ಶ್ರೀಮುರಳಿ ಅಜ್ಞಾತವಾಸ ಮುಗಿಸಿ ಬರುತ್ತಿದ್ದಾರೆ. ಹಲವು ವರ್ಷಗಳಿಂದ ಇನ್ನೇನು ರಿಲೀಸ್.. ಈಗ ರಿಲೀಸ್.. ಈ ತಿಂಗಳು ರಿಲೀಸ್ ಎಂಬ ಹಂತಕ್ಕೆ ಬಂದು ತಡವಾಗುತ್ತಿದ್ದ ಬಘೀರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಅಕ್ಟೋಬರ್ ೩೧ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಹಾಡು ರಿಲೀಸ್ ಆಗಿದೆ. ಶ್ರೀಮುರಳಿ ಅವರ ಚಿತ್ರವನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಿ ೨೦೧೨ರ ಡಿಸೆಂಬರಿನಲ್ಲಿ, ಮದಗಜ ಚಿತ್ರದಲ್ಲಿ. ಮದಗಜ, ಅಷ್ಟೇನೂ ಸಕ್ಸಸ್ ಕಾಣಲಿಲ್ಲ. ಇದೀಗ ೨೦೨೪ರ ಅಂತ್ಯಕ್ಕೆ ಶ್ರೀಮುರಳಿ ಬಘೀರನ ಅವತಾರದಲ್ಲಿ ತೆರೆಗೆ ಬರುತ್ತಿದ್ದಾರೆ. ಏಕೆಂದರೆ ಈ ಚಿತ್ರಕ್ಕೆ ಹೊಂಬಾಳೆಯವರ ನಿರ್ಮಾಣ ಇದೆ. ಹೀಗಾಗಿ ನಿರೀಕ್ಷೆಯೂ ಹೆಚ್ಚಿದೆ.
ರುಧಿರ ಧಾರಾ… ಉಘೇ ಉಘೇ ….
ಮಾರ ಮಾರ ಕದನ ಕ್ರೂರ …
ಉಘೇ ಉಘೇ..…. ಬಘೀರ ಬಘೀರ..
ಎಂದು ಶುರುವಾಗುವ ಗೀತೆಯಲ್ಲಿ ಒಂದು ಕಥೆಯನ್ನೂ ತೋರಿಸುವ ಪ್ರಯತ್ನ ಇದೆ.
ಸತ್ಯಮೇವ ಜಯತೆ ರುಧಿರ ಧಾರಾ… ಉಘೇ ಉಘೇ ….
ಮಾರ ಮಾರ ಕದನ ಕ್ರೂರ … ಉಘೇ ಉಘೇ ….
ಬಘೀರ ಬಘೀರ..
ಹಾಡಿನಲ್ಲಿ ಒಂದು ಸಾಹಸಮಯ ಕ್ಯಾರಿಕೇಚರ್ ಬಳಸಿಕೊಳ್ಳಲಾಗಿದೆ. ಪುಟ್ಟ ಮಕ್ಕಳನ್ನು ದುಷ್ಟರಿಂದ ರಕ್ಷಿಸುವ ಪ್ರಯತ್ನದಲ್ಲಿ ಶ್ರೀಮುರಳಿ ಹೋರಾಡುವ ಸನ್ನಿವೇಶದಲ್ಲಿ ಬರುವ ಹಾಡಿರಬೇಕು.
ಬಘೀರ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಅನಿರುದ್ಧ ಶಾಸ್ತ್ರಿ ಹಾಡಿರುವ ಹಾಡಿಗೆ, ಸ್ವತಃ ಅವರೇ ಸಾಹಿತ್ಯ ರಚಿಸಿರುವುದು ವಿಶೇಷ. ಚಿತ್ರಕ್ಕೆ ಕಥೆ ನೀಡಿರುವುದು ಪ್ರಶಾಂತ್ ನೀಲ್ ಅವರಾದರೆ, ನಿರ್ದೇಶನ ಡಾ.ಸೂರಿ ಅವರದ್ದು.
ಬಘೀರ ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್ ಪಾತ್ರ ಮಾಡಿದ್ದಾರೆ. ದುಷ್ಟರನ್ನ ಸಂಹಾರ ಮಾಡೋಕೆ ಸೂಪರ್ ಮ್ಯಾನ್ ಬಘೀರನಾಗಿಯೂ ಕಾಣಿಸಿಕೊಡಿದ್ದಾರೆ. ಕಪ್ಪು ಚಿರತೆ ಮಾಸ್ಕ್ ಧಾರಿಯಾಗಿ ಬಘೀರ ಸೂಪರ್ ಮ್ಯಾನ್ ಅವತಾರ ಕುತೂಹಲ ಹುಟ್ಟಿಸಿರುವುದು ನಿಜ. ಬಘೀರ ಚಿತ್ರದಲ್ಲಿ ಶ್ರೀಮುರಳಿ ಎದುರು ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಸೇರಿದಂತೆ ಇನ್ನು ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಆದರೆ ಚಿತ್ರದ ಬಿಡುಗಡೆಗೆ ಬಾಕಿ ಇರುವುದು ಇನ್ನು ಕೇವಲ ೨ ವಾರ. ಇಷ್ಟು ಹೊತ್ತಿಗೆ ಆರ್ಭಟ ಜೋರಾಗಿ ಇರಬೇಕಿತ್ತು. ಆದರೆ ಹಾಗಾಗಿಲ್ಲ. ಚಿತ್ರದ ಹವಾ ಎದ್ದಿಲ್ಲ. ಈಗ ರಿಲೀಸ್ ಆಗಿರೋ ಹಾಡಿನಿಂದಲಾದರೂ ಬಘೀರ, ಭರ್ಜರಿಯಾಗಿ ಘರ್ಜಿಸುತ್ತಾನಾ.. ಅಭಿಮಾನಿಗಳು ವೇಯ್ಟಿಂಗ್
ಇನ್ನು ಚಿತ್ರದ ಈ ಹಾಡಿನ ಕಂಪ್ಲೀಟ್ ಸಾಹಿತ್ಯ ಹೀಗಿದೆ.
ರುಧಿರ ಧಾರಾ…
ಉಘೇ ಉಘೇ ….
ಮಾರ ಮಾರ ಕದನ ಕ್ರೂರ …
ಉಘೇ ಉಘೇ..….
ಬಘೀರ ಬಘೀರ ಧ್ವಂಸ ಅಖಾಡ
ಛಿದ್ರ ಮಾಡೋ ಅಟ್ಟಹಾಸ ಕೇಳು ಭೀಕರಾ…
ಕಂಸ ಕಠೋರ ರಕ್ತ ಹೀರೋ ರುದ್ರ ರಕ್ಕಸ ಕಾಲ ಕಿಂಕರ…
ಟ್ರೂಥ್ ಹಾನರ್ ಜಸ್ಟೀಸ್
ಸತ್ಯಮೇವ ಜಯತೆ
ರುಧಿರ ಧಾರಾ… ಉಘೇ ಉಘೇ ….
ಮಾರ ಮಾರ ಕದನ ಕ್ರೂರ … ಉಘೇ ಉಘೇ ….
ಪ್ರಳಯಾಂತಕ ಗಂಗೆಯ ತಡೆದಿಟ್ಟ ಜಟಾಧರ
ಸ್ಫೋಟಗೊಳುವ ಸಹನೆ ಇರುವ ಜ್ವಲ ದುರಂಧರ
ಭಯವಿಟ್ರೆ ಭಯಂಕರ ಭಸ್ಮ ಮಾಡೋ ಶಂಕರ
ರಾಮ ಗುಣಗಳಿರುವ ಇವನೇ ರಾವಣಾಸುರ
ರೋರಿಂಗ್ ರಿವೋಲ್ಟಿಂಗ್ & ರೂಲಿಂಗ್ ಹಿ ಈಸ್ ಒಟ್ಟಾ ಬಿ ದಿ ಸೈತಾನ್ ಇನ್ ದಿ ವರ್ಲ್ಡ್ ಆಫ್ ಡೆಮನ್ಸ್ ಅಂಡ್ ಡೆವಿಲ್ಸ್ ಅಮೇಜಿಂಗ್ ಬ್ಲೇಜಿಂಗ್ ಸೀಝಿಂಗ್ ಆರ್ಸಿಂಗ್ ರಿಮೆಂಬರ್ ಎಂಬರ್ ಎಂಟರಿಂಗ್ ದಿ ಹೆಲ್ ಟಿ ಶೋ ದಿ ಡ್ಯಾಡಿ ಡಿ ಡೇ..
ಧ್ವಂಸ ಅಖಾಡ ಛಿದ್ರ ಮಾಡೋ ಅಟ್ಟಹಾಸ ಕೇಳು ಭೀಕರಾ…
ಕಂಸ ಕಠೋರ ರಕ್ತ ಹೀರೋ ರುದ್ರ ರಕ್ಕಸ ಕಾಲ ಕಿಂಕರ…
ಟ್ರೂಥ್ ಹಾನರ್ ಜಸ್ಟೀಸ್
ಸತ್ಯಮೇವ ಜಯತೆ ರುಧಿರ ಧಾರಾ… ಉಘೇ ಉಘೇ ….
ಮಾರ ಮಾರ ಕದನ ಕ್ರೂರ … ಉಘೇ ಉಘೇ …. ಬಘೀರ ಬಘೀರ



