗಳಿದ್ದ ಹಿನ್ನೆಲೆಯಲ್ಲಿ ನಿರೀಕ್ಷೆಯೂ ಹೈಲೆವೆಲ್ಲಿನಲ್ಲಿತ್ತು. ನನ್ನ ನಿರೀಕ್ಷೆಯನ್ನೂ ಮೀರಿ ಸಿನಿಮಾ ಅದ್ಭುತ ಅನುಭವ ಕೊಟ್ಟಿತು. ಒಟಿಟಿಗೆ ಬರುವವರೆಗೆ ಕಾಯಬೇಡಿ. ಥಿಯೇಟರಿಗೆ ಹೋಗಿ ಈಗಲೇ ಸಿನಿಮಾ ನೋಡಿ.
ಕಾರ್ತಿ : ತಮಿಳು ನಟ
ಸಿನಿಮಾ ನೋಡುವಾಗ ರೋಮಾಂಚನದ ಅನುಭವವಾಯಿತು. ಮೈ ನಡುಕವಾಯಿತು. ಅದ್ಭುತ ಸಿನಿಮಾ.
ಅನೂಪ್ ಸಿಂಗ್ ಠಾಕೂರ್ : ನಟ, ಮಿಸ್ಟರ್ ಇಂಡಿಯಾ ಪ್ರಶಸ್ತಿ ವಿಜೇತ
ಸಿನಿಮಾ ನೋಡಿದೆ ರಿಷಬ್ ಅವರೇ. ಈಗ ನಾನು ಅಪ್ಪ-ಅಮ್ಮನನ್ನೂ ಕರೆದುಕೊಂಡು 2ನೇ ಸಲ ನೋಡೋಕೆ ಹೋಗ್ತೀನಿ.
ಅನುಷ್ಕಾ ಶೆಟ್ಟಿ : ಕನ್ನಡತಿ. ತೆಲುಗು ನಟಿ
ಒಂದು ಅದ್ಬುತ ಅನುಭವ ನೀಡಿದ ಕಾಂತಾರ ಚಿತ್ರತಂಡಕ್ಕೆ ಅಭಿನಂದನೆಗಳು
Watched #kantara ..totally totally loved it❤️Congratulations to whole team…u all we’re amazing😊thanks for all the experience @shetty_rishab @VKiragandur @hombalefilms @HombaleGroup @gowda_sapthami @AJANEESHB @actorkishore @KantaraFilm #KantaraInCinemasNow ..don’t miss it😊😊🧿 pic.twitter.com/RU68jiTnhY
— Anushka Shetty (@MsAnushkaShetty) October 16, 2022
ತರಣ್ ಆದರ್ಶ್ : ಪತ್ರಕರ್ತ
ಬ್ರಿಲಿಯಂಟ್ ಮೂವಿ.
ರಮೇಶ್ ಬಾಲ : ಪತ್ರಕರ್ತ
ಕಂಗ್ರಾಜುಲೇಷನ್ಸ್. ರಿಷಬ್ ಶೆಟ್ಟಿಯವರಿಗೆ ತಮ್ಮ ಹಾದಿ ಮತ್ತು ಗುರಿಯ ಬಗ್ಗೆ ಸ್ಪಷ್ಟತೆಯಿದೆ.
ಪ್ರಭಾಸ್ : ತೆಲುಗು ಸ್ಟಾರ್ ನಟ
ಕನ್ನಡದಲ್ಲಿ ಒಮ್ಮೆ ನೋಡಿ ಎರಡನೇ ಬಾರಿ ತೆಲುಗಿನಲ್ಲಿ ನೋಡಿ ಮೆಚ್ಚಿಕೊಂಡ ನಟ
ಧನುಷ್ : ತಮಿಳು ಸ್ಟಾರ್ ನಟ
ಮೈಂಡ್ ಬ್ಲೋಯಿಂಗ್. ರಿಷಬ್ ಶೆಟ್ಟಿ ಹೆಮ್ಮೆ ಪಡಬಹುದಾದ ಚಿತ್ರ.
ಪ್ರತಾಪ್ ಸಿಂಹ : ಮೈಸೂರು ಲೋಕಸಭಾ ಸಂಸದ
ತಡವಾಗಿ ಸಿನಿಮಾ ನೋಡಿದೆ. ಆದರೆ ನೀವು ತಡಮಾಡಬೇಡಿ.
ಪ್ರಜ್ವಲ್ ರೇವಣ್ಣ : ಹಾಸನ ಲೋಕಸಭಾ ಕ್ಷೇತ್ರದ ಸಂಸದ
ಸಿನಿಮಾ ನೋಡಿದೆ. ಚಿತ್ರತಂಡವನ್ನು ಹೊಗಳಲು ಪದಗಳೇ ಸಾಲುತ್ತಿಲ್ಲ
ಹೀಗೆ ಚಿತ್ರನೋಡಿದವರೆಲ್ಲ ಮೆಚ್ಚಿದ್ದಾರೆ. ಸಿನಿಮಾ ದಿನದಿನಕ್ಕೂ ಹೊಸ ಇತಿಹಾಸ ಬರೆಯುತ್ತಿದೆ. ತೆಲುಗಿನಲ್ಲಿ ಮೊದಲ ದಿನವೇ 5 ಕೋಟಿ ಕಲೆಕ್ಷನ್ ಮಾಡಿದ್ದರೆ ಹಿಂದಿಯಲ್ಲಿ ಮೊದಲ ದಿನ ಒಂದೂವರೆ ಕೋಟಿಯಿದ್ದ ಕಲೆಕ್ಷನ್ 2ನೇ ದಿನಕ್ಕೆ 6 ಕೋಇಟ ದಾಟಿದೆ. 3ನೇ ದಿನ ಇನ್ನೂ ತ್ರಿಬಲ್ ಆಗುವ ನಿರೀಕ್ಷೆ ಇದೆ. ತಮಿಳಿನ ಲೆಕ್ಕ ಇನ್ನೂ ಸಿಕ್ಕಿಲ್ಲ. ಕನ್ನಡದಲ್ಲಿ ಸತತ 3ನೇ ವಾರವೂ ಹೌಸ್‍ಫುಲ್ ಶೋ ಪ್ರದರ್ಶನ ಕಾಣುತ್ತಿದೆ. ಒಂದೇ ಒಂದು ಥಿಯೇಟರ್ ಸಂಖ್ಯೆ ಕಡಿಮೆಯಾಗಿಲ್ಲ.



